ಮನೆ ಸುದ್ದಿ ಜಾಲ ಮೈಸೂರು: ಅಮೂಲ್’ನೊಂದಿಗೆ ನಂದಿನಿ ವಿಲೀನ ವಿರೋಧಿಸಿ ಪ್ರತಿಭಟನೆ

ಮೈಸೂರು: ಅಮೂಲ್’ನೊಂದಿಗೆ ನಂದಿನಿ ವಿಲೀನ ವಿರೋಧಿಸಿ ಪ್ರತಿಭಟನೆ

0

ಮೈಸೂರು: ಕೆಎಂಎಫ್ ನಂದಿನಿ ಕತ್ತು ಹಿಸುಕಿ, ಗುಜರಾತಿ ಅಮೂಲ್ ಹಾಲು ಕುಡಿಸುವ ಕುತಂತ್ರದ ಯೋಜನೆಯ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಇಂದು ಅಗ್ರಹಾರದ ನಂದಿನಿ ಮಳಿಗೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

Join Our Whatsapp Group

ಈ ಸಂದಭರ್ಭ ಮಾತನಾಡಿದ ಪ್ರತಿಭಟನಾಕಾರರು,. ಕರ್ನಾಟಕದ ರೈತರು ಕಷ್ಟಪಟ್ಟು ಬೆವರು ಹರಿಸಿ ಬೆಳೆಸಿದ ನಂದಿನಿ ಬ್ರಾಂಡನ್ನು ಮುಗಿಸಲೆಂದೇ, ಅಮುಲ್ ಗುಜರಾತಿ ಹಾಲು ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಇದು ಕನ್ನಡಿಗರ ಭಾವನಾತ್ಮಕ-ಸ್ವಾಭಿಮಾನದ ಬ್ರಾಂಡ್ ಎಂದರು.

ಆನ್ಲೈನ್ ನಲ್ಲಿ ಅಮೂಲ್ ಹಾಲು-ಮೊಸರು ರಾಜ್ಯ ಮಾರುಕಟ್ಟೆಗೆ ಬಂದಿದ್ದು, ಜತೆಗೆ ಸದ್ದೇ ಇಲ್ಲದೆ, ಬೆಂಗಳೂರಿನಲ್ಲಿ ತಲೆ ಎತ್ತುತ್ತಿದೆ ಅಮೂಲ್ ನ ದೊಡ್ಡ ಡೈರಿ. ಕರ್ನಾಟಕದ ಮನೆಮಾತಾಗಿರುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಆದ ನಂದಿನಿಯನ್ನು ಮುಳುಗಿಸಲೆಂದು, ಅಲ್ಲಲ್ಲಿ ನಂದಿನಿ ಹಾಲು ಮೊಸರಿನ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಹಾಗೆಯೇ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಅಭಾವ ಸೃಷ್ಟಿಸಿ ಕೆಎಂಎಫ್ ನಂದಿನಿ ನಷ್ಟದಲ್ಲಿ ಇದೆ ಎಂದು ಕಾರಣ ನೀಡಿ ಅಮೂಲ್ ಜೊತೆ ವಿಲೀನ ಮಾಡುವ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ನಂದಿನಿಯನ್ನು ಅಮೂಲ್ ಜೊತೆ ವಿಲೀನಗೊಳಿಸಲು ಹುನ್ನಾರ ನಡೆಯುತ್ತಿವೆ. ಈ ವಿಲೀನವಾದರೆ ರಾಜ್ಯದ ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ. ದೇಶದಲ್ಲಿ ಅಮೂಲ್ ನ ಏಕಸ್ವಾಮ್ಯ ದಿಂದ ರಾಜ್ಯದ ರೈತರು ತತ್ತರಿಸಿ ಹೋಗುತ್ತಾರೆ, ಅವರ ಹಾಲಿಗೆ ಒಳ್ಳೆಯ ಬೆಲೆ ಸಿಗುವುದಿಲ್ಲದಂತಾಗುತ್ತದೆ, ಅಮೂಲ್ ನವರು ನಿಗದಿ ಮಾಡಿದ ಹಣವನ್ನೇ ಪಡೆಯಬೇಕಾಗುತ್ತದೆ. ಒಂದು ದೇಶ-ಒಂದು ಅಮೂಲ್ ಒಂದೇ ಹಾಲು-ಒಂದೇ ಗುಜುರಾತ್ ಎನ್ನುವ ಅವರ ಉದ್ದೇಶ ಯಾರಿಗೂ ಹಿತಕರವಲ್ಲ. ಇದೊಂದು ಅನಾರೋಗ್ಯಕರ ಪೈಪೋಟಿ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲರೂ ನಮ್ಮ ರೈತರ ಹೆಮ್ಮೆಯ ಕೆಎಂಎಫ್ ಬ್ರಾಂಡ್ ನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಿ, ಗುಜರಾತಿ ಅಮೂಲ್ ನ ಉತ್ಪನ್ನಗಳನ್ನು ತಿರಸ್ಕರಿಸುವ ಮೂಲಕ ರಾಜ್ಯದ ರೈತರ ಹಿತವನ್ನು ಕಾಪಾಡಬೇಕೆಂದು ಹಾಗೂ ಈ ವಿಲೀನಕ್ಕೆ ಮಾನ್ಯ ರಾಜ್ಯಪಾಲರು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ದರು.

ಈ ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಸಿ ಎಚ್ ಕೃಷ್ಣಯ್ಯ, ಡಾ. ಶಾಂತರಾಜೇಅರಸ್, ಪ್ರಜೀಶ್ ಪಿ, ಗೋಲ್ಡ್ ಸುರೇಶ್, ರಾಧಾಕೃಷ್ಣ, ಕುಮಾರ್ ಗೌಡ, ಜೂ. ವಿಷ್ಣುವರ್ಧನ್, ಗಿರೀಶ್ ಗೌಡ, ಡಾ. ನರಸಿಂಹೇಗೌಡ, ಲತಾ ರಂಗನಾಥ್, ಅಂಬಾ ಅರಸ್, ಎಸ್ ಚಂದ್ರು,, ಎಳನೀರು ರಾಮಣ್ಣ, ಗೊರೂರು ಮಲ್ಲೇಶ್ ಸಿದ್ದರಾಜು, ದರ್ಶನ್ ಗೌಡ, ಹನುಮಂತಯ್ಯ, ಸುಂದರಪ್ಪ ಗ್ರಾ.ಪಂ, ಕೃಷ್ಣಮೂರ್ತಿ, ರಾಮನಾಯಕ, ರವಿ ನಾಯಕ್, ಶ್ರೀಕಂಠೇಗೌಡ ಉಪಸ್ಥಿತರಿದ್ದರು.