ರಾಮ ಎಂದರೆ ಒಮ್ಮೆ ಜಯಲಕ್ಷ್ಮಿಯು ಒಲಿಯುವಳು
ರಾಮ ಎಂದರೆ ಒಮ್ಮೆ ಜಯಲಕ್ಷ್ಮಿಯು ನಲಿಯುವಳು ।।
ರಾಮ ರಾಮ ರಾಮ ರಾಮ ಸೀತಾ ರಾಮ
ರಾಮ ರಾಮ ಪಟ್ಟಾಭಿರಾಮ ರಾಮ ರಾಮ ರಾಮ
ಶ್ರೀ ರಾಮ ನಾಮ ಆನಂದ ಧಾಮ ।।
ರಾಮನಾಮದ ದಿವ್ಯ ಮಹಿಮೆಯ ಆಂಜನೇಯನು ಬಲ್ಲ
ರಾಮನಾಮದ ದಿವ್ಯ ಶಕ್ತಿಯ ವಾಲ್ಮೀಕಿಯು ಬಲ್ಲ
ರಾಮನಾಮದ ಸರ್ವ ಭಾಗ್ಯವ ಗೌತಮ ಋಷಿಯು ಬಲ್ಲ ।।
ಭರತನು ಬಾಳಲಿ ಯಾರು ಕಾಣದ ಆನಂದವನು ಕಂಡ
ಆ ದಶಕಂಠನ ಸೋದರನಂದು ಲಂಕಾಧಿಪತಿಯಾದ
ದ್ವೇಷದ ನೆಪದಲ್ಲಿ ಸ್ಮರಿಸಿ ರಾವಣ ಮುಕ್ತಿ ಹೊಂದಿದ ।।