ಮನೆ ಸುದ್ದಿ ಜಾಲ ರೈತ ಕುಟುಂಬಗಳಿಗೆ ಉದ್ಯೋಗ ನೀಡದ ಆಟೋ ಲಿವ್ ಕಂಪನಿ ವಿರುದ್ಧ ರೈತ ಸಂಘಟನೆಗಳ ಹೋರಾಟಕ್ಕೆ ಚಾಲನೆ

ರೈತ ಕುಟುಂಬಗಳಿಗೆ ಉದ್ಯೋಗ ನೀಡದ ಆಟೋ ಲಿವ್ ಕಂಪನಿ ವಿರುದ್ಧ ರೈತ ಸಂಘಟನೆಗಳ ಹೋರಾಟಕ್ಕೆ ಚಾಲನೆ

0

ಮೈಸೂರು: ಭೂಮಿ ಕಳೆದುಕೊಂಡ 12 ರೈತ ಕುಟುಂಬಗಳಿಗೆ ಉದ್ಯೋಗ ಕೊಡದಿರುವ ಆಟೋ ಲಿವ್ ಕಂಪನಿಯ ಧೋರಣೆಯನ್ನು ಪ್ರಶ್ನಿಸಿ ಕೆಐಎಡಿಬಿ ಮೈಸೂರು ಕಚೇರಿಯ ಮುಂದೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಹೋರಾಟದಲ್ಲಿ ರೈತ ಕುಟುಂಬಗಳು ಪಾಲ್ಗೊಂಡಿದ್ದು, ಚುಕ್ಕಿ ನಂಜುಂಡಸ್ವಾಮಿಯವರ ನೇತೃತ್ವದ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಲಯ ಅಧ್ಯಕ್ಷ ವಿದ್ಯಾಸಾಗರ್ ,  ಮಂಜು ಕಿರಣ್ , ರಘು ಗಳಿಗರ ಹುಂಡಿ ವೆಂಕಟೇಶ್ ಎಡತಲೆ ಶಂಕ್ರಣ್ಣ ಮಾದೇವ ನಾಯಕ ಸತೀಶ ರೈತ ಮುಖಂಡರ ನೇತೃತ್ವದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗಿದೆ.

ಸ್ಥಳದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಆರಕ್ಷ ಸಿಬ್ಬಂದಿಯು ಉಪಸ್ಥಿತರಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾಗಿರುವ ಎಲ್ಲ ಕ್ರಮವನ್ನು ಕೈಗೊಂಡಿರುತ್ತಾರೆ.

ಹೋರಾಟಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದೇ ಹೋದಲ್ಲಿ ಕಡಕೋಳ ಕೈಗಾರಿಕಾ ವಲಯದ ಎಲ್ಲ ರಸ್ತೆಗಳನ್ನು ಮುಚ್ಚುವುದರ ಮೂಲಕ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂಬ ತೀರ್ಮಾನವನ್ನು ರೈತ ಮುಖಂಡರು ಹಾಗೂ ರೈತ ಕುಟುಂಬಗಳು ತೆಗೆದುಕೊಂಡಿವೆ.