ಮನೆ ಕ್ರೀಡೆ WPL: ಐದೂ ತಂಡಗಳ ಬಲಿಷ್ಠ ಪ್ಲೇಯಿಂಗ್ 11 ಮಾಹಿತಿ ಇಲ್ಲಿದೆ

WPL: ಐದೂ ತಂಡಗಳ ಬಲಿಷ್ಠ ಪ್ಲೇಯಿಂಗ್ 11 ಮಾಹಿತಿ ಇಲ್ಲಿದೆ

0

ಬೆಂಗಳೂರು: ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಕ್ರಾಂತಿಕಾರಿ ಬೆಳವಣಿಗೆ ಎಂಬಂತೆ ಮೊತ್ತ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಇನ್ನೇನು ಶುರುವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ನ ಕನಸಿನ ಕೂಸಾಗಿರುವ ಟೂರ್ನಿಯು ಮಾರ್ಚ್ 4ರಿಂದ 24ರವರೆಗೆ ಮುಂಬೈನ ಮೂರು ಕ್ರೀಡಾಂಗಣಗಳಲ್ಲಿ ಆಯೋಜನೆ ಆಗಲಿದೆ.

ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಾಖಲೆಯ 3.4 ಕೋಟಿ ರೂ.ಗಳ ಭಾರಿ ಬೆಲೆ ನೀಡಿ ಸ್ಮೃತಿ ಮಂಧಾನಾ ಅವರನ್ನು ಖರೀದಿ ಮಾಡಿದೆ. ಈ ಮೂಲಕ ಎಡಗೈ ಬ್ಯಾಟರ್ ಮಹಿಳಾ ಐಪಿಎಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ್ತಿ ಆಗಿದ್ದಾರೆ. ಆಸ್ಟ್ರೇಲಿಯಾದ ಆಷ್ಲೇ ಗಾರ್ಡ್ನರ್ 3.2 ಕೋಟಿ ರೂ. ಪಡೆದು ಗುಜರಾತ್ ಜಯಂಟ್ಸ್ ಸೇರಿದರೆ, ಇಂಗ್ಲೆಂಡ್ ನತಾಲಿ ಶಿವರ್ ಅಷ್ಟೇ ಮೊತ್ತ ಪಡೆದು ಮುಂಬೈ ಇಂಡಿಯನ್ಸ್ ಪಾಲಾದರು. ಒಟ್ಟಾರೆ 7 ಗಂಟೆಗೂ ಹೆಚ್ಚು ಕಾಲ ನಡೆದ ಹರಾಜಿನಲ್ಲಿ ಎಲ್ಲಾ ತಂಡಗಳು ಸ್ಟಾರ್ ಕ್ರಿಕೆಟಿಗರನ್ನು ಬೇಟೆಯಾಡಿವೆ. ಇದರ ಬೆನ್ನಲ್ಲೇ ಎಲ್ಲಾ ತಂಡಗಳ ಬಲಿಷ್ಠ ಸಂಭಾವ್ಯ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್

01. ಶಫಾಲಿ ವರ್ಮಾ (ಓಪನರ್)

02. ಸ್ನೇಹಾ ದೀಪ್ತಿ (ಓಪನರ್)

03. ಜೆಮಿಮಾ ರೊಡ್ರಿಗಸ್ (ಬ್ಯಾಟರ್)

04. ಮೆಗ್ ಲ್ಯಾನಿಂಗ್ (ನಾಯಕಿ/ ಬ್ಯಾಟರ್)

05. ಅಲೈಸ್ ಕ್ಯಾಪ್ಸಿ (ಆಲ್ ರೌಂಡರ್)

06. ಮರಿಜಾನ್ನೆ ಕಾಪ್ (ಆಲ್ ರೌಂಡರ್)

07. ತಾನ್ಯಾ ಭಾಟಿಯಾ (ವಿಕೆಟ್ ಕೀಪರ್/ ಬ್ಯಾಟರ್)

08. ರಾಧಾ ಯಾದವ್ (ಆಲ್ ರೌಂಡರ್)

09. ತಾರಾ ನಾರ್ರಿಸ್ (ಬೌಲರ್)

10. ಶಿಖಾ ಪಾಂಡೆ (ಬೌಲರ್)

11. ಜೆಸ್ ಜೊನಾಸೆನ್ (ಬೌಲರ್)

ಗುಜರಾತ್ ಜಯಂಟ್ಸ್

01. ಬೆತ್ ಮೂನಿ (ವಿಕೆಟ್ ಕೀಪರ್/ ನಾಯಕಿ)

02. ಡಿಯಾಂಡ್ರಾ ಡಾಟಿನ್ (ಓಪನರ್)

03. ಸಬ್ಬಿನೇನಿ ಮೇಘನಾ (ಆಲ್ ರೌಂಡರ್)

04. ಹರ್ಲೀನ್ ಡಿಯೋಲ್ (ಆಲ್ ರೌಂಡರ್)

