ಮನೆ ರಾಜಕೀಯ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ?: ಪ್ರಧಾನಿ ಮೋದಿಗೆ ಎಚ್.ವಿಶ್ವನಾಥ್ ಪ್ರಶ್ನೆ

ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ?: ಪ್ರಧಾನಿ ಮೋದಿಗೆ ಎಚ್.ವಿಶ್ವನಾಥ್ ಪ್ರಶ್ನೆ

0

ಮೈಸೂರು: ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ? ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಜನಸ್ನೇಹಿ ಟೋಲ್ ದರ ಸಂಗ್ರಹಿಸುವಂತೆ ಆಗ್ರಹಿಸಿ ಇಲ್ಲಿನ ದಶಪಥ ಪ್ರವೇಶದ ಬೆಂಗಳೂರು ರಸ್ತೆಯ ಮಣಿಪಾಲ ವೃತ್ತದಲ್ಲಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ವಪಕ್ಷದ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಂಸದ ಪ್ರತಾಪ್ ಸಿಂಹ ಮಿನಿ ಕಂಟ್ರ್ಯಾಕ್ಟರ್, ನಿನ್ನ ಕೆಲಸ ಏನು ? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು ? ರಸ್ತೆ ಕಾಮಗಾರಿಗೆ ಸಾಮಾಗ್ರಿಗಳನ್ನು ಸಾಗಿಸಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೈವೇಯಲ್ಲಿ ನಿಂತು ಫೇಸ್ ಬುಕ್ ಲೈವ್ ಮಾಡುತ್ತಿದ್ದ ಎಂದು ಕಿಡಿಕಾರಿದ್ದಾರೆ.

ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನು ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ. ಅವನು ಯಾರೋ ಶ್ರೀಧರ್ ಅನ್ನೋ ಅಧಿಕಾರಿ (ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ) ಸರ್ವಿಸ್ ರಸ್ತೆ ಮಾಡುವ ಕಾನೂನು ಎಲ್ಲಿದೆ ಅಂತಾನೆ  ಎಂದು ಕಿಡಿಕಾರಿದ್ದಾರೆ.

2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆಳಿದಿದ್ದೀರಿ. ರಸ್ತೆ ಬೇಕು ಅಂತ ಯಾರು ಕೇಳಿದ್ರು ? ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಬಾರಿ ಟೋಲ್ ವಿರುದ್ಧ ಶಾಂತಿಯುತ ಪ್ರತಿಭಟನೆ ಯಲ್ಲಿ ವಿವಿಧ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿದ್ದು, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಚಳವಳಿ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದೇವರಾಜ ಅರಸು ಪ್ರತಿಮೆ ನಿರ್ಮಾಣ ಸಮಿತಿ , ಕನ್ನಡ ವೇದಿಕೆ ಪ್ರಮುಖರು, ಇದ್ದರು.

‘ಕಿ.ಮೀ.ಗೆ ₹ 1 ಸಾಕು’, ಟೋಲ್ ದರ ₹1 ಕ್ಕೆ ನಿಗದಿಯಾಗಬೇಕು’, ‘ದುಬಾರಿ ಬೆಲೆಗೆ ಜನ ಕುಸಿದಿದ್ದಾರೆ ಟೋಲ್ ಶುಲ್ಕದ ಭಾರಕ್ಕೆ ನರಳುತ್ತಿದ್ದಾರೆ’, ಎಂಬಿತ್ಯಾದಿ ಘೋಷಣೆಗಳ ಫಲಕ ಪ್ರದರ್ಶಿಸಿದರು.

ಭಾರಿ ಪೊಲೀಸ್‌ ಬಂದೋ ಬಸ್ತ್‌ ಏರ್ಪಡಿಸಲಾಗಿತ್ತು.