ಮನೆ ಆರೋಗ್ಯ 5 ತಿಂಗಳಲ್ಲಿ ಮೊದಲ ಬಾರಿಗೆ 4 ಸಾವಿರ ಗಡಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ

5 ತಿಂಗಳಲ್ಲಿ ಮೊದಲ ಬಾರಿಗೆ 4 ಸಾವಿರ ಗಡಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ

0

ನವದೆಹಲಿ: ಕಳೆದ 5 ತಿಂಗಳಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಬುಧವಾರ ದೇಶದಲ್ಲಿ 4,435 ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳಿದೆ.

Join Our Whatsapp Group

ಕಳೆದ ವರ್ಷ ಸೆಪ್ಟೆಂಬರ್ 25 ರಂದು ಒಟ್ಟು 4,777 ಪ್ರಕರಣಗಳು ದಾಖಲಾಗಿದ್ದವು. ಇದಾದ ಬಳಿಕ 5 ತಿಂಗಳು 13 ದಿನಗಳ ನಂತರ ಒಂದೇ ದಿನದಲ್ಲಿ 4,435 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿರುವುದು ಇದೇ ಮೊದಲು.

ಇದರೊಂದಿಗೆ ಭಾರತದ ಕೋವಿಡ್19 ಪ್ರಕರಣಗಳ ಸಂಖ್ಯೆ 4.47 ಕೋಟಿಗೆ (4,47,33,719) ಏರಿದೆ. 15 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 5,30,916 ಕ್ಕೆ ಏರಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,79,712 ಕ್ಕೆ ಏರಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ತಲಾ ನಾಲ್ವರು ಮೃತಪಟ್ಟಿದ್ದು, ಛತ್ತೀಸ್ಗಢ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಪುದುಚೇರಿ ಮತ್ತು ರಾಜಸ್ಥಾನಯಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ.

ಇನ್ನು ದೇಶದಲ್ಲಿ 23,091 ನಲ್ಲಿ, ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ವೆಬ್ಸೈಟ್ ಪ್ರಕಾರ,  ಕೋವಿಡ್ ಚೇತರಿಕೆ ದರವು 98.76 ಪ್ರತಿಶತದಷ್ಟು ದಾಖಲಾಗಿದೆ. ದೈನಂದಿನ ಪಾಸಿಟಿವ್ ದರವು 3.38 ಶೇಕಡಾ ಮತ್ತು ವಾರದ ದರವು 2.79 ಶೇಕಡಾದಲ್ಲಿ ದಾಖಲಾಗಿದೆ.

ಇದುವರೆಗೆ ವ್ಯಾಕ್ಸಿನೇಷನ್ ಅಭಿಯಾನದಡಿಯಲ್ಲಿ 220.66 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.