ಮನೆ ಆರೋಗ್ಯ ಜೇನುತುಪ್ಪ-ದಾಲ್ಚಿನ್ನಿ ಮಿಶ್ರಿತ ದೇಸಿ ಪಾನೀಯ ಕುಡಿದರೆ, ದೇಹದ ತೂಕ ಕಮ್ಮಿ ಆಗುತ್ತೆ

ಜೇನುತುಪ್ಪ-ದಾಲ್ಚಿನ್ನಿ ಮಿಶ್ರಿತ ದೇಸಿ ಪಾನೀಯ ಕುಡಿದರೆ, ದೇಹದ ತೂಕ ಕಮ್ಮಿ ಆಗುತ್ತೆ

0

ಕೆಲವರಿಗೆ ಅವರ ದೇಹದ ತೂಕವೇ ಶಾಪ ಎಂದು ಹೇಳಬಹುದು! ಇದರಿಂದಾಗಿ ಪಡಬಾರದ ಕಷ್ಟಗಳನ್ನು ಪಡುತ್ತಿರುತ್ತಾರೆ. ಯಾಕೆ ಹೀಗೆ ಎಂದು ನೋಡುವುದಾದರೆ, ಪ್ರತಿದಿನ ಅನಾರೋಗ್ಯ ಕರ ಆಹಾರಗಳನ್ನು ಸೇವನೆ ಮಾಡುವುದರ ಜೊತೆಗೆ ಜಡಜೀವನ ಶೈಲಿ ಅನುಸರಿಸುವವರಿಗೆ ದೇಹದ ಆರೋಗ್ಯ ಹದಗೆಡಿಸಿಕೊಳ್ಳುವುದು ಮಾತ್ರವಲ್ಲದೆ, ದಿನಾ ಹೋದ ಹಾಗೆ ದೇಹದ ತೂಕ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಕೊನೆಗೆ ಈ ಸಮಸ್ಯೆಯಿಂದ ಹೊರಬರಲು ಅವರು-ಇವರು ಹೇಳಿದ ಸಲಹೆಗಳನ್ನು ಅನುಸರಿಸಿ ಕೊಂಡು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಉತ್ಪನ್ನಗಳನ್ನು ತೆಗೆದುಕೊಂಡು ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಲು ಪ್ರಯತ್ನ ಪಡುತ್ತಿರುತ್ತಾರೆ.

ಆದರೆ ಕೊನೆಗೆ ಇದರಿಂದಾಗಿ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳು ಹಾಗೂ ಅಡ್ಡ ಪರಿಣಾಮಗಳು ಅನುಭವಕ್ಕೆ ಬಂದ ಮೇಲೆ, ಸಪ್ಪೆ ಮುಖ ಹಾಕಿಕೊಂಡು ತಮ್ಮಲ್ಲೇ ನೋವನ್ನು ಅನುಭಿಸುತ್ತಾರೆ.

ನೈಸರ್ಗಿಕ ವಿಧಾನದಲ್ಲಿ ತೂಕ ಇಳಿಸಿಕೊಂಡರೆ ಒಳ್ಳೆಯದು

• ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ, ದೇಹದ ತೂಕ ವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿ ಕೊಂಡರೆ ಬಹಳ ಒಳ್ಳೆಯದು.

• ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ದಾಲ್ಚಿನ್ನಿ ಹಾಗು ಜೇನುತುಪ್ಪ ಮಿಶ್ರಣ ಮಾಡಿದ ಪಾನೀಯ! ಹೌದು ಈ ಪಾನೀಯವನ್ನು ಕುಡಿಯುವುದರಿಂದ, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಸಂಶೋಧಕರ ಪ್ರಕಾರ

• ಜೇನುತುಪ್ಪ ಸವಿದರೆ ಬಾಯಿಗೆ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ, ಆರೋಗ್ಯವನ್ನು ಕೂಡ ವೃದ್ಧಿಯಾ ಗುವುದು ಎಂಬುದು ನಮಗೆಲ್ಲಾ ಗೊತ್ತೇ ಇದೆ.

