ಮನೆ ಅಂತಾರಾಷ್ಟ್ರೀಯ ಫೆ.18 ರಂದು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಆಗಮಿಸಲಿವೆ 12 ಚೀತಾಗಳು

ಫೆ.18 ರಂದು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಆಗಮಿಸಲಿವೆ 12 ಚೀತಾಗಳು

0

ಮಧ್ಯಪ್ರದೇಶ: ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಎರಡನೇ ಬ್ಯಾಚ್‌’ನ 12 ಚೀತಾಗಳು ಫೆಬ್ರುವರಿ 18ರಂದು ಆಗಮಿಸಲಿವೆ.

6 ತಿಂಗಳ ಹಿಂದೆ ಇದೇ ರಕ್ಷಿತಾರಣ್ಯಕ್ಕೆ 8 ಚೀತಾಗಳನ್ನು ಬಿಡಲಾಗಿತ್ತು. ಸದ್ಯದ ಯೋಜನೆಗಳ ಪ್ರಕಾರ, ಫೆಬ್ರುವರಿ 18ರಂದು ಇನ್ನೂ 12 ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗುತ್ತಿದೆ ಎಂದು ಉದ್ಯಾನದ ಪ್ರಧಾನ ಸಂರಕ್ಷಕ ಅಧಿಕಾರಿ ಜೆ.ಎಸ್. ಚೌಹಾಣ್ ಮಾಹಿತಿ ನೀಡಿದ್ದಾರೆ.

ಮೊದಲು ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಗ್ವಾಲಿಯರ್‌’ಗೆ ತರಲಾಗುತ್ತದೆ, ಬಳಿಕ, ಅವುಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.

ನಿಯಮಗಳ ಪ್ರಕಾರ, ಚೀತಾಗಳನ್ನು ಒಂದು ತಿಂಗಳು ಕ್ವಾರಂಟೈನ್‌’ನಲ್ಲಿ ಇಡಲಾಗುವುದು ಎಂದೂ ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 17ರಂದು ತಮ್ಮ ಹುಟ್ಟುಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ, ನಮೀಬಿಯಾದಿಂದ ತರಲಾಗಿದ್ದ ಮೊದಲ ಬ್ಯಾಚ್‌’ನ 8 ಚೀತಾಗಳನ್ನು(5 ಹೆಣ್ಣು, 3 ಗಂಡು) ಕುನೊ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ವಲಯಕ್ಕೆ ಬಿಡುಗಡೆ ಮಾಡಿದ್ದರು.