ಮನೆ ರಾಜಕೀಯ ರೌಡಿ ಶೀಟರ್ ಫಯಾಜ್ ಚೌಟಿ ಜೊತೆ ವಿಶ್ವೇಶ್ವರ ಹೆಗಡೆ ಕಾಗೇರಿ ಗುಪ್ತ ಸಭೆ: ಫೋಟೋ ವೈರಲ್

ರೌಡಿ ಶೀಟರ್ ಫಯಾಜ್ ಚೌಟಿ ಜೊತೆ ವಿಶ್ವೇಶ್ವರ ಹೆಗಡೆ ಕಾಗೇರಿ ಗುಪ್ತ ಸಭೆ: ಫೋಟೋ ವೈರಲ್

0

ಶಿರಸಿ: ಇಲ್ಲಿನ ರೌಡಿ ಶೀಟರ್ ಫಯಾಜ್ ಚೌಟಿ (ಪಯ್ಯು) ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ತನ್ನ ಬೆಂಬಲಿಗರೊಂದಿಗೆ ಗುಪ್ತವಾಗಿ ಸಭೆ ನಡೆಸಿರುವ ಫೋಟೋ ವೈರಲ್ ಆಗಿದೆ.

Join Our Whatsapp Group

ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಫಯಾಜ್ ಚೌಟಿ, ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದಾನೆ.

ಆದರೆ 5 ದಿನಗಳ ಹಿಂದೆ ಗುಪ್ತವಾಗಿ 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಗೇರಿ ಕಚೇರಿಯಲ್ಲಿ ಚುನಾವಣೆ ಸಂಬಂಧ ಚೌಟಿ ಸಭೆ ನಡೆಸಿರುವುದು ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಫೋಟೊದಲ್ಲಿ ಕಾಗೇರಿ ಪಕ್ಕದಲ್ಲೇ ಕುಳಿತು ಚೌಟಿ ಸಭೆ ನಡೆಸಿದ್ದಾನೆ. ಇನ್ನು ಸಭೆಯ ಎರಡು ದಿನದ ನಂತರ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ತನ್ನ ಅಂಬ್ಯುಲೆನ್ಸ್ ಮೂಲಕ ಎಸ್ಕೆಪ್ ಮಾಡಿಸಿದ ಆರೋಪದಡಿ 2 ದಿನಗಳ ಹಿಂದೆಯಷ್ಟೇ ದಾವಣಗೆರೆ ಪೊಲೀಸರಿಂದ ಬಂಧನವಾಗಿದ್ದು, ಹೀಗಾಗಿ ಈ ಭೇಟಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾಗೇರಿ ಕಚೇರಿ ಮೂಲಗಳ ಪ್ರಕಾರ ಈತ ಕ್ಷೇತ್ರದ ಯಾವುದೋ ಸಮಸ್ಯೆ ಇಟ್ಟುಕೊಂಡು ಕಾಗೇರಿ ಬಳಿ ಚರ್ಚೆಗೆ ಬಂದಿದ್ದರು ಎಂದು ಹೇಳಲಾಗಿದೆ.