• ಆದರೆ ನಿಮಗೆ ಗೊತ್ತಿರಲಿ, ಜೇನು ತುಪ್ಪದ ಪ್ರಯೋಜನ ಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ದೇಹದ ತೂಕವನ್ನು ಇಳಿಸಲು ಕೂಡ ನೆರವಿಗೆ ಬರುತ್ತದೆ.

• ಈ ಬಗ್ಗೆ ಅಧ್ಯಯನದ ವರದಿಯ ಪ್ರಕಾರ ಜೇನುತುಪ್ಪ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ, ಅಷ್ಟೇ ಅಲ್ಲದೆ ದೇಹದಿಂದ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶವನ್ನು ಕೂಡ ಕರಗಿಸುವ ಕೆಲಸ ಮಾಡುತ್ತದೆ ಎಂದು ಅಮೆರಿಕದ ಪ್ರತಿಷ್ಠಿತ ಜರ್ನಲ್ ಅಫ್ ಅಮೇರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ಸಂಸ್ಥೆಯು ತಮ್ಮ ವರದಿಯಲ್ಲಿ ತಿಳಿಸಿದೆ.

ದಾಲ್ಚಿನ್ನಿ

• ದಾಲ್ಚಿನ್ನಿ ಎನ್ನುವ ಅತ್ಯದ್ಭುತ ಗಿಡಮೂಲಿಕೆ, ರುಚಿಕರ ವಾದ ಮಸಾಲೆ ಪದಾರ್ಥವಾಗಿದೆ. ಆಯುರ್ವೇದ ಕಾಲ ದಿಂದಲೂ ಕೂಡ ಇದನ್ನು ಔಷಧೀಯ ರೂಪದಲ್ಲಿ ಬಳಸುತ್ತಾ ಬರಲಾಗಿದೆ.

• ಇನ್ನು ದೇಹದ ತೂಕ ಇಳಿಸುವ ವಿಷ್ಯದಲ್ಲಿಯೂ ಕೂಡ, ತುಂಬಾನೇ ಪರಿಣಾಮಕಾರಿಯಾಗಿ ಸಹಾಯಕ್ಕೆ ಬರುತ್ತದೆ. ಬಹು ಮುಖ್ಯವಾಗಿ ಹೊಟ್ಟೆಯ ಭಾಗದ ಕೊಬ್ಬು ಕರಗಿ ಸುವಲ್ಲಿ ಇದರ ಪಾತ್ರ ಮರೆಯುವ ಹಾಗಿಲ್ಲ.

ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ

• ದಾಲ್ಚಿನ್ನಿ ಪುಡಿ ಭಾರತದ ಪುರಾತನ ಸಾಂಬಾರ ಪದಾರ್ಥ ಎಂದೇ ಹೆಸರುವಾಸಿಯಾಗಿದೆ. ಹಿಂದಿನ ಕಾಲದಿಂದಲೂ ಕೂಡ ಇದನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಕೆ ಮಾಡುತ್ತಲೇ ಬರಲಾಗುತ್ತಿದೆ.

• ಪ್ರಮುಖವಾಗಿ ಈ ಗಿಡಮೂಲಿಯನ್ನು, ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಜೀರ್ಣಾಂಗಗಳ ಕಾರ್ಯ ಚಟುವಟಿಕೆಗಳು ಸರಿಯಾಗಿ ನಡೆಯುತ್ತವೆ. ಅಷ್ಟೇ ಅಲ್ಲ, ಮೇದೋ ಜೀರಕ ಗ್ರಂಥಿಯನ್ನೂ ಪ್ರಚೋದಿಸಿ ಇನ್ಸುಲಿನ್ ಹೆಚ್ಚು ಸ್ರವಿಸಲು ನೆರವಾಗುತ್ತದೆ

