ಮನೆ ಆರೋಗ್ಯ ಬಿಪಿ ಹಾಗೂ ಹೃದಯದ ಸಮಸ್ಯೆ ಇರುವ ರೋಗಿಗಳು ಮೊಟ್ಟೆ ತಿನ್ನಬಹುದಾ?

ಬಿಪಿ ಹಾಗೂ ಹೃದಯದ ಸಮಸ್ಯೆ ಇರುವ ರೋಗಿಗಳು ಮೊಟ್ಟೆ ತಿನ್ನಬಹುದಾ?

0

ಸಕ್ಕರೆಕಾಯಿಲೆ ಇರುವವರು, ರಕ್ತದ ಒತ್ತಡ ಇರುವವರು ಅದೇ ರೀತಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಹೊಂದಿದವರು, ತಮ್ಮ ದೈನಂದಿನ ಆಹಾರ ಪದ್ಧತಿ ಹಾಗೂ ಸರಿಯಾದ ಜೀವನಶೈಲಿ ಬಹಳ ಮುಖ್ಯವಾಗುತ್ತದೆ.

ಒಂದು ವೇಳೆ ಇಂತಹ ಅಭ್ಯಾಸಗಳು ಇಲ್ಲದೆ ಪ್ರತಿದಿನ ಜೀವನ ಕಳೆಯಲು ಮುಂದಾದರೆ, ಅದರಿಂದ ಇಂತಹ ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.

•   ಪ್ರತಿದಿನ ಒಂದೊಂದು ಬೇಯಿಸಿದ ಮೊಟ್ಟೆ ತಿನ್ನಿ ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ! ಪ್ರಮುಖ ವಾಗಿ ಮೊಟ್ಟೆ ಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ಪ್ರೋಟೀನ್, ಖನಿಜಾಂಶಗಳು ಕಂಡು ಬರುತ್ತದೆ.

•   ಆದರೆ ಮೊಟ್ಟೆಯಲ್ಲಿ ಕೊಬ್ಬಿನಾಂಶ ಹಾಗೂ ಕೊಲೆ ಸ್ಟ್ರಾಲ್ ಅಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಈಗಾಗಲೇ ಬಿಪಿ ಹಾಗು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಇದ್ದವರು ಮೊಟ್ಟೆ ತಿನ್ನ ಬಹುದೇ ಎನ್ನುವ ಗೊಂದಲು ಹಲವು ಜನರಿಗೆ ಇದೆ.

ನಿಜ ಸಂಗತಿ ನಿಮಗೆ ಗೊತ್ತಿರಲಿ..

•   ಸಾಮಾನ್ಯವಾಗಿ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಾಂಶ ಇರುವುದರಿಂದ, ಬಿಪಿ ಇದ್ದವರಿಗೆ ಹಾಗೂ ಹೃದಯದ ಸಮಸ್ಯೆ ಇದ್ದವರಿಗೆ ಒಳ್ಳೆಯದಲ್ಲ ಎನ್ನುವ ಭಾವನೆ ಹೆಚ್ಚಿನವರಿಗೆ ಇದೆ.

•   ಆದರೆ ನಿಮಗೆ ಗೊತ್ತಿರಲಿ, ಹೃದಯದ ಆರೋಗ್ಯಕ್ಕೆ ಬೇಕಾಗುವಒಳ್ಳೆಯ ಕೊಲೆಸ್ಟ್ರಾಲ್ ಅಂಶ ಮೊಟ್ಟೆಯಲ್ಲಿ ಸಿಗುತ್ತದೆ. ಅಲ್ಲದೆ ಒಳ್ಳೆಯ ಕೊಬ್ಬಿನಾಂಶ ಇದರಲ್ಲಿ ಕಂಡ ಬರುತ್ತದೆ.

•   ಇದರಿಂದ, ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಹೆಚ್ಚಾಗದೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಕೂಡ ಹೆಚ್ಚಾಗು ವುದಿಲ್ಲ. ಹೀಗಾಗಿ ದಿನಕೊಮ್ಮೆ ಅಥವಾ ಎರಡು ದಿನಕೊಮ್ಮೆ ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಮೊಟ್ಟೆಯ ಬಗ್ಗೆ ಹೇಳುವುದಾದರೆ

•   ನೋಡಲು ಸಣ್ಣಗೆ ಇದ್ದು ಗುಂಟಗೆ ಇದ್ದರೂ ಮೊಟ್ಟೆ ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಸಮತೋಲನ ಆಹಾರ ಪದ್ಧತಿಯಲ್ಲಿ ಮೊಟ್ಟೆ ಗಳಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ.

•   ಪ್ರಮುಖವಾಗಿ ಒಂದು ಮೊಟ್ಟೆಯಲ್ಲಿ ಸರಿಸುಮಾರು 6 ಗ್ರಾಂನಷ್ಟು ಪ್ರೋಟೀನ್ ಅಂಶಗಳು ಕಂಡು ಬರುವುದರ ಜೊತೆಗೆ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಅಮೈ ನೋ ಆಮ್ಲಗಳ ಅಂಶಗಳು ಕೂಡ ಸಾಕಷ್ಟು ಪ್ರಮಾಣ ದಲ್ಲಿ ಕಂಡು ಬರುತ್ತದೆ.

•   ಅಷ್ಟೇ ಅಲ್ಲದೆ ಇದರಲ್ಲಿ ಕಂಡು ಬರುವ ವಿಟಮಿನ್ಸ್ ಗಳು, ಖನಿಜಾಂಶಗಳು, ಕಬ್ಬಿಣಾಂಶ, ಜಿಂಕ್ ಮತ್ತು ಫಾಸ್ಪರಸ್ ಅಂಶಗಳು, ಮನುಷ್ಯನ ಆರೋಗ್ಯವೃದ್ಧಿಗೆ ಬಹಳ ಉಪಕಾರಿ ಎಂದು ಹೇಳಬಹುದು

•   ಆದರೆ ನೆನಪಿಡಿ ಬಹಳ ಸೂಕ್ಷ್ಮವಾಗಿ ಇರುವಂತಹ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮಾತ್ರ ಮೊಟ್ಟೆ ತಿನ್ನುವ ವಿಷ್ಯದಲ್ಲಿ ಎಚ್ಚರಿಗೆ ವಹಿಸಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಒಮ್ಮೆ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ.

ಈ ವಿಷ್ಯ ನಿಮಗೆ ಗೊತ್ತಿರಲಿ

•   ಮೊಟ್ಟೆಯನ್ನು ಜಾಸ್ತಿ ಮಸಾಲೆಯುಕ್ತ ಅಥವಾ ಎಣ್ಣೆಯಾಂಶ ಇರುವ ಆಹಾರ ಪದಾರ್ಥಗಳ ಜೊತೆಗೆ ಸೇವಿಸಬೇಡಿ..

•   ಉದಾಹರಣೆಗೆ ಎಗ್ ಮಸಾಲೆ! ಯಾಕೆಂದರೆ ಇದರಲ್ಲಿ ಮಸಾಲೆ ಪದಾರ್ಥಗಳು ಹಾಗೂ ಎಣ್ಣೆಯಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಪ್ರಮುಖವಾಗಿ ಎಣ್ಣೆಯಾಂಶ ಇರುವ ಯಾವುದೇ ಆಹಾರ ಪದಾರ್ಥಗಳು ಹೃದಯದ ಸಮಸ್ಯೆ ಹಾಗೂ ಬಿಪಿ ಇರುವ ರೋಗಿಗಳಿಗೆ ಒಳ್ಳೆಯದಲ್ಲ!

•   ಇದರ ಬದಲು, ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಳ್ಳಿ ಅಥವಾ ತರಕಾರಿ ಮಿಶ್ರಿತ ಮೊಟ್ಟೆಯ ಆಮ್ಲೆಟ್ ತಯಾರು ಮಾಡಿ ಸೇವನೆ ಮಾಡಿದರೂ ಆರೋಗ್ಯಕ್ಕೆ ಒಳ್ಳೆಯದು.