ಮನೆ ತಂತ್ರಜ್ಞಾನ 60 ವರ್ಷದಲ್ಲೇ ಮೊದಲ ಬಾರಿಗೆ ಲೋಗೋ ಬದಲಾಯಿಸಿದ ನೋಕಿಯಾ

60 ವರ್ಷದಲ್ಲೇ ಮೊದಲ ಬಾರಿಗೆ ಲೋಗೋ ಬದಲಾಯಿಸಿದ ನೋಕಿಯಾ

0

ಹೊಸದಿಲ್ಲಿ: ನೋಕಿಯಾ! ಈ ಹೆಸರು ಕೇಳದವರೇ ಇಲ್ಲ, ಕೀ ಪ್ಯಾಡ್‌ನಿಂದ ಸ್ಮಾರ್ಟ್‌ ಫೋನ್‌ವರೆಗೆ ಭಾರತದಲ್ಲಿ ಖ್ಯಾತ ಮೊಬೈಲ್‌ ತಯಾರಕ ಸಂಸ್ಥೆ ಎನ್ನುವ ಸಾಲಿನಲ್ಲಿ ದಶಕಗಳಿಂದ ನೋಕಿಯಾ ಸ್ಥಾನ ಗಿಟ್ಟಿಸಿಕೊಂಡಿದೆ.

ಸಂಸ್ಥೆ ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಅದರ ಲೋಗೋ! ಆದರೆ ಇದೀಗ 60 ವರ್ಷಗಳಲ್ಲೇ ಮೊದಲ ಬಾರಿಗೆ ನೋಕಿಯಾ ಸಂಸ್ಥೆ ತನ್ನ ಲೋಗೋವನ್ನು ಬದಲಾಯಿಸುತ್ತಿದ್ದು, ಹೊಸ ಲೋಗೋ ಪರಿಚಯಿಸಿದೆ.

ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳು ಮಾಯವಾ ಗಿದ್ದು, ಹೊಸ ಡಿಸೈನ್‌ನ 5 ಫಾಂಟ್‌’ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊ ಳಿಸುತ್ತಿವೆ.

ಸ್ಮಾರ್ಟ್‌’ಫೋನ್‌ ಜತೆಗೆ ಹೊಸ ತಂತ್ರಜ್ಞಾನಕ್ಕೂ ಹೊಂದಿಕೊಂಡು ಹೆಜ್ಜೆ ಇಡುತ್ತಿರುವ ನೋಕಿಯಾ, ತನ್ನ ಲೋಗೋ ಬದಲಾವಣೆಗೆ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸಲಿದೆ.