ಮನೆ ದೇವರ ನಾಮ ಆವ ಜನ್ಮದ ಪುಣ್ಯ ಫಲಿಸಿತೆನಗೆ

ಆವ ಜನ್ಮದ ಪುಣ್ಯ ಫಲಿಸಿತೆನಗೆ

0

ರಚನೆ : ಶ್ರೀ ವಿಜಯದಾಸರು

ಆವ ಜನ್ಮದ ಪುಣ್ಯ ಫಲಿಸಿತೆನಗೆ |

ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ

ಲವಣವನು ಸವಿದುಣಲು | ಬಲುಜನ್ಮದಲಿಯಿದ್ದ

ಭವರಾಸಿಗಳು ಹಾರಿ ಬಯಲಾದವು |

ನವವಿಧ ಭಕುತಿಯಾ ಮಾರ್ಗವನೆ ತಿಳಿದು |

ಮಾನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ

ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ |

ಶೋಕವನೆ ಬಂದಿರಲು ಬೆನ್ನು ಬಟ್ಟು |

ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು |

ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ

ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ |

ಆಪತ್ತು ಕಳವಳಿಸಿ ಹಿಂದಾದವು |

ಭಾಪುರೆ ಮೋಕ್ಷಮಾರ್ಗಕ್ಕೆ

ಸೋಪಾನ ದೊರಕಿದವು ಏನೆಂಬೆ

ಸೋಜಿಗವು ಬಲು ತೀವ್ರದಲಿ

ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ |

ಅಕ್ಷಯವಾಗುವದು ಇದ್ದ ಪುಣ್ಯ |

ಅಕ್ಷರ ವಂಚನಾಗಿ ಸರ್ವದಾ ಮೋಕ್ಷಸಾಧನ

ಮಾಳ್ಪ ಮನಸು ಪುಟ್ಟಿತು ನೋಡಾ

ಓದನವು ಉದರದಲಿ ತುಂಬಲಾಕ್ಷಣದಲ್ಲಿ |

ಸಾಧುಗಳ ಸಂಗತಿ ಘಟಿಸುವದು | ಭೇದಾರ್ಥ

ಜ್ಞಾನ ಬಂದೊದಗುವದು ಗುರು ಪೂರ್ಣ |

ಬೋಧರಾ ಮತದಲ್ಲಿ ಲೋಲಾಡುವಾನಂದಾ

ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು |

ಹಿತವಾಗಿ ಸಕಲ ಇಂದ್ರಿಯಂಗಳು |

ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ |

ರತಿಪತಿಪಿತನ ಪದಸೇವೆಯೊಳಗಿಪ್ಪವೊ ||6||

ಕೃಷ್ಣ ಸಂದರುಶನ ಮೃಷ್ಟಾನ ಭೋಜನ |

ಕಷ್ಟನಾಶನ ಸರ್ವ ಕರ್ಮಕಧಿಕಾ |

ಇಷ್ಟ ಸುಖ ಸೌಖ್ಯಕರ ಮತ್ತಾವಲ್ಲಿ ಕಾಣೆ |

ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