ಮನೆ ಆರೋಗ್ಯ ಮಧುಮೇಹ ಇದ್ದವರೂ ಮಶ್ರೂಮ್‌ ಸೇವಿಸಬಹುದು

ಮಧುಮೇಹ ಇದ್ದವರೂ ಮಶ್ರೂಮ್‌ ಸೇವಿಸಬಹುದು

0

ಮಧುಮೇಹ ಹಾಗೂ ರಕ್ತದೊತ್ತಡ ಇವೆರಡೂ ಕಾಯಿಲೆಗಳು ಕೂಡ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಈ ಎರಡೂ ಕಾಯಿಲೆಗಳ ಲಕ್ಷಣಗಳು ಕೂಡ, ಮನುಷ್ಯನಲ್ಲಿ ಅಷ್ಟು ಬೇಗನೇ ಕಾಣಿಸಿ ಕೊಳ್ಳುವುದಿಲ್ಲ, ನಿಧಾನಕ್ಕೆ ಮನುಷ್ಯನನ್ನು ಆವರಿಸಿಕೊಳ್ಳುತ್ತಾ ಕೊನೆಗೆ ಆತನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ.

ಈ ಕಾಯಿಲೆಯ ಲಕ್ಷಣಗಳು ಅಷ್ಟು ಬೇಗನೇ ಗೊತ್ತಾಗದೇ ಇರುವುದರಿಂದ ಇದು ಸೈಲೆಂಟ್ ಕಿಲ್ಲರ್ ಆಗಿ ಇಡೀ ದೇಹದ ತುಂಬಾ ತನ್ನದೇ ಆದ ಪ್ರಭಾವ ವನ್ನು ಬೀರಿ ವ್ಯಕ್ತಿಯನ್ನು ನಿಧಾನವಾಗಿ ಕೊಲ್ಲುತ್ತದೆ.

ಸಕ್ಕರೆ ಕಾಯಿಲೆಯ ಬಗ್ಗೆ ಹೇಳುವುದಾದರೆ

• ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಹೋಗು ವಂತಹ ಕಾಯಿಲೆ ಅಲ್ಲವೇ ಅಲ್ಲ! ಇಂತಹ ಸಮಯದಲ್ಲಿ ಸರಿಯಾದ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ವೈದ್ಯರ ಔಷಧಿಗಳನ್ನು ಸರಿಯಾಗಿ ತೆಗೆದುಕೊ ಳ್ಳುವುದರಿಂದ ಮಾತ್ರ, ಈ ಕಾಯಿಲೆಯನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು.

• ಪ್ರಮುಖವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗ ದಂತೆ ನೋಡಿ ಕೊಳ್ಳಬೇಕು. ಇದರ ಮಧ್ಯೆ ಮೊದಲು ಎಲ್ಲಾ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದ ಹಾಗೆ ಕೆಲವೊಂದು ಅನಾರೋಗ್ಯಕರ ಆಹಾರ ಪದಾರ್ಥ ಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು.

• ಮಧುಮೇಹ ಕಾಣಿಸಿಕೊಂಡ ಬಳಿಕ, ಆಹಾರ ಪದ್ಧತಿ ಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಅಕ್ಕಪಕ್ಕದವರು ತಿನ್ನುವ ಹಾಗೆ, ಈ ಕಾಯಿಲೆ ಕಾಣಿಸಿ ಕೊಂಡವರು ತಿನ್ನುವ ಹಾಗಿಲ್ಲ.

• ಅಷ್ಟೇ ಯಾಕೆ ತಿನ್ನುವ ಅನ್ನವನ್ನು ಸಹ ಅಳತೆ ಮಾಡಿ ತಿನ್ನಬೇಕು. ಇನ್ನು ಮೊದಲೇ ಹೇಳಿದ ಹಾಗೆ, ಈ ಕಾಯಿಲೆ ಕಾಣಿಸಿಕೊಳ್ಳುವುದಕ್ಕೆ ಮುಂಚೆ ತಿನ್ನುತ್ತಿದ್ದ ಕೆಲವೊಂದು ಆಹಾರ ಪದಾರ್ಥಗಳನ್ನು ಆನಂತರ ತಿನ್ನುವುದಕ್ಕೆ ಸಾಧ್ಯವಿಲ್ಲ.

• ಇಂತಹ ಸಂದರ್ಭದಲ್ಲಿ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಮುಂದಾಗ ಬೇಕಾಗುತ್ತದೆ.

• ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಅಣಬೆ ಗಳು ಅಥವಾ ಮಶ್ರೂಮ್. ಇದಕ್ಕೆ ಮುಖ್ಯ ಕಾರಣ, ಇವುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆ ಆಗದಂತೆ ತಡೆದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ನೆರವಿಗೆ ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ

• ಕೆಲವರಿಗೆ ಹುಟ್ಟಿದಾಗಿನಿಂದ ಸಕ್ಕರೆಕಾಯಿಲೆ ಕಾಣಿಸಿ ಕೊಂಡರೆ ಇನ್ನು ಕೆಲವರಿಗೆ ಅರ್ಧ ವಯಸ್ಸಿನ ನಂತರ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

• ಆದರೆ ಮಧುಮೇಹ ಬಂದ ಮೇಲೆ ಸಂಪೂರ್ಣ ವಾಗಿ ಒಬ್ಬ ವ್ಯಕ್ತಿಯ ಆಹಾರ ಪದ್ಧತಿ ಬದಲಾಗಿಬಿಡುತ್ತದೆ.

