ಮನೆ ದೇವಸ್ಥಾನ ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ನಿರೀಕ್ಷೆ :...

ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ನಿರೀಕ್ಷೆ : ಸಿಎಂ ಬೊಮ್ಮಾಯಿ

0

ಬೇಲೂರು:  ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಅಧಿಕೃತ ಘೋಷಣೆಯಾದಲ್ಲಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವಯುತ ಕೊಡುಗೆ ನೀಡುವುದಲ್ಲದೇ, ಬೇಲೂರು ಹಳೇಬೀಡು ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಅವರು ಇಂದು  ಶ್ರೀ ಚೆನ್ನಕೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಬೇಲೂರು ಶ್ರೀ ಚೆನ್ನಕೇಶವ ದೇಗುಲ ಕರ್ನಾಟಕದ ಹೆಮ್ಮೆಯಾಗಿದ್ದು, ಇಲ್ಲಿನ ಶಿಲ್ಪಕಲೆ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿದೆ. ಬೇಲೂರು ಶ್ರೀ ಚೆನ್ನಕೇಶವ ದೇಗುಲವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಂಬಂಧಪಟ್ಟ ಇತಿಹಾಸ , ದಾಖಲೆಗಳನ್ನು ಈಗಾಗಲೇ ಸರ್ಕಾರ ಸಲ್ಲಿಸಿದೆ. ಕೆಲವೇ ತಿಂಗಳಲ್ಲಿ ಯುನೆಸ್ಕೊ ಪಟ್ಟಿಯಲ್ಲಿ ಸೇರುವ ಮೂಲಕ, ಈ ತಾಣದಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಜೊತೆಗೆ ಹೆಚ್ಚಿನ ಅನುದಾನ ದೊರೆಯಲಿದ್ದು, ದೇಶ ವಿದೇಶಗಳಿಂದ ಭೇಟಿ ನೀಡುವ ಪ್ರವಾಸಿಗರು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದರು.