ಹಿಂದುಗಳಿಗೆ ಹೊಸ ವರುಷದ ಭಾವನೆ ಮೂಡಿಸುವ 2023 ರ ಚಾಂದ್ರಮಾನ ಯುಗಾದಿ ಹಬ್ಬಕ್ಕೆ ಕ್ಷಣಗಣನೆ ಶುರು ವಾಗಿದೆ. ಮನಸ್ಸಿನ ಹೊಸತನದ ಜೊತೆ ಮನೆಯೂ ಕೂಡ ಹೊಸದಾಗಿ ಕಾಣುವಂತೆ ಬಾಗಿಲಿಗೆ ತಳಿರು ತೋರಣ ಹಾಗೂ ಹೊಸಲಿಗೆ ರಂಗೋಲಿ ಹಾಕಿ ಮನೆಯಲ್ಲಿ ದೇವರಿಗೆ ನೈವೇದ್ಯಕ್ಕಾಗಿ ಒಬ್ಬಟ್ಟು ತಯಾರು ಮಾಡುವ ಸಂಪ್ರದಾಯದಲ್ಲಿ ಯುಗಾದಿ ಹಬ್ಬ ಮನೆ ಮನೆಗೆ ಬರಲಿದೆ.
ಬಿರು ಬೇಸಿಗೆಯಲ್ಲಿ ಬಂದಿರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆಯವರೆಲ್ಲರ ಆರೋಗ್ಯವನ್ನು ಕಾಳಜಿ ಮಾಡುವ ನಿಟ್ಟಿನಲ್ಲಿ ನೋಡುವು ದಾದರೆ ಇಲ್ಲೊಂದು ಹೊಸ ರೆಸಿಪಿ ತುಂಬಾ ಟ್ರೆಂಡಿಂಗ್ ಆಗಿದೆ. ಅದೇ ಯುಗಾದಿ ಪಚಡಿ. ಆದರೆ ತುಂಬಾ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಸಾಂಪ್ರದಾಯಿಕವಾಗಿ ಹಬ್ಬ ಮಾಡುವವರಿಗೆ ಗೊತ್ತಿರಬಹುದು.
ಯುಗಾದಿ ಹಬ್ಬದ ವಿಶೇಷತೆ
• ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲಾ ಕಡೆ ಆಚರಿಸುವ ಯುಗಾದಿ ಹಬ್ಬ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಸಂದರ್ಭದಲ್ಲಿ ತಯಾರು ಮಾಡುವ ಯುಗಾದಿ ಪಚಡಿ ಜನರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
• ಏಕೆಂದರೆ ಇದರಲ್ಲಿ ಬಳಸಲಾಗುವ ಪ್ರತಿಯೊಂದು ಆಹಾರ ಪದಾರ್ಥ ಕೂಡ ಅಷ್ಟು ಉತ್ತಮ ಪ್ರಮಾಣದ್ದು. ಹಾಗಾದರೆ ಇದನ್ನು ತಯಾರು ಮಾಡಲು ಏನೇನು ಬಳಸುತ್ತಾರೆ ಎಂದು ನೋಡುವುದಾದರೆ…
ಯುಗಾದಿ ಪಚಡಿಗೆ ಬೇಕಾಗುವ ಸಾಮಾಗ್ರಿಗಳು
• ಹುಣಸೆ ಹಣ್ಣು, ಬೆಲ್ಲ, ಬೇವು, ಮೆಣಸಿನಕಾಯಿ, ಮಾವಿನಕಾಯಿ ಮತ್ತು ಉಪ್ಪು. ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳ ಸೀಸನ್ ಈಗಲೇ ಇರುವುದು. ಹಾಗಾಗಿ ಇವುಗಳನ್ನೇ ಬಳಸಿ ಯುಗಾದಿ ಪಚಡಿ ತಯಾರು ಮಾಡುತ್ತಾರೆ.
• ಒಂದೊಂದು ಆಹಾರ ಪದಾರ್ಥ ಕೂಡ ಮನುಷ್ಯನ ಒಂ ದೊಂದು ಭಾವನೆಗಳನ್ನು ವ್ಯಕ್ತಪಡಿ ಸುತ್ತದೆ ಎಂದು ಹೇಳುತ್ತಾರೆ.
• ಅಂದರೆ ಸಂತೋಷ, ಆಶ್ಚರ್ಯ, ಕೋಪ, ಭಯ, ಜಿಗುಪ್ಸೆ, ಕಿರಿಕಿರಿ ಹೀಗೆ. ಎಲ್ಲದರ ಸಮ್ಮಿಶ್ರಣದಿಂದ ತಯಾರಾದ ಯುಗಾದಿ ಪಚಡಿ ಆರೋಗ್ಯಕ್ಕೆ ಬೇಸಿಗೆಯಲ್ಲಿ ಅದ್ಭುತ ಲಾಭಗಳನ್ನು ಕೊಡುತ್ತದೆ. ಇದರಲ್ಲಿ ಬಳಸಲಾಗುವ ಪದಾರ್ಥ ಗಳ ಆರೋಗ್ಯ ಪ್ರಯೋಜನಗಳನ್ನು ನೋಡು ವುದಾದರೆ..
ಬೇವು
• ಬೇವಿನ ಎಲೆಗಳು, ಚಕ್ಕೆ, ಬೇರು, ಬೇವಿನ ಹೂವು ಎಲ್ಲವೂ ಸಹ ಆರೋಗ್ಯಕ್ಕೆ ಒಳ್ಳೆಯದು. ಎಲ್ಲವೂ ಔಷಧೀಯ ಪ್ರಯೋಜನಗಳನ್ನು ಹೊಂದಿವೆ.
