ಮನೆ ಸುದ್ದಿ ಜಾಲ ಮತದಾನ ಜಾಗೃತಿ ಕಾರ್ಯಕ್ರಮ

ಮತದಾನ ಜಾಗೃತಿ ಕಾರ್ಯಕ್ರಮ

0

ಮೈಸೂರು: ಮತದಾನವು ಪಿಸ್ತೂಲಿನಲ್ಲಿರುವ ಗುಂಡಿಗಿಂತಲೂ ಪ್ರಭಾವ ಶಾಲಿಯಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಮತದಾನ ಮಾಡಬೇಕು. ಮತವನ್ನು ಮಾರಿಕೊಳ್ಳಬಾರದು, ಮತವನ್ನು ದಾನ ಮಾಡಬೇಕು. ಇದು ದೇಶಕ್ಕೆ ನಾವು ನೀಡುವ ಕೊಡುಗೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ತಿಳಿಸಿದರು.

ವಿಧಾನಸಭಾ ಚುನಾವಣೆ-2023ರ ಹಿನ್ನೆಲೆ ನಂಜನಗೂಡು ತಾಲ್ಲೂಕು ಪಂಚಾಯಿತಿಯಲ್ಲಿ ಮತದಾನ ಜಾಗೃತಿ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಇಂದು ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರುಗಳಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ವಿನೂತನ ರೀತಿಯಲ್ಲಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಬಾರಿ ನಂಜನಗೂಡಿನಲ್ಲಿ ಹೆಚ್ಚು ಮತದಾನವಾಗುವಂತೆ ಎಲ್ಲರೂ ಶ್ರಮಿಸೊಣ. 18 ವರ್ಷ ಮೇಲ್ಪಟ್ಟ ಯಾರೊಬ್ಬರೂ ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಾಧಿಕಾರಿ ಸಿ ಕೆ ಮಹೇಶ್ ಸೇರಿದಂತೆ, ತಾಲ್ಲೂಕಿನ ಎನ್.ಆರ್.ಎಲ್.ಎಂ. ಸಿಬ್ಬಂದಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.