ಮನೆ ಸುದ್ದಿ ಜಾಲ ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ : ಡಾ. ಕೆ ವಿ ರಾಜೇಂದ್ರ

ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ : ಡಾ. ಕೆ ವಿ ರಾಜೇಂದ್ರ

0

ಮೈಸೂರು: ಚುನಾವಣೆಯಲ್ಲಿ ಒತ್ತಡ ನಿರ್ವಹಿಸಿಕೊಂಡು, ಕ್ರಮಬದ್ಧವಾಗಿ ಹಾಗೂ ಸರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ಡಾ.ಕೆ ವಿ ರಾಜೇಂದ್ರ ಅವರು ಮಾಸ್ಟರ್ ಟ್ರೈನರ್ಗಳಿಗೆ ಸೂಚಿಸಿದರು.

Join Our Whatsapp Group

 ನಗರದ ಕಿರು ರಂಗಮoದಿರದಲ್ಲಿ ಜಿಲ್ಲೆಯ ವಿವಿಧ ಚುನಾವಣಾ ಕ್ಷೇತ್ರಗಳ ಮಾಸ್ಟರ್ ಟ್ರೈನರ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ತರಬೇತಿಯಲ್ಲಿ ಕ್ಷೇತ್ರವಾರು ಮಾಸ್ಟರ್ ಟ್ರೈನರ್ಗಳಿಗೆ ಅವರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ಚುನಾವಣಾ ಕೆಲಸ ಸಂಬoಧ ಯಾವುದೇ ಸಮಸ್ಯೆ ಗೊಂದಲಗಳಿದ್ದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.

 ಚುನಾವಣೆಯು ಪರೀಕ್ಷೆ ಇದ್ದಂತೆ. ಈ ಪರೀಕ್ಷೆಯಲ್ಲಿ ಎಲ್ಲರೂ ನೂರಕ್ಕೆ ನೂರು ತೆಗೆಯಲೇಬೇಕು ಅಂದರೆ ನಮ್ಮ ಕೆಲಸ ನೂರಕ್ಕೆ ನೂರರಷ್ಟು ಸಂಪೂರ್ಣವಾಗಿರಬೇಕು ಹಾಗೂ ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ತರಬೇತಿಗಳಿಗೆ ಯಾವುದೇ ಮಾಹಿತಿ ಬೇಕಿದ್ದರೂ ಜಿಲ್ಲಾಡಳಿತ ಒದಗಿಸುತ್ತದೆ ಎಂದರು.

 ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್ ಮಾತನಾಡಿ, ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಚುನಾವಣೆ ಕಾರ್ಯವನ್ನು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ಮಾಡುವಲ್ಲಿ ನಿಮ್ಮ ಜವಾಬ್ದಾರಿಯೂ ಇದೆ. ಎಷ್ಟೇ ಪೂರ್ವಸಿದ್ಧತೆ ಮಾಡಿಕೊಂಡರು ಹಾಗೂ ಕಾರ್ಯ ನಿರ್ವಹಿಸಿದರೂ ಮತದಾನದ ದಿನ ಒಂದಲ್ಲ ಒಂದು ಸಮಸ್ಯೆ ಬಂದೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನೀವು ಸಿದ್ಧರಿರಬೇಕು ಎಂದು ತಿಳಿಸಿದರು.

 ಎಲ್ಲಾ ಮಾಸ್ಟರ್ ಟ್ರೈನರ್ ಗಳು ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಭಾವಿಸಿ ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳಿ. ಸರಿಯಾಗಿ ಮಾಹಿತಿಯನ್ನು ಪಡೆದುಕೊಳ್ಳುವ ಹಾಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಮೂಲಕ ತರಬೇತಿ ಹಾಗೂ ಚುನಾವಣೆ ಎರಡನ್ನೂ ಯಶಸ್ವಿಗೊಳಿಸಿ ಎಂದರು.

 ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 2905 ಮತಗಟ್ಟೆಗಳಿದ್ದು, ಶೇ.50ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಾಮಾನ್ಯ ಹಾಗೂ ಸೂಕ್ಷ್ಮ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಿದ್ದು, ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತದಾನದ ವೇಳೆ ಮಾಧ್ಯಮದವರಿಗೆ ಕ್ಯಾಮರಾದ ಜೊತೆ ಮತಗಟ್ಟೆಗೆ ಪ್ರವೇಶಿಸಲು ಅವಕಾಶವಿಲ್ಲ. ಮತದಾರರು ಸಹ ಮತದಾನದ ವೇಳೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ತಿಳಿಸಿದರು.

 ತರಬೇತಿಯಲ್ಲಿ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ ಗಳಾದ ಡಾ. ಮಂಗಳಮೂರ್ತಿ, ಹೇಮಲತಾ ತರಬೇತುದಾರರಾದ ರಮೇಶ್ ಹಾಗೂ ಎಲ್ಲಾ ಕ್ಷೇತ್ರದ ಮಾಸ್ಟರ್ ಟ್ರೈನರ್ ಗಳು ಭಾಗವಹಿಸಿದ್ದರು.