ಮನೆ ರಾಜಕೀಯ ಉತ್ತರಪ್ರದೇಶದ ಸ್ಟ್ರಾಂಗ್ ರೂಮ್‌ಗಳಲ್ಲಿ ‘ಇವಿಎಂ’ ಗೋಲ್ ಮಾಲ್ ಸಾಧ್ಯತೆ: ಅಖಿಲೇಶ್ ಯಾದವ್

ಉತ್ತರಪ್ರದೇಶದ ಸ್ಟ್ರಾಂಗ್ ರೂಮ್‌ಗಳಲ್ಲಿ ‘ಇವಿಎಂ’ ಗೋಲ್ ಮಾಲ್ ಸಾಧ್ಯತೆ: ಅಖಿಲೇಶ್ ಯಾದವ್

0

ಬೆಂಗಳೂರು: ಉತ್ತರಪ್ರದೇಶದ ಸ್ಟ್ರಾಂಗ್ ರೂಮ್‌ನಿಂದ ಎಲೆಕ್ಟ್ರಾನಿಕ್ ಮತಯಂತ್ರಗಳು ಅಥವಾ ಇವಿಎಂಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗಿದೆ ಎಂಬ ಆರೋಪವನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ಮತ ಎಣಿಕೆ ನಡೆಯುತ್ತಿರುವಂತೆಯೇ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದು, ಸಮಾಜವಾದಿ ಪಕ್ಷ ಹಾಗೂ ಮೈತ್ರಿಕೂಟದ ಪ್ರತಿಯೊಬ್ಬ ಕಾರ್ಯಕರ್ತರು, ಬೆಂಬಲಿಗರು, ನಾಯಕರು, ಪದಾಧಿಕಾರಿಗಳು ಮತ್ತು ಹಿತೈಷಿಗಳಿಗೆ ಹಗಲು ರಾತ್ರಿ ಎಚ್ಚರದಿಂದ ಮತ್ತು ಕ್ರಿಯಾಶೀಲರಾಗಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಉತ್ತ್ತರಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎನ್ನುವುದು ಆರಂಭಿಕ ಮುನ್ನಡೆ ತೋರಿಸುತ್ತದೆ. “ಪರೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ, ನಿರ್ಧಾರಗಳ ಸಮಯ ಬಂದಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.