ಮನೆ ಸುದ್ದಿ ಜಾಲ ಅಂಚೆ ಮತಪತ್ರಗಳ ನಿರ್ವಹಣೆ ಸಮರ್ಪಕವಾಗಿರಲಿ: ಡಾ. ಕೆ ವಿ ರಾಜೇಂದ್ರ

ಅಂಚೆ ಮತಪತ್ರಗಳ ನಿರ್ವಹಣೆ ಸಮರ್ಪಕವಾಗಿರಲಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023″ ಸಂಬಂಧ ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೂ ಮತದಾನದ ಹಕ್ಕನ್ನು ಚಲಾಯಿಸುವ ದೃಷ್ಟಿಯಿಂದ ಅಂಚೆ ಮತಪತ್ರಗಳ ನಿರ್ವಹಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾಗಿರುತ್ತದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಚುನಾವಣಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಕೆ.ಎಸ್.ಆರ್.ಟಿ.ಸಿ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್ ಹಾಗೂ ಇತರೆ ಸಿಬ್ಬಂದಿಗಳಿಗೆ ಮತ್ತು ಸೇವಾ ಮತದಾರರುಗಳಿಗೆ ಅಂಚೆಮತ ಪತ್ರಗಳ ಮುಖಾಂತರ ಮತದಾನದ ವ್ಯವಸ್ಥೆಯನ್ನು ನೋಡಿಕೊಳ್ಳಲು ಆಯಾ ವಿಧಾನಸಭಾ ಕ್ಷೇತ್ರದ ರಿಟರ್‌ನಿಂಗ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅವರ ವ್ಯಾಪ್ತಿಯಲ್ಲಿ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

Join Our Whatsapp Group

ಪೊಲೀಸ್ ಆಯುಕ್ತರು, ಮೈಸೂರು, ಪೊಲೀಸ್ ಅಧೀಕ್ಷಕರು ಮೈಸೂರು, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಮೈಸೂರು ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ನಗರ / ಗ್ರಾಮಾಂತರ ಕೆ.ಎಸ್.ಆರ್.ಟಿ ಮೈಸೂರು ರವರ ವ್ಯಾಪ್ತಿಯಲ್ಲಿಯೂ ಸಹ ಪ್ರತ್ಯೇಕ ಪತ್ರಾಂಕಿತ ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ 11 ವಿಧಾನ ಸಭಾ ಕ್ಷೇತ್ರದ ರಿಟರ್‌ನಿಂಗ್ ಆಫೀಸರ್ ರವರ ವ್ಯಾಪ್ತಿಯಲ್ಲಿ ಏ 22 ಮತ್ತು ಏ. 23 ರಂದು ವಿಧಾನ ಸಭಾ ಕ್ಷೇತ್ರವಾರು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಕೇಂದ್ರಗಳಲ್ಲಿ ಅಂಚೆ ಮತಪತ್ರದ ಸಹಾಯವಾಣಿ (ಜಿಲ್ಸ್ ಡೆಸ್ಕ್‌) ಯನ್ನು ತೆರೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಎಲ್ಲಾ ಇಲಾಖಾಧಿಕಾರಿಗಳು ಸಿಬ್ಬಂದಿ ವರ್ಗದವರು, ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಗ್ರಹಿಸಿದ ವಾಹನಗಳ ಚಾಲಕರು ನಿರ್ವಾಹಕರು ಮತ್ತು ಫೋಟೋಗ್ರಾಫರ್, ವಿಡಿಯೋ ಗ್ರಾಫರ್‌ಗಳು ತಮ್ಮ ವಿಧಾನ ಸಭಾ ಕ್ಷೇತ್ರದ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಕ್ರಮ ಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಒಳಗೊಂಡಂತ ಅಂಚೆ ಮತ ಪತ್ರದ ಕೋರಿಕೆ ಅರ್ಜಿ ನಮೂನೆ 12 ರಲ್ಲಿ ಆಯಾ ಅಂಚೆ ಮತ ಪತ್ರದ ನೋಡಲ್ (ರಿಟರ್‌ನಿಂಗ್‌ ಅಧಿಕಾರಿಗಳಿಗೆ ತರಬೇತಿ ದಿನಾಂಕದಂದು ನೀಡುವುದು.

ತರಬೇತಿಗೆ ಹಾಜರಾಗುವ ಮತಗಟ್ಟೆ ಅಧಿಕಾರಿಗಳು ಹೊರ ಹೊರ ಜಿಲ್ಲೆಯವರಾಗಿದ್ದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಆದೇಶ ಪ್ರತಿ ಮತ್ತು ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್) ಯೊಂದಿಗೆ ನಮೂನೆ 12 ನ್ನು ಭರ್ತಿಮಾಡಿ ಸಂಬಂಧ ಪಟ್ಟ ಅಂಚೆ ಮತ ಪತ್ರದ ನೋಡಲ್ ಅಧಿಕಾರಿಗಳಿಗೆ ನೀಡುವುದು, ಅಂಚೆ ಮತ ಪತ್ರ ನೋಡಲ್ ಅಧಿಕಾರಿಗಳು ಏ.24 ರ ಬೆಳಿಗ್ಗೆ 11 ಗಂಟೆಗೆ ಹೊರ ಜಿಲ್ಲೆಗೆ ಹೋಗುವ ನಮೂನೆ 12 ರ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಣೆ ಮಾಡಿ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿಸತಕ್ಕದ್ದು.

ಚುನಾವಣಾ ಕರ್ತವ್ಯಕ್ಕೆ ಅಧಿಗ್ರಹಿಸುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ “No Voter to be Left Behind” ಉಲ್ಲೇಖವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಸರ್ವರ ಪಾಲ್ಗೊಳ್ಳುವಿಕೆಯನ್ನು ಪೂರಕವಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.