ಮನೆ ರಾಜ್ಯ ವಿಧಾನಸಭೆಯಲ್ಲಿ ವೃತ್ತಿ, ಕಸುಬು ತೆರಿಗೆ ವಿಧೇಯಕ ಮಂಡನೆ: ವಕೀಲರು, ಬ್ಯೂಟಿಷಿಯನ್ ತೆರಿಗೆ ವಂಚಿಸಿದ್ರೆ ದಂಡ

ವಿಧಾನಸಭೆಯಲ್ಲಿ ವೃತ್ತಿ, ಕಸುಬು ತೆರಿಗೆ ವಿಧೇಯಕ ಮಂಡನೆ: ವಕೀಲರು, ಬ್ಯೂಟಿಷಿಯನ್ ತೆರಿಗೆ ವಂಚಿಸಿದ್ರೆ ದಂಡ

0

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವೃತ್ತಿ, ಕಸುಬು ತೆರಿಗೆ ವಿಧೇಯಕ ಮಂಡಿಸಿದರು.

ವಕೀಲ ವೃತ್ತಿ, ಬ್ಯೂಟಿಶಿಯನ್, ಎಂಜಿನಿಯರಂತಹ ಕಸುಬು ಆಧಾರಿತ ಸ್ವಯಂ ಉದ್ಯೋಗದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ತೊಡಗಿಸಿಕೊಂಡಿರುವವರು ವರ್ಷಕ್ಕೆ 2,500 ತೆರಿಗೆ ಪಾವತಿಸಬೇಕು. ಒಂದು ವೇಳೆ ತೆರಿಗೆ ಪಾವತಿಸದೆ ವಂಚನೆ ಎಸಗಿದ್ರೆ ಒಂದೂವರೆಪಟ್ಟು ದಂಡ ಪಾವತಿಸಬೇಕು ಎಂಬುದು ಸೇರಿ ಹಲವು ತಿದ್ದುಪಡಿಗಳನ್ನು ಒಳಗೊಂಡ ‘ಕರ್ನಾಟಕ ವೃತ್ತಿಗಳ, ಕಸುಬುಗಳ, ಆ ಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ವಿಧೇಯಕಕ್ಕೆ – 2023’ ಗುರುವಾರ ಅ೦ಗೀಕಾರ ದೊರೆತಿದೆ.

ವಕೀಲ ವೃತ್ತಿ, ಬ್ಯೂಟಿಶಿಯನ್, ಎಂಜಿನಿಯರಂತಹ ಕಸುಬು ಆಧಾರಿತ ಸ್ವಯಂ ಉದ್ಯೋಗಿಗಳು ವರ್ಷಕ್ಕೆ 2,500 ರು. ತೆರಿಗೆ ಪಾವತಿಸಬೇಕು ಎಂಬ ನಿಯಮ ಮೊದಲಿನಿಂದಲೂ ಇದೆ. ಉದ್ದೇಶ ಪೂರ್ವಕವಾಗಿ ತೆರಿಗೆ ವಂಚಿಸಿದರೆ ವುದು ಅಥವಾ ಒಂದೂವರೆ ಪಟ್ಟು ತೆರಿಗೆ ಸಂಗ್ರಹಿಸಬೇಕು ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಮಧ್ಯಂತರ ವರದಿ ತರಿಸಿಕೊಂಡು ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿರಾಜ್ಯ ಸರ್ಕಾರಿ ನೌಕರರಿಗಾಗಿ 7ನೇ ವೇತನ ಆಯೋಗದ ವರದಿ ಜಾರಿಗೆ ಬದ್ಧವಾಗಿದ್ದು, 1 ತಿಂಗಳ ಒಳಗಾಗಿ ಆಯೋಗದಿಂದ ಮಧ್ಯಂತರ ವರದಿ ಪಡೆದು ಅನುಷ್ಠಾನಗೊಳಿ ಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಕೂಡಲೇ 7ನೇ ವೇತನ ಆಯೋಗ ವರದಿ ಜಾರಿ ಮಾಡದಿದ್ದರೆ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಸೇರಿದಂತೆ ಹಲವು ಸದಸ್ಯರು ಬಜೆಟ್ ಮೇಲಿನ ಉತ್ತರದ ವೇಳೆಯೇ ವೇತನ ಆಯೋಗ ಜಾರಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.

1 ಲಕ್ಷ ಜನ ಸರ್ಕಾರಿ ನೌಕರರ ಹುದ್ದೆ ಮುಂದಿನ ವರ್ಷ ಭರ್ತಿ ಮಾಡಲಾಗುತ್ತದೆ. ಅಗತ್ಯ ಸೇವೆ ನೋಡಿಕೊಂಡು ಶಿಕ್ಷಕರ, ಉಪನ್ಯಾಸ ಹುದ್ದೆಗಳ ಭರ್ತಿಗೆ ಕ್ರಮ ವಹಿಸುತ್ತೇವೆ. ಹಣಕಾಸು ಲಭ್ಯತೆ ನೋಡಿ ಪರಿಷತ್ ಸದಸ್ಯರ ಅನುದಾನ ಹೆಚ್ಚಳ ಪರಿಗಣಿಸಲಾಗುತ್ತದೆ. ಪ್ರಥಮ ಬಾರಿ ಅಧಿಕಾರದ ವಿಕೇಂದ್ರೀಕರಣದ ಜೊತೆಗೆ ಹಣಕಾಸಿನ ವಿಕೇಂದ್ರೀಕರಣ ಮಾಡಿದ್ದೇವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ ಕುರಿತು ಮಧ್ಯಂತರ ವರದಿ ತರಿಸಿಕೊಂಡು ಅನುಷ್ಠಾನ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಬಜೆಟ್ ಮೇಲೆ 14 ಜನ ಮಾತನಾಡಿದ್ದಾರೆ, ಹಲವಾರು ವಿಚಾರ ಹೇಳಿದ್ದಾರೆ. ಕೆಲವು ಅನುಷ್ಠಾನದ ಬಗ್ಗೆ, ಸಲಹೆ ಸೂಚನೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇನೆ. ರಾಜ್ಯದ ಒಟ್ಟಾರೆ ಹಣಕಾಸು ಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳು, ವರ್ಷದ ಮುನ್ನೋಟದ ಅಂದಾಜು ಆದಾಯ, ವೆಚ್ಚ, ಅಭಿವೃದ್ಧಿಗೆ ಎಷ್ಟು ವೆಚ್ಚ ಮಾಡಬಹುದು ಎನ್ನುವ ಎಲ್ಲ ವಿಚಾರ ಬಜೆಟ್ ನಲ್ಲಿ ಮಂಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.