ಅಂಕಾರಾ: ಭೂಕಂಪ ಪೀಡಿತ ಟರ್ಕಿಯಲ್ಲಿ ನೆರೆ ಹಾವಳಿಯಿಂದಾಗಿ 12 ಜನರು ಮೃತಪಟ್ಟಿದ್ದಾರೆ.
ಆಗ್ನೇಯ ಟರ್ಕಿಯ ಆದಿಯಾಮನ್, ಸ್ಯಾನ್ಲಿಯುರ್ಫಾ ಪ್ರಾಂತ್ಯದಲ್ಲಿ ಕಳೆದ 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.
ಟುಟ್ ಪಟ್ಟಣದಲ್ಲಿ ಭೂಕಂಪದಿಂದ ಬದುಕುಳಿದಿದ್ದವರು ಕಂಟೇನರ್ ನಲ್ಲಿ ವಾಸವಾಗಿದ್ದರು. ಪ್ರವಾಹಕ್ಕೆ ಕಂಟೇನರ್ ಕೊಚ್ಚಿ ಹೋಗಿದ್ದು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆದಿಯಾಮನ್’ಲ್ಲಿ ಪ್ರವಾಹದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಟರ್ಕಿಯ ಗೃಹ ಸಚಿವ ಸುಲೇಮನ್ ಸೊಯ್ಲು ಅವರು ತಿಳಿಸಿದ್ದಾರೆ.ದಿ
ಯಾಮನ್, ಸ್ಯಾನ್ಲಿಯುರ್ಫಾ, ಟುಟ್ ಪ್ರಾಂತ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜನ ಜೀವನ ಆಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಸಂಕಷ್ಟದಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟರ್ಕಿಯಲ್ಲಿ ಭೂಕಂಪದಿಂದ ಅಂದಾಜು 8.17 ಲಕ್ಷ ಕೋಟಿಗೂ ಹೆಚ್ಚು ಹಾನಿಯಾಗಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪನದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.