ಮನೆ ಆರೋಗ್ಯ ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ಒಳಿತು

ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ಒಳಿತು

0

ನೋಡಲು ದಪ್ಪಗೆ ಗಜ ಗಾತ್ರದಲ್ಲಿ ಕಂಡು ಬರುವ ಕುಂಬಳಕಾಯಿ ಹಾಗೂ ಇದರ ಒಳಗೆ ಸಿಗುವ ಬೀಜಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ಆದರೆ ನಾವೇನು ಮಾಡುತ್ತೇವೆ, ಕುಂಬಳಕಾಯಿ ತಿರುಳನ್ನು ಮಾತ್ರ ಸಾಂಬಾರ್, ಪಲ್ಯ ಅಥವಾ ಬೇರೆ ಯಾವು ದೋ ಖಾದ್ಯಕ್ಕೆ ಹಾಕಿದ ಬಳಿಕ, ಇದರಲ್ಲಿ ಸಿಗುವ ಬೀಜಗಳನ್ನು ಮಾತ್ರ ಹಾಗೆಯೇ ಕಸದ ಬುಟ್ಟಿಗೆ ಹಾಕಿಬಿಡುತ್ತೇವೆ. ಇಲ್ಲಿಯೇ ನಾವು ಮಾಡುವುದು ದೊಡ್ಡ ತಪ್ಪು!

Join Our Whatsapp Group

ಯಾಕೆಂದ್ರೆ ಕುಂಬಳಕಾಯಿ ಎಷ್ಟು ಆರೋಗ್ಯಕಾರಿಯೋ, ಈ ತರಕಾರಿಯ ಬೀಜಗಳು ಕೂಡ ಅಷ್ಟೇ ಆರೋಗ್ಯಕಾರಿ. ಹೀಗಾಗಿ ಆರೋಗ್ಯದ ದೃಷ್ಟಿ ಯಿಂದ ಕುಂಬಳಕಾಯಿ ಬೀಜವನ್ನು ಬಿಸಾಡದೇ, ಹಾಗೆಯೇ ಶೇಖರಿಸಿಟ್ಟು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ಬಹಳ ಒಳ್ಳೆಯದು!

ಈ ಬೀಜಗಳಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು

• ಪ್ರಮುಖವಾಗಿ ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿ ಯಮ್, ತಾಮ್ರ, ಪ್ರೋಟೀನ್ ಹಾಗೂ ಸತು, ಜಿಂಕ್ ‪ಗಳಂತಹ ಪೌಷ್ಟಿಕ ಸತ್ವಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.

• ಹೀಗಾಗಿ ಈ ತರಕಾರಿಯ ಬೀಜಗಳನ್ನು, ಪ್ರತಿದಿನ ಮಿತ ವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ!

ಮೆಗ್ನೀಷಿಯಂ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ

• ಮೆಗ್ನೀಷಿಯಂ ದೇಹಕ್ಕೆ ಅತಿ ಮುಖ್ಯವಾದ ಖನಿಜ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಮುಖ ವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ, ಕ್ಯಾಲ್ಸಿಯಂ ಜೊತೆಗೆ ಮೆಗ್ನೀಷಿಯಂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

• ಹಾಗಾಗಿ ಇಂತಹ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆಂದರೆ ಮೆಗ್ನೀಷಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು, ನಮ್ಮ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಬೇಕು.

• ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಕುಂಬಳ ಕಾಯಿ ಬೀಜಗಳು. ಹೀಗಾಗಿ ಪ್ರತಿದಿನ ಮಿತವಾಗಿ ಈ ಬೀಜಗಳನ್ನು ಸೇವನೆ ಮಾಡುವುದರಿಂದ, ಮೂಳೆಗಳ ಸಾಂದ್ರತೆ ಹೆಚ್ಚಾಗುವು ದರ ಜೊತೆಗೆ ಆಸ್ಟಿಯೊ ಪೊರೋಸಿಸ್ ಅಪಾಯವು ಕಡಿಮೆ ಯಾಗುತ್ತದೆ

ಲೈಂಗಿಕ ಸಮಸ್ಯೆ ಇದ್ದವರಿಗೆ

• ಈ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಿಗೆ ಬರುತ್ತದೆ.

• ಪ್ರಮುಖವಾಗಿ ಪುರುಷರು, ಪ್ರತಿದಿನ ಮೂರು-ನಾಲ್ಕು, ಈ ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡುವುದ ರಿಂದ, ಅವರಲ್ಲಿ ವೀರ್ಯದ ಸಂತತ ಹಾಗೂ ಗುಣ ಮಟ್ಟ ಹೆಚ್ಚಾ ಗುತ್ತದೆ ಎಂದು ತಜ್ಞರು ಹೇಳುತ್ತಾರೆ.

• ಇನ್ನು ಈ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕೂಡ ಹೆಚ್ಚಿಸಲು ನೆರವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ

• ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು ಕಂಡು ಬಂದರೆ, ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ ಎನ್ನುವ ವಿಚಾರ, ನಮಗೆಲ್ಲಾ ಗೊತ್ತೇ ಇದೆ.

• ಹೀಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಮಿತ ವಾಗಿ ಈ ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡುವು ದರಿಂದ, ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಈ ಬೀಜಗಳಲ್ಲಿ ಪ್ರಮುಖವಾಗಿ, ಹೃದಯಕ್ಕೆ ಸಮಸ್ಯೆ ಉಂಟು ಮಾಡುವ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು, ನೆರವಾಗುವ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಅಧಿಕ ಪ್ರಮಾಣ ದಲ್ಲಿ ಕಂಡುಬರುವುದರಿಂದ, ಹೃದಯದ ಆರೋಗ್ಯಕ್ಕೆ ಸಮಸ್ಯೆ ಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ತೂಕ ಇಳಿಸಲು ಬಯಸುವವರಿಗೆ

• ದೇಹದ ತೂಕ ಇಳಿಸಲು ಬಯಸುವವರಿಗೆ ಕುಂಬಳಕಾಯಿ ಬೀಜಗಳು, ಬಹಳ ಒಳ್ಳೆಯದು. ಇದಕ್ಕೆ ಮುಖ್ಯ ಕಾರಣ, ಈ ಬೀಜಗಳಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಫೈಬರ್ ಅಂಶ

• ತೂಕವನ್ನು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ ಹಾಗೂ ದೀರ್ಘ ಕಾಲದವರೆಗೆ ಹೊಟ್ಟೆ ಹಸಿಯದಂತೆ ನೋಡಿಕೊಳ್ಳುತ್ತವೆ.