ಮನೆ ಆರೋಗ್ಯ ಬೇಸಿಗೆಯಲ್ಲಿ ಸೋಂಪು ಕಾಳುಗಳ ಶರಬತ್ ಆರೋಗ್ಯಕ್ಕೆ ಒಳ್ಳೆಯದು

ಬೇಸಿಗೆಯಲ್ಲಿ ಸೋಂಪು ಕಾಳುಗಳ ಶರಬತ್ ಆರೋಗ್ಯಕ್ಕೆ ಒಳ್ಳೆಯದು

0

ನಾವು ಭಾರವಾದ ಆಹಾರಗಳನ್ನು ಸೇವಿಸಿದಾಗ ನಮ್ಮ ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣವಾಗಲಿ ಎನ್ನುವ ಕಾರಣಕ್ಕೆ ಒಂದು ಟೇಬಲ್ ಚಮಚ ಸೋಂಪು ಕಾಳುಗಳನ್ನು ಆನಂತರ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತೇವೆ.

ಕೆಲವರು ಅಡುಗೆಯಲ್ಲಿ ಸೋಂಪು ಕಾಳುಗಳನ್ನು ಬಳಸುತ್ತಾರೆ. ಆದರೆ ಸೋಂಪು ಕಾಳುಗಳ ಪ್ರಯೋಜನ ಕೇವಲ ಜೀರ್ಣಶಕ್ತಿಗೆ ಮಾತ್ರ ಮೀಸಲಾಗಿರುವುದಿಲ್ಲ.

ಜೊತೆಗೆ ಇನ್ನೂ ಹಲವಾರು ಪ್ರಯೋಜನಗಳನ್ನು ಇದರಿಂದ ನಿರೀಕ್ಷೆ ಮಾಡಬಹುದು. ಅದರಲ್ಲಿ ಪ್ರಮುಖವಾಗಿ ಬೇಸಿಗೆ ಕಾಲಕ್ಕೆ ದೇಹದ ತಂಪು ನಿರ್ವಹಣೆ ಮಾಡುವ ಕೆಲಸವನ್ನು ಸಹ ಮಾಡುತ್ತದೆ. ಬೇಸಿಗೆ ಕಾಲದ ನಿಮ್ಮ ದೇಹದ ಉಷ್ಣಾಂಶವನ್ನು ಸೋಂಪು ಕಾಳುಗಳು ನಿಯಂತ್ರಣ ಮಾಡುತ್ತವೆ.

ಸೋಂಪು ಕಾಳುಗಳ ಪ್ರಭಾವ

• ಸೋಂಪು ಕಾಳುಗಳು ನಮ್ಮ ದೇಹವನ್ನು ತಂಪು ಮಾಡುವ ಪ್ರಯತ್ನ ಮಾಡುತ್ತವೆ.

• ಇವುಗಳಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದೆ. ಹಾಗಾಗಿ ಯಾವಾಗಲೂ ದೇಹ ಹಾಗೂ ಮನಸ್ಸನ್ನು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ಸೋಂಪು ಕಾಳುಗಳ ನೀರು

• ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೋಂಪು ಕಾಳುಗಳ ನೀರು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾ ಗುತ್ತದೆ.

• ಇದರಿಂದ ಬಾಯಿಯ ಆರೋಗ್ಯ ಕೂಡ ಸುಧಾರಿಸುತ್ತದೆ. ಬಾಯಿಯ ದುರ್ವಾಸನೆ ದೂರವಾಗುತ್ತದೆ.

• ಆಯುರ್ವೇದ ಶಾಸ್ತ್ರ ಹೇಳುವಂತೆ ದೇಹದ ಮೂರು ಬಗೆಯ ದೋಷಗಳನ್ನು ಇದು ಸರಿಪಡಿಸುತ್ತದೆ ಮತ್ತು ನರಮಂಡಲವನ್ನು ಶಾಂತ ಗೊಳಿಸುತ್ತದೆ.

ಪೊಟಾಶಿಯಂ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ

• ಇನ್ನು ಸೋಂಪು ಕಾಳುಗಳಲ್ಲಿ ಪೊಟಾಶಿಯಂ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.

• ಇವು ರಕ್ತ ಸಂಚಾರದಲ್ಲಿ ಏರುಪೇರಾಗದಂತೆ ನೋಡಿ ಕೊಂಡು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಜೊತೆಗೆ ಹೃದಯದ ಸಮಸ್ಯೆಗಳಿಂದ ಕೂಡ ನಮ್ಮನ್ನು ದೂರವರಿಸುತ್ತದೆ.

ಗ್ಯಾಸ್ಟ್ರಿಕ್-ಹೊಟ್ಟೆ ನೋವು ದೂರಮಾಡುತ್ತದೆ

• ಬೇಸಿಗೆ ಕಾಲದಲ್ಲಿ ದೇಹದ ಉತ್ತಮ ಆರೋಗ್ಯಕ್ಕೆ ಹಾಗೂ ಆರೋಗ್ಯಕರ ಜೀರ್ಣ ಶಕ್ತಿಗೆ ಅನುಕೂಲವಾಗುವಂತೆ ಸೋಂಪು ಕಾಳುಗಳನ್ನು ಯಾವುದಾದರೂ ಒಂದು ರೂಪದಲ್ಲಿ ಸೇವಿಸಬಹುದು.

• ಇದು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ನೋವು ಸಮಸ್ಯೆ ಯನ್ನು ಸಹ ದೂರ ಮಾಡುತ್ತದೆ ಮತ್ತು ನೀವು ಇದನ್ನು ಮಧ್ಯಾಹ್ನ ಹಾಗೂ ರಾತ್ರಿ ಊಟದ ನಂತರ ಒಂದು ಟೀ ಚಮಚ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬಹುದು.

ಸೋಂಪು ಕಾಳುಗಳ ಶರಬತ್ ತಯಾರು ಮಾಡುವ ವಿಧಾನ

ಎರಡು ವಿಧಾನಗಳಲ್ಲಿ ನೀವು ಸೋಂಪು ಕಾಳುಗಳ ಶರಬತ್ ತಯಾರಿಸಬಹುದು. ಇದು ತುಂಬಾ ಸಿಂಪಲ್. ಕುದಿಯುವ ನೀರಿನಲ್ಲಿ ಸೋಂಪು ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಶೋಧಿಸಿ ಆರಿಸಿ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ.

ಹೀಗೂ ಮಾಡಿ ಕುಡಿಯಬಹುದು…

• ಇಲ್ಲವೆಂದರೆ ಇಡೀ ರಾತ್ರಿ ಸೋಂಪು ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೋಸಿಕೊಂಡು ಕುಡಿಯಬಹುದು.

• ಬೇಕೆಂದರೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಕೂಡ ಸೇವಿಸಬಹುದು. ಸೋಂಪು ಕಾಳುಗಳನ್ನು ಸ್ವಲ್ಪ ಹುರಿದು ಬಳಸುವುದರಿಂದ ನೀರಿನಲ್ಲಿ ಒಳ್ಳೆಯ ಸುವಾಸನೆ ಇರುತ್ತದೆ.