ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದ ಸಂಬಂಧ ವಿಜಯನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಂ. ಭರತ್ ಮತ್ತು ಸಬ್ ಇನ್ ಸ್ಪೆಕ್ಟರ್ ಜಿ.ಎಚ್. ಸಂತೋಷ್ ಗೆ ಹೈಕೋರ್ಟ್ ಬೆವರಿಳಿಸಿದೆ.
ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲ ಯಗಳು ಹಲವು ಬಾರಿ ಆದೇಶ ಮಾಡಿದೆ. ಆದರೆ, ಪೊಲೀಸರು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ. ಇವತ್ತು ವಕೀಲರಿಗೆ ನೋಟಿಸ್ ನೀಡುತ್ತೀರಿ. ನಾಳೆ ನ್ಯಾಯಾಧೀಶರಿಗೂ ನೋ ಟಿಸ್ ಕೊಟ್ಟು ಠಾಣೆಗೆ ಬರಲು ಹೇಳುತ್ತೀರಿ. ಪೊಲೀಸರ ಕೆಲಸವೇನು, ನೀವು ಮಾಡುತ್ತಿರುವುದೇನು, ಇನ್ ಸ್ಪೆಕ್ಟರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಆಗಿರುವಾಗಲೇ ವಕೀಲರಿಗೆ ನೋಟಿಸ್ ನೀಡ್ತೀರಾ, ಇನ್ನು ಡಿಸಿಪಿ, ಎಸ್ ಪಿ, ಐಜಿ ಆದ್ರೆ ಕಥೆ ಏನ್ರಿ? ಇದೇನು ಕರ್ನಾಟಕವೋ ಅಥವಾ ಬಿಹಾರವೋ ಎಂದು ಪ್ರಶ್ನಿಸುವ ಮೂಲಕ ಪೊಲೀಸ್ ಅಧಿಕಾರಿಗಳಿಬ್ಬರಿಗೆ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಚಾಟಿ ಬೀಸಿದರು.
ಪೊಲೀಸರು ತಮಗೆ ನೀಡಿದ ನೋಟಿಸ್ ರದ್ದು ಪಡಿಸುವಂತೆ ಕೋರಿ ವಕೀಲ ಬಿ.ಸುಧಾಕರ್ ಹೈಕೋಟ್ ೯ಗೆ ತಕರಾರು ಅರ್ಜಿ ಸಲ್ಲಿಸಿದರು. ಈ ಕುರಿತು ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್ ಮಂಗಳ ವಾರಸೂಚಿಸಿತ್ತು. ಬುಧವಾರ ಅರ್ಜಿ ವಿಚಾರಣೆಗೆ ಬಂದ ವೇಳೆ ವಿಜಯನಗರ ಠಾಣೆ ಪೊಲೀಸ್ ಇನ್ಸ್’ಪೆಕ್ಟರ್ ಎಂ. ಎಂ.ಭರತ್ ಮತ್ತು ಸಬ್ ಇನ್ಸ್’ಪೆಕ್ಟರ್ ಜಿ.ಎಚ್. ಸಂತೋ ಷ್ ಖುದ್ದು ಹಾಜರಾದರು. ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ಮುಂದೆ ಆ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.