ಮನೆ ರಾಜಕೀಯ ಅಂಜನಾದ್ರಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ: ಸಿಎಂ ಬೊಮ್ಮಾಯಿ

ಅಂಜನಾದ್ರಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ: ಸಿಎಂ ಬೊಮ್ಮಾಯಿ

0

ಅಂಜನಾದ್ರಿ (ಗಂಗಾವತಿ): ಅಂಜನಾದ್ರಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು‌ ಎಂದು ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಹೇಳಿದರು.

ಅಂಜನಾದ್ರಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ರಾಮನ ಭಕ್ತ ಹನುಮಂತನ ಕ್ಷೇತ್ರ ಅಂಜನಾದ್ರಿ ಅಭಿವೃದ್ಧಿ ಭಾಗ್ಯ ಬಿಜೆಪಿಗೆ ಲಭಿಸಿದ್ದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.

ಅಂಜನಾದ್ರಿಯಲ್ಲಿ ಪ್ರದರ್ಶನ ಪಥ, ವಾಣಿಜ್ಯ ಸಂಕೀರ್ಣ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಬಹಳ ಸಂತೋಷದಿಂದ ಅಂಜನಾದ್ರಿ ಅಭಿವೃದ್ಧಿ ಭೂಮಿಪೂಜೆ ಮಾಡಿದ್ದೇನೆ ಎಂದರು.

ಆಂಜನೇಯ ಮನುಕುಲಕ್ಕೆ ಒಳ್ಳೆಯದನ್ನು ಮಾಡಲಿ, ನಮ್ಮೆಲ್ಲರ ಪರಿಕಲ್ಪನೆಯಂತೆ ಅಂಜನಾದ್ರಿಯನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡುವುದಾಗಿದೆ. ಈಗಾಗಲೇ ₹120 ಕೋಟಿ ಅನುದಾನ ನೀಡಲಾಗಿದೆ. ಕೆಲ ದಿ‌ನಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತದೆ ಎಂದರು.

ಅಂಜನಾದ್ರಿ ಬೆಟ್ಟದ ಪಾದಗಟ್ಟೆ ಬಳಿ ಅವರು ಪೂಜೆ ಸಲ್ಲಿಸಿದರು. ಮೈಸೂರು ಬೆಂಗಳೂರು ದಶಪಥ ಹೆದ್ದಾರಿ ಟೋಲ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿ ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ವಿವರವಾದ ವರದಿ ಕೊಡಲು ತಿಳಿಸಿದ್ದೇನೆ. ಟೋಲ್ ಆರಂಭವಾದ ಹೊಸತರಲ್ಲಿ ಈ ರೀತಿಯ ವಿರೋಧ ಅವುಗಳನ್ನು ಪರಿಹರಿಸುತ್ತೇನೆ ಎಂದರು.