• ವಿವಿಧ ಬಗೆಯ ಚರ್ಮದ ಸೋಂಕುಗಳು, ವೈರಲ್ ತೊಂದ ರೆಗಳು, ಸಕ್ಕರೆ ಕಾಯಿಲೆ ಮತ್ತು ಮಲೇರಿಯಾ ಇತ್ಯಾದಿಗಳಿಗೆ ಇದು ರಾಮಬಾಣ.
• ಮಾವಿನಕಾಯಿ ಮತ್ತು ಹುಣಸೆ ಹಣ್ಣಿನ ಜೊತೆ ಬೇವು ಸೇವನೆ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದರಿಂದ ದೇಹದ ಒಳಗಿನ ಕೀಟಾಣುಗಳು ನಶಿಸುತ್ತವೆ.
ಮಾವಿನಕಾಯಿ
• ಮಾವಿನಕಾಯಿಗೆ ಈಗ ಸೀಸನ್ ಶುರುವಾಗಿದೆ. ಮಾವಿನಕಾಯಿ ತಿನ್ನುವವರಿಗೆ ಒಳಗಡೆ ರಕ್ತನಾಳಗಳು ಕಟ್ಟಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.
• ಹೊಸ ರಕ್ತನಾಳಗಳು ಸೃಷ್ಟಿಯಾಗಲು ಸಹ ಮಾವಿನ ಕಾಯಿ ಕಾರಣವಾಗುತ್ತದೆ ಎಂದರೆ ನಿಜಕ್ಕೂ ಆಶ್ಚರ್ಯ. ಇದು ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಯನ್ನು ದೂರ ಮಾಡುತ್ತದೆ. ಬ್ಯಾಕ್ಟೀರಿಯಾ ಸೋಂಕುಗಳಿಂದ ಕರುಳಿನ ಭಾಗವನ್ನು ರಕ್ಷಿಸುತ್ತದೆ.
ಬೆಲ್ಲ
• ಬೆಲ್ಲ ತಿನ್ನುವುದರಿಂದ ನಮ್ಮ ಲಿವರ್ ಕ್ಲೀನ್ ಆಗುತ್ತದೆ ಎಂದು ತಿಳಿಯಲಾಗಿದೆ. ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳು ದೂರಾಗಲು ಬೆಲ್ಲ ಸಹಾಯ ಮಾಡುತ್ತದೆ.
• ಯುಗಾದಿ ಪಚಡಿಯಲ್ಲಿ ಬಳಸಲಾಗುವ ಬೆಲ್ಲ ತನ್ನಲ್ಲಿ ಅಪಾರ ಪ್ರಮಾಣದ ಜಿಂಕ್ ಮತ್ತು ಸೆಲನಿಯಂ ಹೊಂದಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಮತ್ತು ಹಲವಾರು ಸೋಂಕುಗಳು ನಮ್ಮಿಂದ ದೂರವಾಗುತ್ತವೆ.
ಹುಣಸೆಹಣ್ಣು
• ಯುಗಾದಿ ಪಚಡಿಯಲ್ಲಿ ಬಳಸಲಾಗುವ ಹುಣಸೆಹಣ್ಣು ಒಂದು ಅದ್ಭುತ ಆರೋಗ್ಯ ಪ್ರಯೋಜನವನ್ನು ತನ್ನದೇ ಆದ ರೀತಿಯಲ್ಲಿ ನೀಡುವ ಆಹಾರ ಪದಾರ್ಥವಾಗಿದೆ.
• ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸಿ ಹೊಟ್ಟೆಯ ಕಿರಿಕಿರಿಯನ್ನು ಇದು ದೂರ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುವ ಹುಣಸೆಹಣ್ಣು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಸಹ ತಗ್ಗಿಸುತ್ತದೆ.
• ದೇಹದ ಯಾವುದೇ ಭಾಗದ ಉರಿಯುತ ನಿವಾರಣೆಯಲ್ಲಿ ಹುಣಸೆಹಣ್ಣಿನ ಪಾತ್ರ ತುಂಬಾ.
ಯುಗಾದಿ ಪಚಡಿ ಮಾಡುವ ವಿಧಾನ
• ಮೊದಲಿಗೆ ಒಂದು ಪಾತ್ರೆಯಲ್ಲಿ 5 ಕಪ್ ನೀರು ತೆಗೆದು ಕೊಳ್ಳಿ. ಎರಡು ಟೇಬಲ್ ಚಮಚ ಸಿಪ್ಪೆ ತೆಗೆದ ಮಾವಿನಕಾಯಿ ಚೂರುಗಳನ್ನು ತೆಗೆದುಕೊಳ್ಳಿ.
• ಒಂದು ಟೇಬಲ್ ಚಮಚ ಬೇವಿನ ಹೂವು ಮತ್ತು ಮೂರು ಟೇಬಲ್ ಚಮಚ ಬೆಲ್ಲ ಸಹ ಬೇಕಾಗುತ್ತದೆ.
• ಈಗ ಇದಕ್ಕೆ ಒಂದು ಟೇಬಲ್ ಚಮಚ ಹುಣಸೆ ಹಣ್ಣಿನ ರಸ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರ ಸೇರಿಸಬೇಕು.
• ಎಲ್ಲವನ್ನು ಮಿಕ್ಸ್ ಮಾಡಿದರೆ ಯುಗಾದಿ ಪಚಡಿ ಸವಿ ಯಲು ಸಿದ್ದ. ಮನೆಯವರೆಲ್ಲರೂ ಸೇವಿಸಬಹುದಾದ ಒಂದು ಆರೋಗ್ಯಕರ ರೆಸಿಪಿ ಇದಾಗಿದೆ.