ಮನೆ ರಾಜ್ಯ H3N2 ವೈರಸ್‌ ಸೋಂಕು: ಎಚ್ಚರ ವಹಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ

H3N2 ವೈರಸ್‌ ಸೋಂಕು: ಎಚ್ಚರ ವಹಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ

0

ಮೈಸೂರು: H3N2 ವೈರಸ್‌ ಸೋಂಕಿನಿಂದ ಕರ್ನಾಟಕದಲ್ಲಿ ಯಾವುದೇ ಅಪಾಯ ಸ್ಥಿತಿ ಇಲ್ಲ. ಆದರೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ H2N3 ವೈರಸ್ ಭೀತಿ ಸೃಷ್ಠಿಸಿರುವ ಹಿನ್ನೆಲೆ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು‌ ಕೇಂದ್ರ ಸರ್ಕಾರ ಸೂಚಿಸಿದೆ. ಇಡೀ ರಾಜ್ಯಕ್ಕೆ ಗೈಡ್‌ಲೈನ್ ಅತೀ ಶೀಘ್ರದಲ್ಲೇ ಕೊಡಲಿದ್ದಾರೆ ಎಂದರು.

H3N2 ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಗೈಡ್ ಲೈನ್ ಬಿಡುಗಡೆ ಮಾಡಿಲ್ಲ. ಅಗತ್ಯವಾದ ಔಷಧಿಗಳನ್ನು ಸ್ಟಾಕ್ ಮಾಡಿ ಜಿಲ್ಲಾ ಸ್ಟೋರೆಜ್‌ನಲ್ಲಿ ಇಡಲಿಕ್ಕೆ ಸೂಚನೆ ಕೊಟ್ಟಿದ್ದೀನಿ. ಕರ್ನಾಟಕದಲ್ಲಿ ಅಂತಹ ಅಲಾರಮಿಂಗ್ ಏನಿಲ್ಲ. ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು.

ಮಾಸ್ಕ್ ಕಡ್ಡಾಯ ಅಂತ ಏನಿಲ್ಲ. ಇವತ್ತು ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.