ಮೈಸೂರು: ರಾಜ್ಯ ಸರ್ಕಾರವು 2017-18ನೇ ಸಾಲಿನಲ್ಲಿ ತಿ.ನರಸೀಪುರ ಹಾಗೂ ಇನ್ನಿತರ ಸ್ಥಳಗಳಿಗೆ ಮಂಜೂರಾಗಿದ್ದ ಪಾಲಿಟೆಕ್ನಿಕ್ ಕಾಲೇಜುಗಳನ್ನು ಅನಗತ್ಯ ಕಾರಣ ಹೇಳಿ ಸ್ಥಳಾಂತರ ಮಾಡಿರುವುದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಬಡ ಮಕ್ಕಳಿಗೆ ವೃತ್ತಿ ಶಿಕ್ಷಣವು ಒಂದು ಮಟ್ಟಿನ ಔದ್ಯೋಗಿಕ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ಈ ಸಂಗತಿಯು ಬಹಳಷ್ಟು ಮಹತ್ವವಾಗಿದ್ದರೂ ಸರ್ಕಾರ ಇದನ್ನು ಕಡೆಗಣಿಸಿದೆ. ಸ್ಥಳಾಂತರದ ಬದಲಿಗೆ ಪಾಲಿಟೆಕ್ನಿಕ್ ಕಾಲೇಜುಗಳ ಅಗತ್ಯ ಇರುವ ಸ್ಥಳಗಳಿಗೆ ಹೊಸದಾಗಿ ಕಲ್ಪಿಸುವುದು ಸೂಕ್ತವಾಗುತ್ತದೆ. ಸರ್ಕಾರ ಆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ತಿ.ನರಸೀಪುರ ಕ್ಷೇತ್ರದಿಂದ ಪಾಲಿಟೆಕ್ನಿಕ್ ಕಾಲೇಜಿನ ಸ್ಥಳಾಂತರ ಆದೇಶವನ್ನು ಮುಖ್ಯಮಂತ್ರಿ ರದ್ದುಪಡಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.