ಮನೆ ಆರೋಗ್ಯ ನೆನೆಸಿದ ಅಥವಾ ಹಸಿ ಬಾದಾಮಿ ಇವುಗಳಲ್ಲಿ ಯಾವುದು ಬೇಗ ತೂಕ ಕಮ್ಮಿ ಮಾಡುತ್ತೆ?

ನೆನೆಸಿದ ಅಥವಾ ಹಸಿ ಬಾದಾಮಿ ಇವುಗಳಲ್ಲಿ ಯಾವುದು ಬೇಗ ತೂಕ ಕಮ್ಮಿ ಮಾಡುತ್ತೆ?

0

ನಾವು ಸೇವಿಸುವ ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಬೀಜಗಳು ಸಹ ಒಂದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರು ಬೇಕಾದರೂ ಇವುಗಳನ್ನು ಸೇವಿಸಬಹುದು.

ಏಕೆಂದರೆ ಹಲವಾರು ವಿಧಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಬಾದಾಮಿ ನಮ್ಮ ದೇಹದ ಶಕ್ತಿ ಮತ್ತು ಚೈತನ್ಯಕ್ಕೆ ಬೇಕಾದ ಎಲ್ಲಾ ಬಗೆಯ ಅಗತ್ಯ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರಲ್ಲಿ ಫೈಬರ್, ಪ್ರೋಟೀನ್, ವಿಟಮಿನ್, ಆಂಟಿ ಆಕ್ಸಿಡೆಂಟ್ ಮತ್ತು ಖನಿಜಾಂಶಗಳ ಪ್ರಮಾಣ ಹೇರಳವಾಗಿದೆ. ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ತ್ವಚೆಯ ಆರೋಗ್ಯವನ್ನು ಕಾಪಾಡಿ ಹೃದಯದ ಆರೋಗ್ಯಕ್ಕೆ ಸಾಕಷ್ಟು ನೆರವಾಗುತ್ತದೆ.

ಹೊಟ್ಟೆ ಹಸಿವಿನ ನಿವಾರಣೆಯಲ್ಲಿ…

• ಹೊಟ್ಟೆ ಹಸಿವಿನ ನಿವಾರಣೆಯಲ್ಲೂ ಬಾದಾಮಿ ಬೀಜಗಳ ಪಾತ್ರವನ್ನು ಮರೆಯುವಂತಿಲ್ಲ. ಹಾಗಾಗಿ ಇದನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ತಿನ್ನಬಹುದಾ ಎಂಬ ಪ್ರಶ್ನೆ ಹಲವರಿಗಿದೆ.

• ಬಾದಾಮಿ ಬೀಜಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಜೊತೆಗೆ ಅನಾರೋ ಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಹೊರಟು ಹೋಗುತ್ತದೆ.

ಆದರೆ ಇಲ್ಲಿ ಗೊಂದಲ ಏನೆಂದರೆ…

• ಆದರೆ ಸದ್ಯಕ್ಕಿರುವ ಒಂದು ಗೊಂದಲ ಎಂದರೆ ಬಾದಾಮಿ ಬೀಜಗಳನ್ನು ಹಸಿಯಾಗಿ ಹಾಗೆ ತಿಂದರೆ ಒಳ್ಳೆಯದಾ ಅಥವಾ ನೀರಿನಲ್ಲಿ ನೆನೆಹಾಕಿ ಸೇವನೆ ಮಾಡಿದರೆ ಒಳ್ಳೆಯದಾ ಎಂದು.

• ಇದಕ್ಕೆ ದೈಹಿಕ ಸ್ವಾಸ್ಥ್ಯ ತಜ್ಞರಾದ ಡಾ. ಸ್ನೇಹಲ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಈ ರೀತಿ ಉತ್ತರಿಸಿದ್ದಾರೆ.

ತೂಕ ಕಡಿಮೆ ಮಾಡುವಲ್ಲಿ ಬಾದಾಮಿ ಪಾತ್ರ

ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಜೀ ರ್ಣತೆ, ಮಲಬದ್ಧತೆ ತೊಂದರೆಯಿಂದ ದೂರ ಮಾಡುತ್ತದೆ. ಹಾಗಾಗಿ ಬಾದಾಮಿ ಬೀಜಗಳು ಸಿಪ್ಪೆ ಸಹಿತ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಕೊಡುತ್ತವೆ ಎಂದು ಹೇಳಿದ್ದಾರೆ.

ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸಮಸ್ಯೆ ಕಾಣಿಸುತ್ತದೆ!

• ಆದರೆ ಒಬ್ಬೊಬ್ಬರ ದೇಹ ಪ್ರಕ್ರಿಯೆ ಒಂದೊಂದು ರೀತಿ ಇರುವುದರಿಂದ ಹಸಿ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ ವಿವಿಧ ಜನರಿಗೆ ವಿವಿಧ ಬಗೆಯ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ತೊಂದರೆಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಸಿಪ್ಪೆಗಳ ಹೊರತಾಗಿ ಬಾದಾಮಿ ಬೀಜಗಳನ್ನು ಸೇವಿಸಬಹುದು.

• ನೆನೆ ಹಾಕಿದ ಅಥವಾ ಸಿಪ್ಪೆ ತೆಗೆದ ಬಾದಾಮಿ ಬೀಜ ಗಳು ಸಹ ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಕೊಡುತ್ತವೆ.

• ಇಡೀ ರಾತ್ರಿ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹ ಸಾಕಷ್ಟು ಬಗೆಯ ಪೌಷ್ಟಿ ಕಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ಸಂಜೆಯ ಸ್ನಾಕ್ಸ್ ಸಮಯದಲ್ಲಿ ಬಾದಾಮಿ

• ಆರೋಗ್ಯ ತಜ್ಞರಾದ ಡಾ. ಸ್ನೇಹಲ್ ಹೇಳುವ ಪ್ರಕಾರ ನೀರಿನಲ್ಲಿ ನೆನೆಹಾಕಿ ಸಿಪ್ಪೆ ಸುಲಿದ ಅಥವಾ ಸಿಪ್ಪೆ ಸುಲಿಯದೆ ಇರುವ ಬಾದಾಮಿ ಬೀಜಗಳನ್ನು ಸಂಜೆಯ ಸ್ನಾಕ್ಸ್ ಸಮಯದಲ್ಲಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು.

• ಇದರಿಂದ ಸಿಕ್ಕಸಿಕ್ಕ ಅನಾರೋಗ್ಯಕರ ಆಹಾರಗಳನ್ನು ತಿನ್ನುವುದು ತಪ್ಪುತ್ತದೆ ಮತ್ತು ಆರೋಗ್ಯ ವಿಶೇಷ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ.

• ಅಷ್ಟೇ ಅಲ್ಲದೆ ಕೆಲಸದ ಮಧ್ಯೆ ಕೂಡ ಆಗಾಗ ಬಾದಾಮಿ ಬೀಜಗಳನ್ನು ಸೇವಿಸಿ ದೇಹದ ತೂಕವನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು.

ಕೊನೆಯ ಮಾತು…

• ಮನೆಮನೆಗಳಲ್ಲಿ ಸುಲಭವಾಗಿ ಲಭ್ಯವಾಗುವ ಬಾದಾಮಿ ಬೀಜಗಳನ್ನು ಇನ್ನು ಬೇರೆ ಬೇರೆ ರೀತಿಯ ಆಹಾರ ಪದಾ ರ್ಥ ಗಳಲ್ಲಿ ಬಳಕೆ ಮಾಡಬಹುದಾಗಿದೆ. ಬಾದಾಮಿ ಹಾಲಿನಿಂದ ಹಿಡಿದು ಶಕ್ತಿ ವರ್ಧಕ ಪಾನೀಯಗಳಲ್ಲಿ ಕೂಡ ಬಾದಾಮಿ ಬೀಜಗಳನ್ನು ಕಾಣಬಹುದು.

• ಅಷ್ಟೇ ಅಲ್ಲದೆ ದಿನನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಬಾದಾಮಿ ಬೀಜಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ.

• ಸ್ವಲ್ಪ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಸೇರಿಸಿದ ಹುರಿದ ರೂಪದ ಬಾದಾಮಿ ಬೀಜಗಳು ಸಹ ಆರೋಗ್ಯಕ್ಕೆ ಬಹಳ ಅನುಕೂಲಕರ.