ಮನೆ ಸುದ್ದಿ ಜಾಲ ಶಸ್ತ್ರಾಸ್ತ್ರ ತ್ಯಜಿಸಲು ಉಕ್ರೇನ್ ಪಡೆ ನಿರಾಕರಣೆ

ಶಸ್ತ್ರಾಸ್ತ್ರ ತ್ಯಜಿಸಲು ಉಕ್ರೇನ್ ಪಡೆ ನಿರಾಕರಣೆ

0

ಮರಿಯುಪೋಲ್: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮಾನವೀಯ ಕಾರಿಡಾರ್‌ಗಳ ಮೂಲಕ ನಗರದಿಂದ ನಿರ್ಗಮಿಸಿ ಎಂಬ ರಷ್ಯಾದ ಮಿಲಿಟರಿ ಪ್ರಸ್ತಾಪವನ್ನು ಮರಿಯುಪೋಲ್‌ನ ಆಯಕಟ್ಟಿನ ಬಂದರನ್ನು ರಕ್ಷಿಸುತ್ತಿರುವ ಉಕ್ರೇನ್ ಪಡೆಗಳು ತಿರಸ್ಕರಿಸಿವೆ.

ಉಕ್ರೇನ್ ಸೈನಿಕರು ಅಜೋವ್ ಸಮುದ್ರದ ಬಂದರನ್ನು ತೊರೆದು, ನಾಗರಿಕರನ್ನು ಸ್ಥಳಾಂತರಿಸಲು ಇರುವ ಮಾನವೀಯ ಕಾರಿಡಾರ್ ಮೂಲಕ ಉಕ್ರೇನ್ ಅಧಿಕಾರಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಹೋಗಬಹುದು ಎಂದು ರಷ್ಯಾದ ಸೇನಾಧಿಕಾರಿ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಅವರು ಭಾನುವಾರ ಹೇಳಿದ್ದರು.

 ‘ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಎಲ್ಲರಿಗೂ ಮರಿಯುಪೋಲ್‌ನಿಂದ ಸುರಕ್ಷಿತ ನಿರ್ಗಮನವನ್ನು ಖಾತರಿಪಡಿಸಲಾಗುತ್ತದೆ’ಎಂದು ಅವರು ಭರವಸೆ ನೀಡಿದ್ದರು.

ಮರಿಯುಪೋಲ್ ಅನ್ನು ತೊರೆಯುವ ಪ್ರಸ್ತಾಪಕ್ಕೆ ಅವರಿಂದ(ಉಕ್ರೇನ್‌ನಿಂದ) ಲಿಖಿತ ಪ್ರತಿಕ್ರಿಯೆಗಾಗಿ ರಷ್ಯಾ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕಾಯುತ್ತದೆ ಎಂದು ಮಿಜಿಂಟ್ಸೆವ್ ಹೇಳಿದ್ದರು.

ಆದರೆ, ತನ್ನ ‘ಮಾನವೀಯ ಕಾರಿಡಾರ್’ಮೂಲಕ ಹೊರಹೋಗುವ ಪ್ರಸ್ತಾಪ ತಿರಸ್ಕರಿಸಿದರೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಅವರು ತಿಳಿಸಿಲ್ಲ.

ಮರಿಯುಪೋಲ್ ಅನ್ನು ತೊರೆಯಬೇಕೆ? ಅಥವಾ ನಗರದಲ್ಲಿ ಉಳಿಯಬೇಕೆ? ಎಂಬುದನ್ನು ಆಯ್ಕೆ ಮಾಡಲು ನಾಗರಿಕರು ಸ್ವತಂತ್ರರು ಎಂದೂ ಅವರು ಸ್ಪಷ್ಟಪಡಿಸಿದ್ದರು.