ಮನೆ ಮನರಂಜನೆ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ

ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ

0

ಕಾಂತಾರ’ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಸಿಕ್ಕಿದೆ.

ಇದು ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಯಲ್ಲ, ಬದಲಾಗಿ ಖಾಸಗಿ ಸಂಸ್ಥೆಯ ಪ್ರಶಸ್ತಿಯಾಗಿದೆ.

ರಿಷಬ್ ಶೆಟ್ಟಿ ಅವರಿಗೆ ‘ಅತ್ಯಂತ ಭರವಸೆಯ ನಟ’ ವಿಭಾಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಪ್ರಶಸ್ತಿ ದೊರಕಿದೆ. ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ಇದೇ ತಿಂಗಳ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌’ನಲ್ಲಿ ನಡೆಯಲಿದೆ.

ಅನೇಕರು ರಿಷಬ್ ಶೆಟ್ಟಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ದೊಡ್ಡ ಮಟ್ಟದ ಯಶಸ್ಸು ಕಂಡ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಸರಿ ಸುಮಾರು 17 ಕೋಟಿ ರೂಪಾಯಿ ಬಜೆಟ್ನಲ್ಲಿ ‘ಕಾಂತಾರ’ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾ ಬರೋಬ್ಬರಿ 450 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಇಡೀ ಚಿತ್ರದ ಶೂಟಿಂಗ್ ರಿಷಬ್ ಶೆಟ್ಟಿ ಅವರ ಊರು ಕೆರಾಡಿಯಲ್ಲಿ ನಡೆದಿತ್ತು.

ರಾಜ್‌ ಕುಮಾರ್‌ ಗೆ ಸಿಕ್ಕ ಪ್ರಶಸ್ತಿ ಬೇರೆ, ಈ ಪ್ರಶಸ್ತಿ ಬೇರೆ

ಇನ್ನು ಕನ್ನಡ ಚಲನಚಿತ್ರರಂಗದ ವರನಟ ಡಾ ರಾಜ್‌ಕುಮಾರ್ ಅವರಿಗೆ ನೀಡಲಾಗಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಚಿತ್ರರಂಗದ ಕಲಾವಿದರ ಶ್ರಮವನ್ನು ಗುರುತಿಸಿ ಹುರಿದುಂಬಿಸಲು ನೀಡುವ ಈ ಪ್ರಶಸ್ತಿಗಳಿಗೂ ಬೃಹತ್ ವ್ಯತ್ಯಾಸವಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಹಾ ಸಾಧನೆ ಮಾಡಿದ ಸಾಧಕರಿಗೆ ವರ್ಷಕ್ಕೊಮ್ಮೆ ನೀಡಿದರೆ, ಈ ದಾದಾ ಸಾಹೇಬ್ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಅನ್ನು ಅಕಾಡೆಮಿ ಆಯಾ ವರ್ಷ ತಮ್ಮ ಉತ್ತಮ ಚಿತ್ರಗಳ ಮೂಲಕ ಮಿಂಚಿದ ಕಲಾವಿದರಿಗೆ ನೀಡಲಾಗುತ್ತದೆ.