ಮನೆ ರಾಷ್ಟ್ರೀಯ ಈಶಾನ್ಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭ: ತ್ರಿಪುರಾ, ನಾಗಲ್ಯಾಂಡ್‌ ನಲ್ಲಿ ಬಿಜೆಪಿ ಮುನ್ನಡೆ

ಈಶಾನ್ಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭ: ತ್ರಿಪುರಾ, ನಾಗಲ್ಯಾಂಡ್‌ ನಲ್ಲಿ ಬಿಜೆಪಿ ಮುನ್ನಡೆ

0

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ.

ಮೂರು ರಾಜ್ಯಗಳಲ್ಲಿ ಒಟ್ಟು 60 ವಿಧಾನ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ.

ತ್ರಿಪುರಾ, ನಾಗಲ್ಯಾಂಡ್‌ ನಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌ ಪಿಪಿ ಪಕ್ಷ ಆರಂಭಿಕ ಮುನ್ನಡೆ ಕಾಯ್ದುಕೊಂಡಿವೆ.

ಮೇಘಾಲಯ:  (ಮ್ಯಾಜಿಕ್ ನಂಬರ್ 31)

ಮೇಘಾಲಯದಲ್ಲಿ ಆರಂಭಿಕ ಹಂತದಲ್ಲಿ 60 ಕ್ಷೇತ್ರಗಳಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು,ಕಾಂಗ್ರೆಸ್ 8 ಕ್ಷೇತ್ರದಲ್ಲಿ, ಎನ್ ಪಿಪಿ 21 ಕ್ಷೇತ್ರದಲ್ಲಿ ಹಾಗೂ ಇತರರು 11 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತ್ರಿಪುರಾ: (ಮ್ಯಾಜಿಕ್ ನಂಬರ್ 31)

ಇನ್ನು ತ್ರಿಪುರಾದಲ್ಲಿ ಕಾಂಗ್ರೆಸ್ ಮೈತ್ರಿಕೂಟ 4, ಬಿಜೆಪಿ ಮೈತ್ರಿಕೂಟ 39,  ಟಿಎಂಪಿ 5,ಇತರೆ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಒಟ್ಟು 60 ಕ್ಷೇತ್ರಗಳಿವೆ.

ನಾಗಲ್ಯಾಂಡ್: (ಮ್ಯಾಜಿಕ್ ನಂಬರ್ 31)

ಅಂತಿಮವಾಗಿ ನಾಗಲ್ಯಾಂಡ್ ನಲ್ಲಿ ಆರಂಭಿಕ ಹಂತದ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ಮೈತ್ರಿಕೂಟ ಒಟ್ಟು 60 ಕ್ಷೇತ್ರದಲ್ಲಿ 34 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು,ಎನ್ ಪಿಎಫ್ ಪಕ್ಷ 4, ಕಾಂಗ್ರೆಸ್ 1 ಇತರೆ ಪಕ್ಷಗಳು 9 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಫೆ. 16ರಂದು ತ್ರಿಪುರಾ ಮತ್ತು ಫೆ. 27ರಂದು ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ತ್ರಿಪುರಾದಲ್ಲಿ ಪ್ರಾದೇಶಿಕ ಪಕ್ಷ ತಿಪ್ರ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದೆ.