ಮನೆ ರಾಜಕೀಯ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ದ:  ಸಚಿವ ಕೆ.ಗೋಪಾಲಯ್ಯ

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ದ:  ಸಚಿವ ಕೆ.ಗೋಪಾಲಯ್ಯ

0

ಮಂಡ್ಯ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಜಿಲ್ಲೆಯ ಕೆ.ಆರ್.ಪೇಟೆಯಲ್ಲಿಂದು ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿ ಮತ್ತು ಅನುದಾನ ಸಂಬಂಧ ಮುಖ್ಯಮಂತ್ರಿ ಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಕಳೆದ ಬಾರಿ ಸಹ ಸಚಿವ ನಾರಾಯಣ ಗೌಡ್ರು ಆರೋಗ್ಯ ಮೇಳ ಮಾಡಿದ್ದರು. ಇದೀಗ ಉದ್ಯೋಗ ಮೇಳ ನಡೆದಿದೆ. ಬರುವ ದಿನಗಳಲ್ಲಿ  ಸ್ತ್ರೀ  ಶಕ್ತಿ ಸಂಘಗಳ ಕಾರ್ಯಕ್ರಮಗಳನ್ನು ಮಾಡಿ ಮಹಿಳೆಯರನ್ನು ಸಬಲೀಕರಣ ಮಾಡುವ ಚಿಂತನೆಯನ್ನು ನಾರಾಯಣ ಗೌಡರು ಮಾಡಿದ್ದು, ಈ ಮೂಲಕ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲು ಸರ್ಕಾರ ಉದ್ಯೋಗ ಮೇಳಗಳನ್ನು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿದೆ. ಇಂಥಹ ಮೇಳಗಳಲ್ಲಿ ಭಾಗವಹಿಸುವ ನೂರಾರು ಖಾಸಗಿ ಕಂಪನಿಗಳು ಅರ್ಹರಿಗೆ ಉತ್ತಮ ಸಂಬಳದ ಉದ್ಯೋಗ ಅವಕಾಶ ನೀಡುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ರೇಷ್ಮೇ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಜಿಲ್ಲಾಧಿಕಾರಿ ಅಶ್ವತಿ,ಜಿಪಂ ಸಿಇಒ ದಿವ್ಯಪ್ರಭು, ಎಸ್ಪಿ ಯತೀಶ್ ಇತರರು ಉಪಸ್ಥಿತರಿದ್ದರು. ಮೇಳದಲ್ಲಿ 100 ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗವಹಿಸಿದ್ದವು. ಸುಮಾರು 10 ಸಾವಿರ ಯುವಕ-ಯುವತಿಯರು ಉದ್ಯೋಗ ಬಯಸಿ ಆಗಮಿಸಿದ್ದರು.