ಮನೆ ರಾಜ್ಯ ಗ್ರಾಚ್ಯುಯಿಟಿ ಪಾವತಿಗೆ ಆಗ್ರಹಿಸಿ ಹಾಪ್‌ ಕಾಮ್ಸ್‌ ಸಿಬ್ಬಂದಿ ಪ್ರತಿಭಟನೆ

ಗ್ರಾಚ್ಯುಯಿಟಿ ಪಾವತಿಗೆ ಆಗ್ರಹಿಸಿ ಹಾಪ್‌ ಕಾಮ್ಸ್‌ ಸಿಬ್ಬಂದಿ ಪ್ರತಿಭಟನೆ

0

ಮೈಸೂರು: ಜಿಲ್ಲಾ ಹಾಪ್‌’ಕಾಮ್ಸ್‌’ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ 2003ರ ಒಪ್ಪಂದದಂತೆ ಗ್ರಾಚ್ಯುಯಿಟಿ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಹಾಪ್‌ ಕಾಮ್ಸ್‌ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಕರ್ಜನ್‌ ಉದ್ಯಾನದ ಸಂಸ್ಥೆಯ ಕಚೇರಿಯ ಎದುರು ಜಮಾಯಿಸಿದ ಹತ್ತಾರು ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಬೆಂಗಳೂರು ಹಾಪ್‌’ಕಾಮ್ಸ್‌’ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅನ್ವಯವಾಗುವ ಸೇವಾ ನಿಯಮವನ್ನೇ ರಾಜ್ಯದಾದ್ಯಂತ ಜಾರಿಗೊಳಿಸಬೇಕು. ಮೇ 2022ರ ವರೆಗೆ ನಿವೃತ್ತರಾದವರಿಗೆ 16.5 ತಿಂಗಳಿಗೆ ಗ್ರಾಚುಯಿಟಿ ಪಾವತಿಸಲಾಗಿದ್ದು, ನಂತರ ನಿವೃತ್ತರಾದ ನೌಕರರಿಗೆ 15 ತಿಂಗಳ ಗ್ರಾಚ್ಯುಯಿಟಿ ನೀಡಿ ಅನ್ಯಾಯ ಎಸಗಲಾಗಿದೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

ಹೊರಗುತ್ತಿಗೆ ನೌಕರರು 10 ವರ್ಷದಿಂದ ದುಡಿಯುತ್ತಿದ್ದರೂ ಅವರನ್ನು ಕಾಯಂ ಮಾಡಿಲ್ಲ. ಆರ್ಥಿಕ ಶಿಸ್ತನ್ನು ಸಂಸ್ಥೆಯು ಅನುಸರಿಸದ್ದರಿಂದ  1.5 ಕೋಟಿ ನಷ್ಟದಲ್ಲಿದೆ. ಸೌಲಭ್ಯ ನೀಡದಿರುವುದಕ್ಕೆ ನಷ್ಟದ ಕಾರಣ ಹೇಳುವುದು ಸರಿಯಲ್ಲ ಎಂದರು.

ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಹೇಳಿದ ಸಿಬ್ಬಂದಿ ಮನವಿ ಪತ್ರವನ್ನು ಹಾಪ್‌’ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಅವರಿಗೆ ನೀಡಿದರು.

ಸಿಬ್ಬಂದಿ ಮಾಯಣ್ಣಗೌಡ, ಶಿವಣ್ಣ, ಶ್ರೀನಿವಾಸ, ನಂಜುಂಡೇಗೌಡ, ಮಹದೇವಗೌಡ, ಮಹೇಶ, ಕಿಶೋರ, ವಿಶ್ವನಾಥ್, ದೀಕ್ಷಿತ್‌, ಯೋಗೇಶ ಇದ್ದರು.