05. ಹರ್ಲಿ ಗಾಲಾ (ಆಲ್ ರೌಂಡರ್)

06. ದಯಾಲನ್ ಹೇಮಲತಾ (ಆಲ್ ರೌಂಡರ್)

07. ಸ್ನೇಹ ರಾಣಾ (ಆಲ್ ರೌಂಡರ್)

08. ಆಷ್ಲೇ ಗಾರ್ಡ್ನರ್ (ಆಲ್ ರೌಂಡರ್)

09. ಅನ್ನಾಬೆಲ್ ಸದರ್ಲ್ಯಾಂಡ್ (ಬೌಲರ್)

10. ಮಾನ್ಸಿ ಜೋಶಿ (ಬೌಲರ್)

11. ತನುಜಾ ಕನ್ವರ್ (ಬೌಲರ್)

ಮುಂಬೈ ಇಂಡಿಯನ್ಸ್

01. ಯಾಸ್ತಿಕಾ ಭಾಟಿಯಾ (ವಿಕೆಟ್ಕೀಪರ್/ ಓಪನರ್)

02. ಧಾರಾ ಗುಜ್ಜರ್ (ಓಪನರ್)

03. ಹೇಲಿ ಮ್ಯಾಥ್ಯೂ (ಬ್ಯಾಟರ್)

04. ಹರ್ಮನ್ಪ್ರೀತ್ ಕೌರ್ (ನಾಯಕಿ)

05. ನತಾಲಿ ಶಿವರ್ (ಆಲ್ ರೌಂಡರ್)

06. ಅಮನ್ಜೋತ್ ಕೌರ್ (ಆಲ್ ರೌಂಡರ್)

07. ಪೂಜಾ ವಸ್ತ್ರಾಕರ್ (ಆಲ್ ರೌಂಡರ್)

08. ಎಮೆಲಿಯಾ ಕೆರ್ (ಆಲ್ರೌಂಡರ್)

09. ಸೋನಮ್ ಯಾದವ್ (ಬೌಲರ್)

10. ಇಸ್ಸಿ ವಾಂಗ್ (ಬೌಲರ್)

11. ಸೈಕಾ ಇಶಾಕ್ (ಬೌಲರ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು

01. ಸ್ಮೃತಿ ಮಂಧಾನಾ (ನಾಯಕಿ/ ಓಪನರ್)

02. ಸೋಫಿ ಡಿವೈನ್ (ಓಪನರ್)

03. ಎಲೀಸ್ ಪೆರಿ (ಆಲ್ ರೌಂಡರ್)

04. ದಿಶಾ ಕಸತ್ (ಬ್ಯಾಟರ್)

05. ರಿಚಾ ಘೋಷ್ (ವಿಕೆಟ್ ಕೀಪರ್)

06. ಡೇನ್ ವ್ಯಾನ್ ನೀಕೆರ್ಕ್(ಆಲ್ ರೌಂಡರ್)

07. ಕನಿಕಾ ಅಹುಜಾ (ಆಲ್ ರೌಂಡರ್)

08. ಮೇಗನ್ ಶುಟ್ (ಆಲ್ ರೌಂಡರ್)

09. ರೇಣುಕಾ ಠಾಕೂರ್ (ಬೌಲರ್)

10. ಪ್ರೀತಿ ಬೋಸ್ (ಬೌಲರ್)

11. ಪೂನಂ ಖೇಮ್ನಾರ್ (ಬೌಲರ್)

ಯು.ಪಿ ವಾರಿಯರ್ಸ್

01. ಅಲಿಸಾ ಹೀಲಿ (ವಿಕೆಟ್ ಕೀಪರ್/ ಓಪನರ್)

02. ಶ್ವೇತಾ ಸೆಹ್ರಾವತ್ (ಓಪನರ್)

03. ಕಿರಣ್ ನವಗಿರೆ (ಬ್ಯಾಟರ್)

04. ತಹ್ಲಿಯಾ ಮೆಗ್ರಾತ್ (ಆಲ್ ರೌಂಡರ್)

05. ದೀಪ್ತಿ ಶರ್ಮಾ (ನಾಯಕಿ)

06. ದೇವಿಕಾ ವೈದ್ಯ (ಆಲ್ ರೌಂಡರ್)

07. ಶಬ್ನಿಮ್ ಇಸ್ಮಾಯಿಲ್ (ಆಲ್ ರೌಂಡರ್)

08. ಪಾರ್ಶವಿ ಚೋಪ್ರಾ (ಬೌಲರ್)

09. ರಾಜೇಶ್ವರಿ ಗಾಯಕ್ವಾಡ್ (ಬೌಲರ್)

10. ಸೋಫಿ ಎಕ್ಲೆಸ್ಟೋನ್ (ಬೌಲರ್)

11. ಅಂಜಲಿ ಸರ್ವಾಣಿ (ಬೌಲರ್)