ಮನೆ ಸುದ್ದಿ ಜಾಲ ಹುಟ್ಟೂರು ಚಳಗೇರಿ ತಲುಪಿದ ನವೀನ್ ಮೃತದೇಹ

ಹುಟ್ಟೂರು ಚಳಗೇರಿ ತಲುಪಿದ ನವೀನ್ ಮೃತದೇಹ

0

ಹಾವೇರಿ ಜಿಲ್ಲೆ: ಉಕ್ರೇನ್ ನಲ್ಲಿ ರಷ್ಯಾ ಸೇನೆಯ ಶೆಲ್ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಮೃತದೇಹ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ತಲುಪಿದೆ. ಮಗನ ಮೃತದೇಹ ಕಂಡು ಪೋಷಕರು, ಕುಟುಂಬಸ್ಥರ ದುಃಖ ಕಟ್ಟೆಯೊಡೆದಿದೆ. 

ನವೀನ್ ಮಾರ್ಚ್ 1ರಂದು ಉಕ್ರೇನ್ ನಲ್ಲಿ ರಷ್ಯಾದ ಶೆಲ್ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. 20 ದಿನಗಳ ನಂತರ ಅವರ ಮೃತದೇಹ ಹುಟ್ಟೂರಿಗೆ ತಲುಪಿದೆ. 

ಇದೀಗ ಪಾರ್ಥಿವ ಶರೀರದ ಮುಂದೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ, ಪೂಜೆ ನೆರವೇರಿಸಲಾಗುತ್ತಿದೆ.ಸುಮಾರು 3 ಗಂಟೆ ಕಾಲ ಸ್ವಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ. ಸ್ಥಳದಲ್ಲಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ಥಳದಲ್ಲಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇನ್ನು ಕೆಲವೇ ಹೊತ್ತಿನಲ್ಲಿ ನವೀನ್ ಮೃತದೇಹದ ಅಂತಿಮ ದರ್ಶನ ಪಡೆಯಲಿದ್ದು, ಈಗಾಗಲೇ ಹಾವೇರಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಹೆಚ್ ಎಎಲ್ ವಿವಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ದಾವಣಗೆರೆಗೆ, ದಾವಣಗೆರೆಯ ಹರಿಹರದಿಂದ ಹಾವೇರಿ ಜಿಲ್ಲೆಯ ಚಳಗೇರಿಗೆ ತೆರಳಲಿದ್ದಾರೆ. ಅಲ್ಲಿ ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.