• ಇಂತಹ ಸಂದರ್ಭದಲ್ಲಿ ಪ್ರೊಟೀನ್ ಅಂಶಗಳು, ನಾರಿನ ಅಂಶ, ಕಡಿಮೆ ಕೊಬ್ಬಿನ ಅಂಶ ಇರುವ ಡೈರಿ ಉತ್ಪನ್ನ ಗಳು ಹಾಗೂ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇರುವ ಆಹಾರಗಳನ್ನು ಸೇವನೆ ಮಾಡಬೇಕು.

• ಯಾಕೆಂದ್ರೆ ಇಂತಹ ಆಹಾರಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ವಿಟಮಿನ್ ಬಿ ಅಂಶ

• ಅಣಬೆಯು ಕಡಿಮೆ ಪ್ರಮಾಣದ ಕ್ಯಾಲೋರಿ ಕಂಡು ಬರುವುದರ ಜೊತೆಗೆ ವಿಟಮಿನ್ ಡಿ ವಿಟಮಿನ್ ಬಿ ಅಂಶ ಮತ್ತು polysa ccharid ಅಂಶಗಳು ಹೇರಳವಾಗಿ ಕಂಡು ಬರುತ್ತದೆ.

• ಇವೆಲ್ಲದರ ಜೊತೆಗೆ ಇದರಲ್ಲಿ ಆರೋಗ್ಯಕ ಕಾರ್ಬೊ ಹೈಡ್ರೇಟ್ ಗಳು, ಹೆಚ್ಚಿನ ಪ್ರೋಟೀನ್ ಅಂಶಗಳು, ಖನಿಜಾಂಶಗಳು ಕಂಡು ಬರುವುದರಿಂದ, ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದ ರಿಂದ, ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುವುದು.

 • ಅಣಬೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶಗಳು ದೂರವಾಗಿ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕೂಡ ನಿವಾರಣೆಯಾಗುತ್ತದೆ.

• ಇನ್ನು ಅಣಬೆಗಳಲ್ಲಿ ಸಮೃದ್ಧ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಜೊತೆಗೆ ಕಡಿಮೆ ಸೋಡಿಯಂ ಅಂಶ ಕಂಡು ಬರುವುದರಿಂದ, ದೇಹದಲ್ಲಿ ಉಪ್ಪಿನ ಸಮತೋಲ ನವನ್ನು ಕಾಪಾಡುತ್ತದೆ.

• ಇದರಿಂದ ದೇಹದ ರಕ್ತ ಪರಿಚಲನೆ ಸರಾಗವಾಗಿ ನಡೆ ಯುತ್ತದೆ. ಪ್ರಮುಖವಾಗಿ ಅಧಿಕ ರಕ್ತದೊತ್ತಡ, ಹೃದ ಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇದ್ದವರಿಗೆ ಇದರಿಂದ, ಬಹಳ ಅನುಕೂಲವಿದೆ.

• ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಪ್ರಕಾರ, ನಿಯಮಿತ ವಾಗಿ ಮಶ್ರೂಮ್ ಸೇವನೆ ಮಾಡುವುದ ರಿಂದ, ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಕೂಡ ದೂರ ಮಾಡಬಹು ದಾಗಿದೆ ಎಂದು ಹೇಳಲಾಗಿದೆ.

• ಇದರಲ್ಲಿ ಕಂಡುಬರು ವಂತಹ ಆಂಟಿಆಕ್ಸಿಡೆಂಟ್ ಅಂಶ ಗಳು ಶ್ವಾಸಕೋಶ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ನಂತಹ ತೊಂದರೆಗಳನ್ನು ದೂರ ಮಾಡುತ್ತದೆಯಂತೆ!

• ಇನ್ನು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಅತ್ಯುತ್ತಮವಾಗಿ ನಿರ್ವ ಹಣೆ ಮಾಡುವಲ್ಲಿ ಅಣಬೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಒಳಗೊಂಡಿರುವ ಅಣಬೆ ಅಥವಾ ಮಶ್ರೂಮ್’ನ್ನು ಸೇವನೆ ಮಾಡುವ ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗದಂತೆ ತಡೆಯುವ ಯಾವ ರೀತಿಯ ಅಣಬೆ ಸೂಕ್ತ ಎಂಬುದನ್ನು ವೈದ್ಯರಿಂದ ಕೇಳಿ ಮಾಹಿತಿ ಪಡೆದುಕೊಂಡು, ಆ ಬಳಿಕ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು