ಮನೆ ಕಾನೂನು ಕಳೆದು ಹೋದ ಮೊಬೈಲ್ ಫೋನ್ ಗಳ ದುರ್ಬಳಕೆ ತಡೆ ಮತ್ತು ಪತ್ತೆಗಾಗಿ ಈ ವಿಧಾನ ಅನುಸರಿಸಿ: ...

ಕಳೆದು ಹೋದ ಮೊಬೈಲ್ ಫೋನ್ ಗಳ ದುರ್ಬಳಕೆ ತಡೆ ಮತ್ತು ಪತ್ತೆಗಾಗಿ ಈ ವಿಧಾನ ಅನುಸರಿಸಿ:  ಪೊಲೀಸ್ ಆಯುಕ್ತ  ರಮೇಶ್  ಬಾನೋತ್

0

ಮೈಸೂರು:  ಕಳೆದು ಹೋದ ಮೊಬೈಲ್ ಫೋನ್‌ ಗಳನ್ನು ಪತ್ತೆ ಮಾಡಲು ಮತ್ತು ದುರ್ಬಳಕೆಯನ್ನ ತಡೆಯಲು ಸಾರ್ವಜನಿಕರು Www.ceir.gov.in website ನ ಸದುಪಯೋಗ ಮಾಡಿಕೊಳ್ಳುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತ  ರಮೇಶ್  ಬಾನೋತ್ ಮನವಿ ಮಾಡಿದ್ದಾರೆ.

Join Our Whatsapp Group

ಇತ್ತೀಚಿನ ದಿನಗಳಲ್ಲಿ ಕಳೆದು ಹೋದ ಮೊಬೈಲ್ ಫೋನ್‌ ಗಳು ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ. www.ceir.gov.in website ಮೂಲಕ ಕಳೆದು ಹೋದ ಮೊಬೈಲ್ ಫೋನ್‌ ಗಳ ದುರ್ಬಳಕೆಯನ್ನು ತಡೆಯುವುದರೊಂದಿಗೆ ಸದರಿ ಮೊಬೈಲ್ ಫೋನ್‌ ಗಳ ಪತ್ತೆ ಕೂಡ ಮಾಡಬಹುದಾಗಿದೆ. ಈ ಸಂಬಂಧ ಸಾರ್ವಜನಿಕರು ಈ ಕೆಳಕಂಡ ವಿಧಾನಗಳನ್ನು ಅನುಸರಿಸಬೇಕಾಗಿದೆ.

ಮೊಬೈಲ್ ಫೋನ್ ಕಳೆದು ಹೋದಲ್ಲಿ ತಕ್ಷಣವೆ KSP Application ನಲ್ಲಿ E -Lost ದೂರು ಸಲ್ಲಿಸಿ, ಡಿಜಿಟಲ್ E- Acknowledgement ಪಡೆದುಕೊಂಡು ಇಟ್ಟು ಕೊಳ್ಳುವುದು.

ಕಳೆದುಕೊಂಡಿರುವ ಸಿಮ್‌ ಕಾರ್ಡ್‌ನ್ನು ಸಂಬಂಧಪಟ್ಟ ಸರ್ವೀಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು ಓಟಿಪಿ ಪಡೆಯಲು ಸದರಿ ಸಿಮ್ ಕಾರ್ಡ್‌ನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವುದು, CEIR Portal ನಲ್ಲಿ ಓಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.

www.ceir.gov.in website ಗೆ ಹೋಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್‌ ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ಕಳೆದು ಹೋದ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ, ನಂತರ ಯಾರೂ ಕೂಡ ಆ ಮೊಬೈಲ್ ನ್ನು ದುರ್ಬಳಕೆ ಮಾಡಲು ಸಾಧ್ಯವಿರುವುದಿಲ್ಲ .

ಅಲ್ಲದೇ www.Ceir.gov.in website ನಲ್ಲಿ ಮೇಲ್ಕಂಡಂತೆ ಮಾಹಿತಿಯನ್ನು ನಮೂದಿಸುವುದರಿಂದ ಸೆನ್ ಪೊಲೀಸ್ ಠಾಣೆಯಿಂದ ಸದರಿ ಮೊಬೈಲ್‌ ಫೋನ್‌ ಗಳ ಪತ್ತೆಗೆ ಕ್ರಮಕೈಗೊಳ್ಳಲಾಗುವುದು.

ಕಳೆದು ಹೋದ ಮೊಬೈಲ್ ಫೋನ್ ಪತ್ತೆಯಾದರೆ ಈಗಾಗಲೆ ತಿಳಿಸಿರುವ CEIR Portal ನಲ್ಲಿ ಲಾಗಿನ್ ಆಗಿ ಆನ್ ಬ್ಲಾಕ್ ಮಾಡಿ ಸದರಿ ಮೊಬೈಲ್ ಫೋನ್ನನು ಉಪಯೋಗಿಸಬಹುದು.

ಆದ್ದರಿಂದ ಸಾರ್ವಜನಿಕರು ಕಳೆದು ಹೋದ ಮೊಬೈಲ್‌ ಫೋನ್‌ ಗಳ ಅಪರಾಧಿಕ ಕೃತ್ಯಗಳ ದುರ್ಬಳಕೆ ತಡೆ ಹಾಗೂ ಸದರಿ ಫೋನ್‌ ಗಳ ಪತ್ತೆಗೆ www.ceir.gov.in website  ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ  ರಮೇಶ್  ಬಾನೋತ್ ತಿಳಿಸಿದ್ದಾರೆ.