ಮನೆ ಕ್ರೀಡೆ ಈ 4 ತಂಡಗಳೇ ಪ್ಲೇಆಫ್ ಪ್ರವೇಶಿಸಲಿವೆ: ಕ್ರಿಸ್ ಗೇಲ್

ಈ 4 ತಂಡಗಳೇ ಪ್ಲೇಆಫ್ ಪ್ರವೇಶಿಸಲಿವೆ: ಕ್ರಿಸ್ ಗೇಲ್

0

ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್ 16 ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ಗೆ ಸೋಲುಣಿಸಿ ಗುಜರಾತ್ ಟೈಟಾನ್ಸ್ ತಂಡವು ಶುಭಾರಂಭ ಮಾಡಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಈ ಬಾರಿ ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್.

ಕ್ರಿಸ್ ಗೇಲ್ ಅವರ ಪ್ರಕಾರ, ಈ ಬಾರಿಯ ಐಪಿಎಲ್​ನ ಲೀಗ್​ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಆಫ್ ​ಗೆ ಪ್ರವೇಶಿಸಲಿದೆ. ತಂಡದಲ್ಲಿ ಕೆಎಲ್ ರಾಹುಲ್​ ಸೇರಿದಂತೆ ಪ್ರಮುಖ ಆಟಗಾರರಿರುವುದರಿಂದ ಎಲ್ ​​ಎಸ್ ​ಜಿ ಮುಂದಿನ ಹಂತಕ್ಕೇರಲಿದೆ ಎಂದು ಗೇಲ್ ಹೇಳಿದ್ದಾರೆ.

ಇನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಬಾರಿ ಕೂಡ ಪ್ಲೇಆಫ್ ಹಂತದಲ್ಲಿ ಕಾಣಿಸಿಕೊಳ್ಳಲಿದೆ. ಬಲಿಷ್ಠ ಪಡೆಯನ್ನು ಹೊಂದಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಕೂಡ ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಗೇಲ್ ತಿಳಿಸಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಸಹ ಪ್ಲೇಅಫ್​ ಆಡುವುದರಲ್ಲಿ ಅನುಮಾನವೇ ಇಲ್ಲ. ಈ ಬಾರಿ ಮುಂಬೈ ತಂಡ ಕೂಡ ಬಲಿಷ್ಠವಾಗಿದ್ದು, ಹೀಗಾಗಿ ಅವರು ಸಹ ಪ್ಲೇಆಫ್​ ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಕಳೆದ ಸೀಸನ್ ​ನ ರನ್ನರ್ ಅಪ್ ತಂಡ ರಾಜಸ್ಥಾನ್ ರಾಯಲ್ಸ್ ಕೂಡ ಈ ಬಾರಿ ಟಾಪ್-4 ಗೆ ಎಂಟ್ರಿ ಕೊಡಲಿದೆ. ಆರ್​ಆರ್ ತಂಡದಲ್ಲಿ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್​ರಂತಹ ಸ್ಟಾರ್ ಆಟಗಾರರಿದ್ದು, ಅವರು ಸಹ ಪ್ಲೇಆಫ್​ಗೆ ಪ್ರವೇಶಿಸಲಿದೆ ಎಂದು ಕ್ರಿಸ್ ಗೇಲ್ ತಿಳಿಸಿದ್ದಾರೆ.