ಮನೆ ಉದ್ಯೋಗ KSAAD ಲೆಕ್ಕ ಸಹಾಯಕರು ಹುದ್ದೆಗೆ ಅರ್ಜಿ ಸ್ವೀಕಾರ ಆರಂಭ

KSAAD ಲೆಕ್ಕ ಸಹಾಯಕರು ಹುದ್ದೆಗೆ ಅರ್ಜಿ ಸ್ವೀಕಾರ ಆರಂಭ

0

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಲೆಕ್ಕ ಸಹಾಯಕರು ಹುದ್ದೆಗೆ ಬಿಕಾಂ / ಬಿಬಿಎಂ / ಬಿಬಿಎ ಡಿಗ್ರಿ ಪಾಸ್ ಮಾಡಿದವರಿಂದ ಅರ್ಜಿ ಆಹ್ವಾನಿಸಿ, ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸದರಿ ಹುದ್ದೆಗಳಿಗೆ ಇದೀಗ ಅರ್ಜಿ ಸ್ವೀಕಾರ ನಿನ್ನೆಯಿಂದ (ಮಾರ್ಚ್ 23, 2023) ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 23 ವರೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಕೊನೆ ಕ್ಷಣದ ವರೆಗೆ ಕಾಯದೇ ಬೇಗ ಬೇಗ ಅರ್ಜಿ ಹಾಕಿರಿ. ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಿನಂತೆ ನೀಡಲಾಗಿದೆ.

ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್ / ಅಪ್ ಡೇಟ್

ಎರಡನೇ ಹಂತ : ಅಪ್ಲಿಕೇಶನ್ ಸಬ್ಮಿಷನ್

ಮೂರನೇ ಹಂತ : ಅಪ್ಲಿಕೇಶನ್ ಶುಲ್ಕ ಪಾವತಿ ಮಾಡುವುದು.

ಅರ್ಜಿ ಸಲ್ಲಿಕೆ ಹೇಗೆ?

– ಕೆಪಿಎಸ್ಸಿ’ಯ ವೆಬ್ಸೈಟ್ ‘http://www.kpsc.kar.nic.in/’ ಗೆ ಭೇಟಿ ನೀಡಿ.

– ತೆರೆದ ಮುಖಪುಟದಲ್ಲಿ ‘Apply Online for Various Notifications’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ಓಪನ್ ಆಗುವ ಪೇಜ್ನಲ್ಲಿ ‘KSAAD Account Assistant Application’ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ.

– ಈಗಾಗಲೇ ಕೆಪಿಎಸ್ಸಿ ವೆಬ್ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್ವರ್ಡ್ ನೀಡಿ ಲಾಗಿನ್ ಆಗಿ.

– ನಂತರ ಅಪ್ಲಿಕೇಶನ್ ಸಲ್ಲಿಸಬಹುದು.

– ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್ ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಲೆಕ್ಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ 23-04-2023 ವರೆಗೆ ಅವಕಾಶ ನೀಡಲಾಗುತ್ತದೆ. ಹಾಗೂ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 24-04-2023. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಕೆಪಿಎಸ್’ಸಿ ಬಿಡುಗಡೆ ಮಾಡಲಿದೆ.

ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ವೇತನ ಶ್ರೇಣಿ ರೂ.27,650-52,650 ಇರುತ್ತದೆ.