ನವದೆಹಲಿ: ಟೀಮ್ ಇಂಡಿಯಾವು ಐಸಿಸಿ ಟೆಸ್ಟ್, ಏಕದಿನ ಹಾಗೂ ಟಿ20 ರ‍್ಯಾಂಕಿಂಗ್’ನಲ್ಲಿ ಆಗ್ರಸ್ಥಾನ ಉಳಿಸಿಕೊಂಡಿದೆ.
ಟೆಸ್ಟ್ ಮಾದರಿಯಲ್ಲಿ ಭಾರತ 115 ಪಾಯಿಂಟ್ಸ್ ಹೊಂದಿದೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 111 ಪಾಯಿಂಟ್ಸ್ ಪಡೆದಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ 106 ಪಾಯಿಂಟ್ಸ್ ಗಳಿಸಿದೆ. ಏಕದಿನ ಮಾದರಿಯಲ್ಲಿ 114 ಪಾಯಿಂಟ್ಸ್ ಹೊಂದಿರುವ ಭಾರತ ಆಗ್ರಸ್ಥಾನದಲ್ಲಿದೆ.
ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 112 ಪಾಯಿಂಟ್ಸ್ ಪಡೆದಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 111 ಪಾಯಿಂಟ್ಸ್ ಗಳಿಸಿದೆ.
ಉಳಿದಂತೆ ಟಿ20 ಮಾದರಿಯಲ್ಲಿ 267 ಪಾಯಿಂಟ್ಸ್ ಹೊಂದಿರುವ ಭಾರತ ಆಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ 266 ಪಾಯಿಂಟ್ಸ್ ಪಡೆದಿದೆ. ಪಾಕಿಸ್ತಾನ 258 ಪಾಯಿಂಟ್ಸ್’ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ಜಯದೊಂದಿಗೆ ಭಾರತ ತಂಡ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.
ಮುಂದಿನ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಫೆಬ್ರುವರಿ 17ರಿಂದ 21ರ ವರೆಗೆ ನಡೆಯಲಿದೆ.