ಚಿತ್ರದುರ್ಗ: ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಪ್ರಕರಣದಲ್ಲಿ ಸರ್ಕಾರ ಬಹಳ ಸ್ಪಷ್ಟವಾಗಿದೆ. ಯಾರೇ ಇರಲಿ, ಇಂಥ ಪ್ರಕರಣದಲ್ಲಿ ಮುಕ್ತ ಅವಕಾಶ ಲೋಕಾಯುಕ್ತಕ್ಕೆ ನೀಡಿದ್ದೇವೆ. ಕಾನೂನು ತನ್ನ ಕೆಲಸ ಮಾಡುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು.
ಅವರು ಇಂದು ಮುರುಘಾ ಮಠದ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಪ್ರತಿಪಕ್ಷ ದವರು ಸಿಎಂ ರಾಜೀನಾಮೆ ನೀಡಬೇಕೆಂದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರಿಗೆ ಬೇರೇನೂ ಕೆಲಸವಿಲ್ಲವಲ್ಲ.. ವಿಧಾನಸಭೆಯಲ್ಲಿ ಅವರ ಸಚಿವರ ಕಚೇರಿಯಲ್ಲಿಯೇ 2 ಲಕ್ಷ ಲಂಚ ಪಡೆದಿದ್ದರು. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ. ಅಂದು ಲೋಕಾಯುಕ್ತ ಇದ್ದಿದ್ದರೆ ಬಂಧನವಾಗುತ್ತಿತ್ತು. ಇಂಥ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಲೋಕಾಯುಕ್ತವನ್ನು ಅತ್ಯಂತ ದುರ್ಬಲಗೊಳಿಸಲಾಗಿತ್ತು ಎಂದರು.
ಪಕ್ಷಾತೀತವಾಗಿ ಭ್ರಷ್ಟಾಚಾರ ನಿಗ್ರಹ :
ಈ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತ ವಾಗಿ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಭ್ರಷ್ಟಾಚಾರ ನಿಗ್ರಹ ಮಾಡುತ್ತಿದ್ದೇವೆ. ನಮಗೆ 59 ಪ್ರಕರಣ ಮುಚ್ಚಿಹಾಕಿರುವ ಕಾಂಗ್ರೆಸ್ ತನ್ನ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಅವು ಕೂಡ ಮುಂದೆ ಬರಲಿದೆ. ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ತನ್ನ ಪಾಪ ತೊಳೆದುಕೊಳ್ಳಲು ರಾಜೀನಾಮೆ ಬೇಡಿಕೆ ಸಲ್ಲಿಸುತ್ತಿದೆ. ತಮ್ಮ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಲಿ. ಎಷ್ಟು ಸಾರಿ ಅವರು ರಾಜೀನಾಮೆ ನೀಡಬೇಕಿತ್ತು ಎಂದರು.
ಕಾಂಗ್ರೆಸ್ ನವರ ಕೀಳುಮಟ್ಟದ ರಾಜಕಾರಣ :
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಲೆಗಡುಕರ ಸರ್ಕಾರ ಕಿತ್ತು ಒಗೆಯಬೇಕೆಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅತಿ ಹೆಚ್ಚು ಕೊಲೆಗಳಾಗಿದ್ದು, ಸಿದ್ದರಾಮಯ್ಯ ಕಾಲದಲ್ಲಿ, ಧರ್ಮ, ಜಾತಿಯ ಹೆಸರಿನಲ್ಲಿ ಎಷ್ಟು ಕೊಲೆಗಳಾದವು. ಪಿಎಫ್ಐ, ಎಸ್.ಡಿ.ಪಿ ಐ ಕೊಲೆ ಪ್ರಕರಣ ಗಳನ್ನು ಹಿಂಪಡೆದಿದ್ದರೆ. ಅವರಿಗೆ ಯಾವ ನೈತಿಕತೆ ಇದೆ. ಎಲ್ಲಾ ರಂಗದಲ್ಲಿ ಅತ್ಯಂತ ಕೀಳು ಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಮಾಡಿದೆ. ಎಷ್ಟು ಸರಣಿ ಕೊಲೆಗಳಾಗಿವೆ ಎಂದರು.
ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದರು.