ಬಹುತೇಕ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ಕೂಡ ಬಂದು ನಿಲ್ಲುತ್ತದೆ! ಆದರೆ ನಿಮಗೆ ಗೊತ್ತಿರಲಿ, ಈ ಪುಟ್ಟ ಏಲಕ್ಕಿಯು ದುಬಾರಿ ಯಾದರೂ ಕೂಡ, ತನ್ನಲ್ಲಿ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ನೂರಾರು ವರ್ಷಗಳ ಆಯುರ್ವೇದ ಪದ್ಧತಿಯ ಲ್ಲಿಯೂ ಕೂಡ, ಏಲಕ್ಕಿಗೆ ಒಂದು ವಿಶೇಷ ಸ್ಥಾನಮಾನವಿದೆ.
ಹೀಗಾಗಿ ನಮ್ಮ ದೈನಂದಿನ ಅಡುಗೆಯಲ್ಲಿ ಏಲಕ್ಕಿಯನ್ನು ಉಪಯೋಗಿಸುವುದರಿಂದ, ಸಣ್ಣ -ಪುಟ್ಟ ಕಾಯಿಲೆಗಳಿಂದ ಹಿಡಿದು, ದೀರ್ಘಕಾಲದವ ರೆಗೆ ಕಾಡುವ ಕಾಯಿಲೆಗಳನ್ನು ಕೂಡ ದೂರ ಮಾಡುವ, ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಇದರಲ್ಲಿ ಕಂಡು ಬರುತ್ತದೆ, ಎಂದು ಮನೆಯಲ್ಲಿನ ಹಿರಿಯರು ಕೂಡ ಹೇಳುತ್ತಾರೆ.
ಉಗುರು ಬೆಚ್ಚಗಿನ ನೀರಿಗೆ ಏಲಕ್ಕಿ ಪೌಡರ್
• ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯ ನಮಗೆ ತಿಳಿದಿದೆ.
• ಅಂತೆಯೇ, ಈ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರ ಹೋಗಲು ಸಾಧ್ಯ ವಾಗುತ್ತದೆ.
• ಇಲ್ಲಾಂದ್ರೆ ರಾತ್ರಿ ಪೂರ್ತಿ ನೆನೆಸಿಟ್ಟ ಏಲಕ್ಕಿ ನೀರನ್ನು ಬೆಳಗ್ಗೆ ಎದ್ದು ಉಗುರು ಬೆಚ್ಚಗೆ ಬಿಸಿ ಮಾಡಿ, ಕುಡಿಯುವು ದರಿಂದಲೂ ಕೂಡ, ಆರೋಗ್ಯವನ್ನು ವೃದ್ಧಿಸಿಕೊಳ್ಳ ಬಹುದು.
• ಈ ಸಮಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ನೀರನ್ನು ಕುಡಿದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ
• ಸರಾಸರಿ ತೂಕಕ್ಕಿಂತ ದೇಹದ ತೂಕವು ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ, ಕೊನೆಗೆ ಇದೇ ಕಾರಣಕ್ಕಾಗಿ ಇತರ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ.
• ಪ್ರತಿದಿನ ವ್ಯಾಯಾಮ ಅಥವಾ ಯೋಗಾಭ್ಯಾಸದ ಜೊತೆಗೆ ಖಾಲಿ ಹೊಟ್ಟೆ ಯಲ್ಲಿ ಪ್ರತಿದಿನ ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ತೂಕದಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ
• ಏಲಕ್ಕಿ ನೆನೆಸಿಟ್ಟ ನೀರನ್ನು ವಾರದಲ್ಲಿ ಎರಡು-ಮೂರು ಬಾರುಯಾದರೂ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ.
• ಇದಕ್ಕೆ ಪ್ರಮುಖ ಕಾರಣ ಏಲಕ್ಕಿಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಹೈಪೋಲಿ ಪಿಡೆಮಿಕ್ ಎನ್ನುವ ನೈಸರ್ಗಿಕ ಸಂಯುಕ್ತ ಅಂಶಗಳು ಕಂಡು ಬರುವುದ ರಿಂದ, ಮಧುಮೇಹ ರೋಗಿಗಳ ರಕ್ತದಲ್ಲಿನಸಕ್ಕರೆ ಮಟ್ಟ, ಏರಿಕೆ ಆಗದಂತೆ ನೋಡಿಕೊಳ್ಳುತ್ತದೆ.
ದೇಹದ ಲಿವರ್ ನ ಆರೋಗ್ಯಕ್ಕೂ ಒಳ್ಳೆಯದು
• ದೇಹದಲ್ಲಿ ಇರುವಂತಹ ಬಹುತೇಕ ಪ್ರಮುಖ ಅಂಗಾಂಗ ಗಳಲ್ಲಿ ನಮ್ಮ ಲಿವರ್ ಕೂಡ ಒಂದು. ಒಂದು ವೇಳೆ, ಈ ಲಿವರ್ನಲ್ಲಿ ಸಮಸ್ಯೆಗಳು ಕಂಡು ಬಂದರೆ ಅದರಿಂದ ಹಲವು ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!
• ಹೀಗಾಗಿ ಲಿವರ್ನ ಆರೋಗ್ಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ ಏಲಕ್ಕಿಯಲ್ಲಿ ದೇಹದ ಯಕೃತ್ ಅಥವಾ ಲಿವರ್ ಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಶಕ್ತಿ ಇದೆ.
• ಹೀಗಾಗಿ ಪ್ರತಿದಿನ ಏಲಕ್ಕಿ ನೆನೆಸಿಟ್ಟ ನೀರನ್ನು ಕುಡಿ ಯುತ್ತಾ ಬರುವುದರಿಂದ, ಲಿವರ್ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
• ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳನ್ನು ಸಂಪೂರ್ಣ ಪ್ರಮಾಣದಲ್ಲಿ ದೇಹದಿಂದ ಹೊರಹೋಗಲು ಸಾಧ್ಯವಾಗದೇ ಹೋದಾಗ, ಚರ್ಮದ ಭಾಗದಲ್ಲಿ ಕೂಡ ಕಾಂತಿ ಕಡಿಮೆ ಯಾಗುತ್ತಾ ಬರುತ್ತದೆ.
• ಹೀಗಾಗಿ ಇಂತಹ ಸಮಸ್ಯೆಗಳಿಂದ ದೂರವಿರಬೇಕು ಎಂದರೆ, ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ನಮ್ಮ ದೇಹದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚಾಗುತ್ತದೆ.