ಮನೆ ರಾಜ್ಯ ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಇಂದು ಹದಿನಾರು ನಾಮಪತ್ರ ಸ್ವೀಕಾರ

ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಇಂದು ಹದಿನಾರು ನಾಮಪತ್ರ ಸ್ವೀಕಾರ

0

ಮೈಸೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023 ಕಾವು ರಂಗೇರಿದ್ದು, ಮೈಸೂರು ವಿಧಾನ ಸಭಾ ಕ್ಷೇತ್ರವಾರು ಇಂದು 16 ನಾಮಪತ್ರಗಳು ಸ್ವಿಕೃತವಾಗಿದೆ.

Join Our Whatsapp Group

ಪಿರಿಯಾಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್, ಪಕ್ಷೇತರ ಅಭ್ಯರ್ಥಿ ಆರ್. ತುಂಗಾ ಶ್ರೀನಿವಾಸ್, ಕೆ.ಆರ್.ನಗರ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರಸಮಿತಿಯ ಪರಮೇಶ್, ಹುಣಸೂರು ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಬೀರೇಶ್, ತಿಮ್ಮಾಬೋವಿ ನಾಮಪತ್ರ ಸಲ್ಲಿಸಿದ್ದಾರೆ.

ಹೆಗ್ಗಡದೇವನ ಕೋಟೆಯ ಬಿಜೆಪಿ ರೂಪಾ.ಎಸ್, ಚಾಮುಂಡೇಶ್ವರಿ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್.ಪ್ರವೀಣ್, ಕೃಷ್ಣರಾಜ ಕ್ಷೇತ್ರದಿಂದ ಎಸ್‌ಯುಸಿಐಸಿನ ಪಿ.ಎಸ್.ಸಂಧ್ಯಾ, ಕರ್ನಾಟಕ ರಾಷ್ಟ್ರ ಸಮಿತಿಯ ಸೋಮಸುಂದರ ಕೆ.ಎಸ್, ಉತ್ತಮ ಪ್ರಜಾಕೀಯ ಪಾರ್ಟಿ ಸುಮಲತಾ.ಎಸ್, ನರಸಿಂಹರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಧರ್ಮಶ್ರೀ, ಕರ್ನಾಟಕ ರಾಷ್ಟ್ರ ಸಮಿತಿ ಸುಂದರ ಪ್ರೇಮ್ ಕುಮಾರ್, ಜನತಾದಳ(ಸೆಕ್ಯೂಲರ್) ಪಕ್ಷದಿಂದ ಅಯೂಬ್ ಖಾನ್, ಎಸ್’ಡಿಪಿಐನಿಂದ ಅಬ್ದುಲ್ ಮಜೀದ್ ಕೆ.ಎಚ್, ಹಾಗೂ ವರುಣದಿಂದ ಕರ್ನಾಟಕ ರಾಷ್ಟ್ರಸಮಿತಿ ರವಿಕುಮಾರ್ ಎಂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಟಿ ನರಸೀಪುರ, ಚಾಮರಾಜ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣೆ ಅಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.