ಮನೆ ಮನರಂಜನೆ ಆಸ್ಕರ್ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

ಆಸ್ಕರ್ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

0

ಲಾಸ್‌ ಏಂಜಲಿಸ್‌: ‘ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌’ ಸಿನಿಮಾವು 95ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿ ಇತಿಹಾಸ ಬರೆಯಿತು.

ಭಾನುವಾರ ಸಂಜೆ ಇಲ್ಲಿನ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್‌ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ಧೂರಿಯಾಗಿ ನಡೆಯಿತು.

ಸಮಾರಂಭದಲ್ಲಿ ಸಿನಿಮಾ ತಾರೆಯರು, ತಂತ್ರಜ್ಞರು ಸೇರಿದಂತೆ ಸಿನಿಮಾ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ಎಸ್.ಎಸ್‌ ರಾಜಮೌಲಿ ನಿರ್ದೇಶನದ ತೆಲುಗಿನ ಆರ್‌.ಆರ್‌.ಆರ್ ಸಿನಿಮಾದ ‘ನಾಟು ನಾಟು‘ ಹಾಡಿಗೆ ಆಸ್ಕರ್‌ ಪ್ರಶಸ್ತಿ ಒಲಿದಿದೆ. ಚಂದ್ರಬೋಸ್‌ ಬರೆದಿರುವ ‘ನಾಟು ನಾಟು‘ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆಯಿತು. ಇದೇ ಮೊದಲ ಸಲ ಭಾರತಕ್ಕೆ ಎರಡು ಆಸ್ಕರ್‌ ಪ್ರಶಸ್ತಿಗಳು ಬಂದಿರುವುದು ವಿಶೇಷ.

ಆಸ್ಕರ್ ಅವಾರ್ಡ್ 2023 ಯ ಎಲ್ಲಾ ವಿಭಾಗದ ಪ್ರಶಸ್ತಿ ಪುರಸ್ಕೃತರ ಪಟ್ಟಿ

1.     ಅತ್ಯುತ್ತಮ ಚಿತ್ರ: ʻಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್ʼ

2.     ಅತ್ಯುತ್ತಮ ನಿರ್ದೇಶಕ : ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)

3.     ಅತ್ಯುತ್ತಮ ನಟ: ಬ್ರೆಂಡನ್ ಫ್ರೇಸರ್ (ದಿ ವೇಲ್)

4.     ಅತ್ಯುತ್ತಮ ನಟಿ : ಮಿಶೆಲ್ ಯೋಹ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)

5.     ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ)

6.     ಅತ್ಯುತ್ತಮ ಪೋಷಕ ನಟ : ಕೆ. ಹುಯ್ ಕ್ವಾನ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)

7.     ಅತ್ಯುತ್ತಮ ಪೋಷಕ ನಟಿ: ಜೇಮಿ ಲೀ ಕರ್ಟಿಸ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)

8.     ಅತ್ಯುತ್ತಮ ಹಾಡು: ನಾಟು ನಾಟು (RRR – ತೆಲುಗು)

9.     ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ :ಅವತಾರ್- ದಿ ವೇ ಆಫ್ ವಾಟರ್

10.   ಅತ್ಯುತ್ತಮ ಧ್ವನಿ ವಿನ್ಯಾಸ : ಟಾಪ್ ಗನ್ -ಮೇವರಿಕ್

11.   ಅತ್ಯುತ್ತಮ ಸಂಕಲನ: ಪೌಲ್ ರಾಗರ್ಸ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)

12.   ಅತ್ಯುತ್ತಮ ಛಾಯಾಗ್ರಹಣ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

13.   ಅತ್ಯುತ್ತಮ ಮೂಲ ಕಥೆ: ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್

14.   ಅತ್ಯುತ್ತಮ ಸಾಕ್ಷ್ಯಚಿತ್ರ: ನವಲ್ನಿ

15.   ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಎಲಿಫೆಂಟ್ ವಿಸ್ಪರರ್ಸ್ (ತಮಿಳು)

16.   ಅತ್ಯುತ್ತಮ ಕೇಶ ವಿನ್ಯಾಸ ಮತ್ತು ಮೇಕಪ್: ದಿ ವೇಲ್

17.   ಅತ್ಯುತ್ತಮ ಆನಿಮೇಟಿಡ್ ಚಲನಚಿತ್ರ : ಗಿಲ್ಲರ್ಮೋ ಡೆಲ್ ಟೊರೋ ಅವರ ಪಿನೋಚ್ಚಿಯೋ

18.   ಅತ್ಯುತ್ತಮ ಅಳವಡಿಸಿದ ಚಿತ್ರಕಥೆ: ವಿಮೆನ್ ಟಾಕಿಂಗ್

19.   ಅತ್ಯುತ್ತಮ ಆನಿಮೇಟಿಡ್ ಕಿರುಚಿತ್ರ: ದಿ ಬಾಯ್, ದಿ ಮೋಲ್, ದಿ ಫಾಕ್ಸ್ ಆಂಡ್ ದಿ ಹಾರ್ಸ್

20.   ಅತ್ಯುತ್ತಮ ಉಡುಪು ವಿನ್ಯಾಸ: ಬ್ಲಾಕ್ ಪಾಂಥರ್: ವಾಕಂಡಾ ಫಾರೆವರ್

21.   ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

22.   ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ಆನ್ ಐರಿಷ್ ಗುಡ್ ಬೈ

23.   ಅತ್ಯುತ್ತಮ ಒರಿಜಿನಲ್ ಸ್ಕೋರ್ : ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್