ಮನೆ ಮನರಂಜನೆ ನಾಲ್ಕೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಜೇಮ್ಸ್ ಚಿತ್ರ

ನಾಲ್ಕೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಜೇಮ್ಸ್ ಚಿತ್ರ

0

ಬೆಂಗಳೂರು: ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ ಜೇಮ್ಸ್ ‘ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದ್ದು, ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.

ಪುನೀತ್ ರಾಜ್ ಕುಮಾರ್ ಅವರ ಹುಟ್ಟಹಬ್ಬವಾದ ಮಾರ್ಚ್ 17 ರಂದು ವಿಶ್ವದಾದ್ಯಂತ ನಾಲ್ಕು ಸಾವಿರ ಪರದೆಗಳಲ್ಲಿ ತೆರೆ ಕಂಡಿದ್ದ ‘ಜೇಮ್ಸ್ ‘ ಚಿತ್ರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಈ ಚಿತ್ರ  ಭಾವನಾತ್ಮಕವಾಗಿ ಪುನೀತ್ ಅಭಿಮಾನಿಗಳನ್ನು ಹೆಚ್ಚು ಸೆಳೆದಿದ್ದು, ಕೊನೆಯ ಬಾರಿಗೆ ತೆರೆಯ ಮೇಲೆ ತನ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಐಎಂಡಿಬಿ ರೇಟಿಂಗ್ಸ್ ನಲ್ಲಿಯೂ ಬಾಲಿವುಡ್ ಚಿತ್ರ ” ದಿ ಕಾಶ್ಮೀರ್ ಫೈಲ್ಸ್ ”  ಚಿತ್ರವನ್ನು ಮೀರಿಸಿರುವ ಜೇಮ್ಸ್ ಚಿತ್ರಕ್ಕೆ ಸರ್ಕಾರ ತೆರಿಗೆ ನೀಡಬೇಕೆಂಬ ಬೇಡಿಕೆಯೂ ಇದೆ.

 ಚೇತನ್ ಕುಮಾರ್ ನಿರ್ದೇಶನದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ” ಜೇಮ್ಸ್ ಚಿತ್ರ, ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಬಾಚಿರುವ ಮಾಹಿತಿಯನ್ನು ಸ್ಯಾಂಡಲ್ ವುಡ್ ಎಂಟರ್ ಟೈನ್ ಮೆಂಟ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ನಿರ್ದೇಶಕ ಚೇತನ್ ಕುಮಾರ್ ಕೂಡಾ ರೀ ಟ್ವೀಟ್ ಮಾಡಿದ್ದಾರೆ.