ಮನೆ ರಾಜ್ಯ ಟಿ. ನರಸೀಪುರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಮೂಲಕ ಮತದಾನ...

ಟಿ. ನರಸೀಪುರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಮೂಲಕ ಮತದಾನ ಜಾಗೃತಿ

0

ಮೈಸೂರು: ಟಿ.ನರಸೀಪುರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕಿನ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆ ಜಾಥಾ ಹಾಗೂ ಮಾನವ ಸರಪಳಿ ನಿರ್ಮಾಣ ಮಾಡಿ, ಮತದಾನ ಘೋಷ ವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

Join Our Whatsapp Group

ಟಿ. ನರಸೀಪುರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಗುರುವಾರ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ  ತಾಲ್ಲೂಕು ಪಂಚಾಯಿತಿ ಆವರಣದಿಂದ ಲಿಂಕ್ ರಸ್ತೆ,ಖಾಸಗಿ ಬಸ್ ನಿಲ್ದಾಣದ ಮೂಲಕ ಕಾಲ್ನಡಿಗೆ ಜಾಥಾ ನಡೆಸಿ  ವಿದ್ಯೋದಯ ಕಾಲೇಜು ವೃತದ ಬಳಿ ಮಾನವ ಸರಪಳಿ ನಿರ್ಮಾಣ ಮಾಡಿ,ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. 

ಮತದಾನ ನಮ್ಮ ಹಕ್ಕು, ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ನಿಮ್ಮ ಬೆರಳಿಗೆ ಇಂಕು ಪ್ರಜಾಪ್ರಭುತ್ವಕ್ಕೆ ಲಿಂಕು ಎಂಬ ವಿವಿಧ ಮತದಾನದ ಘೋಷ ವಾಕ್ಯಗಳನ್ನು ಕೂಗಲಾಯಿತು.

ಮೇ 10 ರಂದು ಬುಧವಾರ ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ಜನರಿಗೆ ಮತದಾನದ ಬಗ್ಗೆ ಅರಿವು  ಮೂಡಿಸಲಾಯಿತು.

 ಮತದಾನ ಜಾಗೃತಿ ಜಾಥಾ ಕ್ಕೆ ಹಸಿರು ನಿಸಾನೆ ತೋರುವ ಮೂಲಕ ಸಿಇಓ ಗಾಯತ್ರಿ ಚಾಲನೆ ನೀಡಿದರು ನಂತರ ಅವರು ಮಾತನಾಡಿ,ಸಿಇಓ ಗಾಯತ್ರಿ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ಬೀದಿಬೀದಿಗಳಲ್ಲಿ ಬಣ್ಣದ ರಂಗೋಲಿಯನ್ನು ಚಿತ್ರಿಸುವ ಮೂಲಕ ಮತ್ತು ಎಸ್ ಬಿ ಎಂ ವಾಹನದ ಮೂಲಕ ಸದಸ್ಯರು ಮನೆ ಮನೆಗೆ ತೆರಳಿ ಮತಗಟ್ಟೆ ಮತ್ತು ಮತಗಟ್ಟೆಯಲ್ಲಿ ಕೈಗೊಂಡಿರುವ ಸೌಲಭ್ಯಗಳು ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಲ್ಲ ಸಾರ್ವಜನಿಕರು  ಮತದಾನದಲ್ಲಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆ ಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು

ತಾಲೂಕು ದಂಡಾಧಿಕಾರಿ ಗೀತಾ ರವರು ಮಾತಾಡಿ ನಿರ್ಭೀತಿ ಮತ್ತು ಭಯ ರಹಿತವಾದ ಮತದಾನ ಮಾಡಲು ಜನರಿಗೆ ತಾಲೂಕು ಆಡಳಿತ ಮತ್ತು ಸ್ವೀಪ್ ಸಮಿತಿ ವತಿಯಿಂದ ಜಾಥಾ ಆಯೋಜಿಸಲಾಗಿದೆ ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತದಾನ ಕೇಂದ್ರಗಳಲ್ಲಿ  ಮತದಾನವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಿ ಹೆಚ್ಚಿದ ಹೆಚ್ಚಿನ ಮತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ ಶೇಕಡ 80ಕ್ಕಿಂತ ಹೆಚ್ಚು ಮತದಾನ ಮಾಡಲು ತಾಲೂಕು ಆಡಳಿತ ಸಂಪೂರ್ಣವಾದ ಕ್ರಮವನ್ನು ವಹಿಸುತ್ತಿದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು

ತಾಲೂಕು ಸ್ವಿಪ್ ಸಮಿತಿಯ ಅಧ್ಯಕ್ಷರು ಆದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣರವರು ಮಾತನಾಡಿ ಕಳೆದ ಚುನಾವಣೆಯಲ್ಲಿ ಟಿ ನರಸೀಪುರ ತಾಲೂಕಿನಲ್ಲಿ 77%ರಷ್ಟು ಮತದಾನವಾಗಿತ್ತು.ಮತದಾನ ಹೆಚ್ಚಿಸುವ ದೃಷ್ಟಿಯಿಂದ ಸ್ವಿಪ್ ಸಮಿತಿ ವತಿಯಿಂದ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತಿದೆ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಎಸ್ ಬಿ ಎಂ ವಾಹನಗಳ ಮೂಲಕ ಪ್ರಚಾರ ಮಾಡಿ ಜಾಗೃತಿ ಮೂಡಿಸುವುದು ಗ್ರಾಮ ಪಂಚಾಯತಿ ಎಲ್ಲಾ ಗ್ರಾಮಗಳಲ್ಲೂ ಮತದಾನ ಜಾಗೃತಿ ಜಾಥಾ ಆಯೋಜನೆ  ಮತದಾನ ಕೇಂದ್ರಗಳು ಮತ್ತು  ಸಾರ್ವಜನಿಕ ಸ್ಥಳಗಳಲ್ಲಿ, ಮತದಾನ ಪ್ರೇರೇಪಿಸುವ  ಗೋಡೆ ಬರಹ ಬಾರಿಸುವ ಮೂಲಕ ಹೆಚ್ಚಿನ ಮತದಾನ ಜಾಗೃತಿ ಜಾಗೃತಿ ಮೂಡಿಸಿ ಮತದಾನ ಮಾಡಲು ಪ್ರೇರೇಪಿಸಲಾಗುತ್ತದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತರು ದೇವರಾಜು,ಸಿಡಿಪಿಒ ಭವ್ಯ ಶ್ರೀ ಮುಂತಾದವರು ಹಾಜರಿದ್ದರು.