ಜ್ಯೂಸ್ ಆರೋಗ್ಯಕರ ಪಾನೀಯವಾಗಿದೆದ್ದು, ಬೇಸಿಗೆಯಲ್ಲಿ ಹೆಚ್ಚಿನ ಜನರು ಜ್ಯೂಸ್ ಸೇವಿಸಲು ಇಷ್ಟಪಡುತ್ತಾರೆ. ಜ್ಯೂಸ್ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಿರ್ಜಲೀಕರಣವನ್ನು ನಿವಾರಿಸುತ್ತದೆ. ಜ್ಯೂಸ್’ನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು, ಇಲ್ಲದಿದ್ದರೆ ಅದರ ಪೋಷಕಾಂಶಗಳು ಕಡಿಮೆಯಾಗುತ್ತವೆ.
ನಮ್ಮಲ್ಲಿ ಹೆಚ್ಚಿನವರು ಜ್ಯೂಸ್ ತಯಾರಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಆರೋಗ್ಯಕ್ಕೆ ಹಾನಿಕಾರವಾಗಬಲ್ಲದು.
ಹಳಸಿದ ಜ್ಯೂಸ್ ನ್ನು ಕುಡಿಯುವ ತಪ್ಪು
ಜ್ಯೂಸ್ ಅನ್ನು ತಾಜಾ ಇರುವಾಗ ಮಾತ್ರ ಸೇವಿಸಬೇಕು. ಏಕೆಂದರೆ, ತಯಾರಿಸಿದ ಸ್ವಲ್ಪ ಸಮಯದ ನಂತರ ಅದು ಹಳಸಲು ಪ್ರಾರಂಭಿಸುತ್ತದೆ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.
ಜ್ಯೂಸ್ ಗೆ ಬಹಳಷ್ಟು ಹಣ್ಣುಗಳನ್ನು ಬಳಸುವುದು
ಹಣ್ಣುಗಳು ನೈಸರ್ಗಿಕ ಸಕ್ಕರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಕ್ಯಾಲೋರಿ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಹೆಚ್ಚಿನ ಹಣ್ಣಿನ ರಸಗಳು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಬಹುದು.
ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತದೆ. ಹಾಗಾಗಿ ಜ್ಯೂಸ್ ತಯಾರಿಸುವಾಗ ಒಂದು ಹಣ್ಣಿನ ಜ್ಯೂಸ್ ತಯಾರಿಸಿ. ಹೆಚ್ಚಿನ ಹಣ್ಣುಗಳನ್ನು ಹಾಕುವುದು ಮಧುಮೇಹಿಗಳಿಗೆ ಹಾನಿಕಾರಕವಾಗಿದೆ.
ಹಸಿ ಪಾಲಕ್ ಬಳಕೆ
ಜ್ಯೂಸ್’ನಲ್ಲಿ ಹೆಚ್ಚಿನ ಪ್ರಮಾಣದ ಕಚ್ಚಾ ಪಾಲಕ್ ಹಾಕುವುದು ಸರಿಯಲ್ಲ. ಏಕೆಂದರೆ, ಅದರೊಳಗೆ ಹೆಚ್ಚಿನ ಮಟ್ಟದ ಆಕ್ಸಲೇಟ್ ಇದೆ, ಇದು ದೇಹದಲ್ಲಿ ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಬೇಯಿಸಿದ ಪಾಲಕ್’ನ್ನು ಮಿತವಾಗಿ ಸೇವಿಸಬಹುದು, ಆದರೆ ದೈನಂದಿನ ಮಿತಿಮೀರಿದ ಪ್ರಮಾಣವನ್ನು ತಪ್ಪಿಸಬೇಕು.
ಜ್ಯೂಸ್’ನಲ್ಲಿ ಆರೋಗ್ಯಕರ ಕೊಬ್ಬನ್ನು ಹಾಕದಿರುವುದು ತಪ್ಪು
ಜ್ಯೂಸ್ ಮಾಡುವಾಗ ಆರೋಗ್ಯಕರ ಕೊಬ್ಬನ್ನು ಸೇರಿಸಬೇಕು. ಈ ಕೊಬ್ಬುಗಳು ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ನಂತಹ ಕೊಬ್ಬು ಕರಗುವ ಜೀವಸತ್ವಗಳ ಬಳಕೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಆವಕಾಡೊ, ತೆಂಗಿನ ಎಣ್ಣೆಯಂತಹ ಆರೋಗ್ಯಕರ ಕೊಬ್ಬನ್ನು ಜ್ಯೂಸ್’ಗೆ ಸೇರಿಸಬಹುದು.