ಮನೆ ಸುದ್ದಿ ಜಾಲ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಓದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು: ಆರ್. ರಘುನಂದನ್

ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಓದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು: ಆರ್. ರಘುನಂದನ್

0

ಮೈಸೂರು: ಪ್ರಸ್ತುತ ದಿನಗಳಲ್ಲಿ ಕೇವಲ ಉದ್ಯೋಗಕ್ಕಾಗಿ ಓದು ಎಂಬಂತಾಗಿದೆ. ಇದರ ಬದಲು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಓದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಜಿಸಿಟಿಇ ಪ್ರಾಂಶುಪಾಲ ಮತ್ತು ಸಹ ನಿರ್ದೇಶಕರು (ಅಭಿವೃದ್ಧಿ) ಆರ್. ರಘುನಂದನ್ ಸಲಹೆ ನೀಡಿದರು.

ನಜರ್‌ ಬಾದ್‌ ನ ವಸಂತ್‌ಮಹಲ್‌ ನಲ್ಲಿರುವ ಸರ್ಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನಲ್ಲಿ (ಜಿಸಿಟಿಇ) ಈಚೆಗೆ ನಡೆದ ‘ವಸಂತಯಾನ’ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಸ್ವಾಗತಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರು ದೃಢ ಸಂಕಲ್ಪ ಮಾಡಿದರೆ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡಲು ಅವಕಾಶವಿದೆ ಎಂದರು.

ಹಿಂದೆ ಶಿಕ್ಷಕರು ಕಾವ್ಯದ ಬಗ್ಗೆ ಪಾಠ ಮಾಡುವಾಗ ಕವಿಯನ್ನು ಪರಿಚಯಿಸುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡುತ್ತಿತ್ತು ಎಂದು ಹೇಳಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರವಾಚಕರಾದ ಸೋಮಶೇಖರಯ್ಯ, ಮಲ್ಲೇಸ್ವಾಮಿ, ಪುರುಷೋತ್ತಮ್, ಎಸ್. ಸ್ವಾಮಿ ಮಾತನಾಡಿದರು.