ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಕರ್ನಾಟಕ ರಾಜ್ಯ ಟೆಲಿಮಾನಸಾ ಘಟಕ-2 ರಡಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾರ್ಗಸೂಚಿಯ ಮೇರೆಗೆ ಕೆಳಗೆ ನಮೂದಿಸಿದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಸೀನಿಯರ್ ಕನ್ಸಲ್ಟೆಂಟ್ (ಸೈಕಿಯಾಟ್ರಿಸ್ಟ್) : 1
ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್: 1
ಕ್ಲಿನಿಕಲ್ ಸೈಕಾಲಾಜಿಸ್ಟ್ (ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) :2
ಟೆಕ್ನಿಕಲ್ ಕೋರ್ಡಿನೇಟರ್/ ಪ್ರೊಜೆಕ್ಟ್ ಕೋರ್ಡಿನೇಟರ್ : 1
ಹುದ್ದೆವಾರು ಮಾಸಿಕ ವೇತನ ಹಾಗೂ ಗರಿಷ್ಠ ವಯೋಮಿತಿ ವಿವರ
ಸೀನಿಯರ್ ಕನ್ಸಲ್ಟೆಂಟ್ (ಸೈಕಿಯಾಟ್ರಿಸ್ಟ್) : Rs.1,10,000. 50 ವರ್ಷ.
ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್: Rs.80,000. 40 ವರ್ಷ.
ಕ್ಲಿನಿಕಲ್ ಸೈಕಾಲಾಜಿಸ್ಟ್ (ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) : Rs.40,000. 40 ವರ್ಷ.
ಟೆಕ್ನಿಕಲ್ ಕೋರ್ಡಿನೇಟರ್/ ಪ್ರೊಜೆಕ್ಟ್ ಕೋರ್ಡಿನೇಟರ್ : Rs.40,000. 35 ವರ್ಷ.
ಶೈಕ್ಷಣಿಕ ಅರ್ಹತೆ
ಮನಃಶಾಸ್ತ್ರ ವಿಷಯದಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಎಂಡಿ/ಡಿಎನ್ಬಿ/ಸೈಕಿಯಾಟ್ರಿ / ಎಂ.ಫಿಲ್ / ಬಿಇ/ಬಿ.ಟೆಕ್ / ಎಂಸಿಎ / ಡಿಪ್ಲೊಮ ಪಾಸ್ ಮಾಡಿರಬೇಕು
ಅರ್ಹರು ಅರ್ಜಿಗಳನ್ನು ತಾವು ಹೊಂದಿರುವ ಶೈಕ್ಷಣಿಕ ಅರ್ಹತೆ / ಅನುಭವ ಕುರಿತು ಪೂರಕ ದಾಖಲಾತಿಗಳೊಂದಿಗೆ ತಮ್ಮ ಅರ್ಜಿಗಳನ್ನು ವಿಳಾಸ – ನಿರ್ದೇಶಕರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಧಾರವಾಡ. ಇಲ್ಲಿಗೆ ಮಾರ್ಚ್ 07 ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳನ್ನು ಸಂಚಾರಿ ದೂರವಾಣಿ ಸಂಖ್ಯೆ- 9902001554 ಗೆ ಕರೆ ಮಾಡಿ ತಿಳಿಯಬಹುದು.
ಹುದ್ದೆಯ ವಿವರವಾದ ಮಾಹಿತಿಯನ್ನು ಅಂತರ್ಜಾಲ https//dimhans.karnataka.gov.in ಮೂಲಕ ಪಡೆಯಬಹುದು.
ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಏರ್ಪಡಿಸಲಾಗುವ ಸಂದರ್ಶನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-03-2023