ಮನೆ ರಾಷ್ಟ್ರೀಯ ಅಡುಗೆ ಅನಿಲ ಮತ್ತು ವಾಣಿಜ್ಯ  ಎಲ್’ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಅಡುಗೆ ಅನಿಲ ಮತ್ತು ವಾಣಿಜ್ಯ  ಎಲ್’ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

0

ನವದೆಹಲಿ: ಇಂದು ಮಾರ್ಚ್ 1 ರಂದು ಅಡುಗೆ ಅನಿಲ ಮತ್ತು ವಾಣಿಜ್ಯ  ಎಲ್’ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.

14.2 ಕೆಜಿ ತೂಕದ ದೇಶೀಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 50 ರೂಪಾಯಿ ಹೆಚ್ಚಳವಾಗುತ್ತದೆ. ರಾಜಧಾನಿ ದೆಹಲಿಯಲ್ಲಿ ಅಡುಗೆಗೆ ಬಳಸುವ ಸಿಲಿಂಡರ್ ಗೆ ಇನ್ನು ಮುಂದೆ ಗ್ರಾಹಕರು 1,103 ರೂಪಾಯಿ ನೀಡಬೇಕು.

19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ನ ಬೆಲೆಯನ್ನು 350 ರೂಪಾಯಿ 50 ಪೈಸೆ ಹೆಚ್ಚಿಸಲಾಗಿದೆ, ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 2,119 ರೂಪಾಯಿ 50 ಪೈಸೆ ಆಗಲಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.

ದೆಹಲಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ ನ ಹೊಸ ಪರಿಷ್ಕೃತ ಬೆಲೆ ಇಂದಿನಿಂದ ₹ 1053 ರ ಬದಲಿಗೆ ₹ 1103 ಆಗಿರುತ್ತದೆ. ಮುಂಬೈನಲ್ಲಿ, ಈ 1052.50 ರ ಬದಲಿಗೆ ಇನ್ನು ಮುಂದೆ 1,102.5 ಗೆ ಮಾರಾಟ ಮಾಡಲಾಗುತ್ತದೆ. ಕೋಲ್ಕತ್ತಾದಲ್ಲಿ 1,079ರ ಬದಲು 1,129 ಹಾಗೂ ಚೆನ್ನೈನಲ್ಲಿ 1,068.50ರ ಬದಲಿಗೆ 1,118.5ರಷ್ಟು ದುಬಾರಿಯಾಗಿದೆ.

ಇಂದಿನಿಂದ ವಾಣಿಜ್ಯ ಎಲ್‌’ಪಿಜಿ ಸಿಲಿಂಡರ್ ದೆಹಲಿಯಲ್ಲಿ 1,769 ಬದಲಿಗೆ 2,119.5ಕ್ಕೆ ಲಭ್ಯವಿರುತ್ತದೆ. ಕೋಲ್ಕತ್ತಾದಲ್ಲಿ 1,870 ಇದ್ದದ್ದು ಈಗ 2,221.5 ಆಗಿದೆ.ಮುಂಬೈನಲ್ಲಿ ಇದರ ಬೆಲೆ ಈಗ 1,721 ರಿಂದ 2,071.50ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 1,917ಕ್ಕೆ ಸಿಗುತ್ತಿದ್ದ ಸಿಲಿಂಡರ್ ಈಗ 2,268ಕ್ಕೆ ದೊರೆಯಲಿದೆ.

ಭಾರತದಲ್ಲಿ ಎಲ್’ಪಿಜಿ ಬೆಲೆಯನ್ನು ಸರ್ಕಾರಿ-ಚಾಲಿತ ತೈಲ ಕಂಪನಿಗಳು ಮಾಸಿಕ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ.

2014 ರಲ್ಲಿ 19 ಕೆಜಿ ತೂಕದ ಪ್ರತಿ ಸಿಲಿಂಡರ್‌ಗೆ 350 ರೂಪಾಯಿಗಳಷ್ಟು ಹೆಚ್ಚಿಸಿದ ನಂತರ ಇದು ಎರಡನೇ ಅತಿದೊಡ್ಡ ಒಂದೇ ಬಾರಿ ಬೆಲೆ ಏರಿಕೆಯಾಗಿದೆ.  ಜೂನ್ 2022 ರಿಂದ ಮೊದಲ ಬಾರಿಗೆ ವಾಣಿಜ್ಯ LPG ಪ್ರತಿ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದೆ.

ಪರಿಷ್ಕೃತ ಬೆಲೆ:

19-ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ 1,769 ರಿಂದ 2,119 ಕ್ಕೆ ಶೇಕಡಾ 19.8 ರಷ್ಟು ಏರಿಕೆ

14.2-ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,053 ರಿಂದ 1,103 ಕ್ಕೆ ಶೇಕಡಾ 4.7 ರಷ್ಟು ಏರಿಕೆಯಾಗಿದೆ

ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ ಎಲ್‌ ಪಿಜಿ ಸಿಲಿಂಡರ್‌ಗಳ ಬೆಲೆ 1,105 ರೂಪಾಯಿ 50 ಪೈಸೆಯಾಗಿದೆ. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಸರಿಸುಮಾರು ಇದೇ ದರ ಅನ್ವಯವಾಗುತ್ತದೆ.