ದಾಲ್ಚಿನ್ನಿ ಪ್ರಯೋಜನಗಳು

• ಅಧ್ಯಯನಗಳು ಹೇಳುವಂತೆ ದಾಲ್ಚಿನ್ನಿಗಳಲ್ಲಿ ಪ್ರಬಲ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಪ್ಯಾರಾಸೈಟ್ ಲಕ್ಷಣಗಳು ಕಂಡು ಬರುವುದರ ಜೊತೆಗೆ ಬೇರೆ ಬೇರೆ ರೂಪಗಳಲ್ಲಿ ಈ ಮೂಲಿಕೆಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ, ಇರುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಏರಿಕೆಯಾಗದಂತೆ ನೋಡಿಕೊಂಡು, ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.

• ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸುಲಿನ್ ಪ್ರಮಾಣವನ್ನು ಉತ್ತೇಜಿಸುತ್ತದೆ ಹಾಗೂ ಮೆಟಬಾಲಿಸಂ ಪ್ರಕ್ರಿಯೆಯನ್ನು ವೃದ್ಧಿಸುತ್ತದೆ. ಇದರಿಂದ ದೇಹದ ತೂಕ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.

ಜೇನುತುಪ್ಪ ಕೂಡ ದಾಲ್ಚಿನ್ನಿ ಅಷ್ಟೇ ಪವರ್ ಫುಲ್

• ದಾಲ್ಚಿನ್ನಿ ತರಹ ಜೇನುತುಪ್ಪ ಕೂಡ ಅಷ್ಟೇ. ತನ್ನಲ್ಲಿ ಹಲವಾರು ಬಗೆಯ ವಿಟಮಿನ್ಸ್ ಗಳು, ಖನಿಜಾಂಶಗಳು ಹಾಗೂ ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಒಳ ಗೊಂಡಿರು ವುದರಿಂದ ಇದು ಹೊಟ್ಟೆಯ ಹಸಿವನ್ನು ನಿಯಂತ್ರಣ ಮಾಡಿ, ದೇಹದ ತೂಕ ನಿಯಂತ್ರಣ ಮಾಡಲು ನೆರವಾಗುತ್ತದೆ.

• ಎಲ್ಲಾಕ್ಕಿಂತ ಪ್ರಮುಖವಾಗಿ ಆರೋಗ್ಯಕ್ಕೆ ಮಾರಕ ವಾಗುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ, ದೇಹದ ತೂಕ ನಿಯಂತ್ರಣ ಮಾಡುತ್ತದೆ.

ಈ ಪಾನೀಯ ರೆಡಿ ಮಾಡುವುದು ಹೇಗೆ?

• ಮೊದಲಿಗೆ ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ, ಗ್ಯಾಸ್ ಒಲೆ ಅಫ್ ಮಾಡಿ

• ಸ್ವಲ್ಪ ಹೊತ್ತು ಇದನ್ನು ಆರಲು ಬಿಡಿ.

• ಆಬಳಿಕ ಈ ಪಾನೀಯಕ್ಕೆ ಅರ್ಧ ಟೀ ಚಮಚ ದಾಲ್ಚಿನ್ನಿ ಪೌಡರ್ ಹಾಗೂ ಒಂದು ಟೀ ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

• ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣ ಮಾಡಿದ ಈ ಪಾನಿಯವನ್ನು, ಪ್ರತಿದಿನ ಊಟಕ್ಕಿಂತ ಮುಂಚೆ ಕುಡಿದರೆ ಒಳ್ಳೆಯದು.

• ಇನ್ನು ರಾತ್ರಿ ನಿದ್ರೆ ಮಾಡುವ ಮುಂಚೆ, ಕುಡಿದರೆ ದೇಹದ ತೂಕ ಸುಲಭವಾಗಿ ನಿಯಂತ್ರಣ ವಾಗುತ್ತದೆ.