ಮನೆ ರಾಜ್ಯ ಮೈಸೂರು: ಬೋನಿಗೆ ಬಿದ್ದ ಎರಡು ಚಿರತೆಗಳು

ಮೈಸೂರು: ಬೋನಿಗೆ ಬಿದ್ದ ಎರಡು ಚಿರತೆಗಳು

0

ಮೈಸೂರು: ತಾಲ್ಲೂಕಿನ ಮುಸುವಿನಕೊಪ್ಪಲು‌ ಗ್ರಾಮದಲ್ಲಿ‌ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಎರಡು ಚಿರತೆಗಳು ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.

ವಾರದ ಹಿಂದಷ್ಟೇ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ‌ ಮೇಲೆ ದಾಳಿ ನಡೆಸಿದ್ದ ಚಿರತೆಯು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಬೋನು ಇರಿಸಿತ್ತು. ತಾಯಿ ಚಿರತೆ ಹಾಗೂ ಮರಿ ಚಿರತೆ ಬೋನಿನಲ್ಲಿ ಸೆರೆಯಾಗಿವೆ.

 ಶುಕ್ರವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ನೋಡಲು ಜಮಾಯಿಸಿದ್ದರು. ಡಿಸಿಎಫ್ ಡಾ.ಬಸವರಾಜು, ಎಸಿಎಫ್ ಲಕ್ಷ್ಮಿಕಾಂತ್, ಆರ್ ಎಫ್ಒ ಸೈಯದ್ ನದೀಮ್, ಡಿಆರ್ ಎಫ್ ಒ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು‌.

ಮೈಸೂರಿನ ಅರಣ್ಯ ಭವನಕ್ಕೆ ಒಯ್ಯಲಾಗಿದ್ದು, ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.