ಮನೆ ರಾಜ್ಯ ಮಾ. 12 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಪ್ರತಾಪ್ ಸಿಂಹ

ಮಾ. 12 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಪ್ರತಾಪ್ ಸಿಂಹ

0

ಮೈಸೂರು : ಮಾರ್ಚ್ 12ರಂದು ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಅವರು, ಮಂಡ್ಯದ ಮದ್ದೂರು ಬಳಿಯ ಗೆಜ್ಜೆಲೆಗೆರೆ ಹೈವೆಯಲ್ಲೇ ಮೋದಿಯವರ ಚಾಪರ್ ಲ್ಯಾಂಡ್ ಆಗಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ  ನಡೆಯುವ ಸಾರ್ವಜನಿಕ  ಕಾರ್ಯಕ್ರಮದಲ್ಲಿ  ನರೇಂದ್ರಮೋದಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಮೋದಿ ಅವರನ್ನು ರೋಡ್ ಶೋ ನಡೆಸಲು  ಅನುಮತಿ ಕೇಳಿದ್ದೇವೆ. SPG ಅವರು ಅನುಮತಿ ನೀಡಿದ್ರೆ ರೋಡ್ ಶೋ ಮಾಡುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಅನುಮತಿ ನೀಡಬಹುದು ಎಂದು ಮಾಹಿತಿ ನೀಡಿದರು.

ಹೈವೇಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿ, ಹೆದ್ದಾರಿಯ ಸರ್ವಿಸ್ ರಸ್ತೆ ಬಗ್ಗೆ ಕೆಲವರು ಹೈಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಕೆಲಸ ವಿಳಂಬವಾಗುತ್ತಿದೆ. ಸ್ಟೇ ತೆರವು ಬಗ್ಗೆ ವಕೀಲರ ಬಳಿ ಮಾತುಕತೆ ನಡೆಸಿದ್ದೇವೆ. ಆದಷ್ಟು ಬೇಗನೆ ಸ್ಟೇ ತೆರವುಗೊಳಿಸಿ ಸರ್ವಿಸ್ ರೋಡ್ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಮೈಸೂರು-ಬೆಂಗಳೂರು ಹೈವೇ ಯಲ್ಲಿ ಟೋಲ್‌ ಸಂಗ್ರಹ ಪ್ರಕ್ರಿಯೆ ಮುಂದೂಡಿಕೆ‌ ವಿಚಾರದ ಬಗ್ಗೆ ಮಾತನಾಡಿ, ಟೋಲ್ ಸಂಗ್ರಹವನ್ನು ಮಾರ್ಚ್ 14ರವರೆಗೂ ಮುಂದೂಡಲಾಗಿದೆ. ಆ ಬಳಿಕ ಬೆಂಗಳೂರಿನಿಂದ ನಿಡಘಟ್ಟದವರೆಗೆ ಟೋಲ್ ಸಂಗ್ರಹಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.